ETV Bharat / bharat

ಕೊರೊನಾ ಓಡಿಸಲು ಗೋವಿನ ಸಗಣಿ ಧೂಪ, ಶಂಖ ಹಿಡಿದು ಕೊಳಗೇರಿ ಸುತ್ತಿದ ಬಿಜೆಪಿ ಮುಖಂಡ.. ವಿಡಿಯೋ

author img

By

Published : May 19, 2021, 7:35 PM IST

ಈ ಧೂಪಕ್ಕೆ ಗೋವಿನ ಸಗಣಿ ಹಾಗೂ ತುಪ್ಪವನ್ನು ಸಹ ಬೆರೆಸಿದ್ದು, ಬೆಂಕಿಗಾಗಿ ಮಾವಿನ ಮರದ ಕಟ್ಟಿಗೆ ಬಳಸಿದ್ದೇವೆ, ಇದರಿಂದ ಕೊರೊನಾ ವೈರಸ್ ಹರಡುವುದನ್ನು ತಡೆಯುತ್ತೇವೆ..

ಬಿಜೆಪಿ ಮುಖಂಡ
ಬಿಜೆಪಿ ಮುಖಂಡ

ಮೀರತ್ (ಉತ್ತರ ಪ್ರದೇಶ ): ಕೊರೊನಾದಿಂದ ಪಾರಾಗಲು ಜನತೆ ಲಸಿಕೆ ಹಾಕಿಸಿಕೊಳ್ಳಲು ಮುಗಿಬೀಳುತ್ತಿದ್ದರೆ ಇತ್ತ ಮೀರತ್​ನ ಬಿಜೆಪಿ ಮುಖಂಡರೊಬ್ಬರು ಕೈಯಲ್ಲಿ ಶಂಖ, ಜಾಗಟೆ ಹಿಡಿದು ಸಗಣಿ ಧೂಪ ಹಾಕಿ ಸುದ್ದಿಯಾಗಿದ್ದಾರೆ.

ಕೊರೊನಾ ವೈರಸ್​ ನಾಶವಾಗಲೆಂದು ಬಿಜೆಪಿ ಮುಖಂಡ ಗೋಪಾಲ್​ ಶರ್ಮಾ ತಳ್ಳುವ ಗಾಡಿಯಲ್ಲಿ ಧೂಪವನ್ನಿಟ್ಟು, ಶಂಖ ಊದಿಕೊಂಡು ಕೊಳಗೇರಿಯಲ್ಲಿ ಹನುಮಾನ ಚಾಲೀಸಾ ಪಠಿಸಿದ್ದಾರೆ.

ಗೋವಿನ ಸಗಣಿ ಧೂಪ, ಶಂಖ ಹಿಡಿದು ಕೊಳಗೇರಿ ಸುತ್ತಿದ ಬಿಜೆಪಿ ಮುಖಂಡ..

ಈ ರೀತಿ ಧೂಪ, ಶಂಖದ ಮೂಲಕ ವಾತಾವರಣದಲ್ಲಿ ಧನಾತ್ಮಕ ಸ್ಥಿತಿ ನಿರ್ಮಾಣವಾಗಲಿದೆಯಂತೆ. ಅಲ್ಲದೆ ಆಮ್ಲಜನಕ ಪ್ರಮಾಣವೂ ಏರಿಕೆಯಾಗಲಿದೆಯಂತೆ.

ಈ ರೀತಿ ಹೇಳಿಕೊಂಡು ಮುಖಂಡರು ಹಾಗೂ ಇವರ ಜೊತೆ ಐದಾರು ಜನ ಸಹ ಹೆಜ್ಜೆ ಹಾಕಿದ್ದಾರೆ. ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಲ್ಲದೆ ಈ ಧೂಪಕ್ಕೆ ಗೋವಿನ ಸಗಣಿ ಹಾಗೂ ತುಪ್ಪವನ್ನು ಸಹ ಬೆರೆಸಿದ್ದು, ಬೆಂಕಿಗಾಗಿ ಮಾವಿನ ಮರದ ಕಟ್ಟಿಗೆ ಬಳಸಿದ್ದೇವೆ, ಇದರಿಂದ ಕೊರೊನಾ ವೈರಸ್ ಹರಡುವುದನ್ನು ತಡೆಯುತ್ತೇವೆ ಎಂದಿದ್ದಾರೆ. ಸದ್ಯ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಸಿಎಂ ನಿಯಮ ಬ್ರೇಕ್ ಮಾಡಿದ್ದಾರೆ: ನಾವು ಲಾಕ್​ಡೌನ್ ರೂಲ್ಸ್​​ ಪಾಲಿಸಲ್ಲ ಎಂದ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.