ಕೋಲ್ಕತ್ತಾ: ಕಳೆದ ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಚಿವ ಸಂಪುಟಕ್ಕೆ ವಿದಾಯ ಹೇಳಿ ತೃಣಮೂಲ ಕಾಂಗ್ರೆಸ್ನ ಹಿರಿಯ ಮುಖಂಡ ಬಿಜೆಪಿ ಸೇರಿಕೊಂಡಿದ್ದರು. ಅವರಿಗೆ ಇದೀಗ Z+ ಭದ್ರತೆ ನೀಡಲಾಗಿದೆ.
ಜನವರಿ 30ರಂದು ಪಶ್ಚಿಮ ಬಂಗಾಳದಿಂದ ನವದೆಹಲಿಗೆ ಆಗಮಿಸಿದ್ದ ರಾಜೀವ್ ಬ್ಯಾನರ್ಜಿ, ಶಾಸಕರಾದ ಬೈಶಾಲಿ ದಾಲ್ಮಿಯಾ, ಪ್ರಬಿರ್ ಘೋಶಾಲ್, ಹೌರಾ ಮೇಯರ್ ರತಿನ್ ಚಕ್ರವರ್ತಿ, ಮಾಜಿ ಶಾಸಕ ರಣಘಟ್ ಪಾರ್ಥಸಾರಥಿ ಚಟರ್ಜಿ ಕಮಲ ಮುಡಿದಿದ್ದರು.
ಓದಿ: ಮಮತಾಗೆ ಬಿಗ್ ಶಾಕ್: ಬಿಜೆಪಿ ಸೇರಿದ ಐವರು ಟಿಎಂಸಿ ನಾಯಕರು!
ಅದರಲ್ಲಿ ರಾಜೀವ್ ಬ್ಯಾನರ್ಜಿಗೆ Z+ ಭದ್ರತೆ ನೀಡಲಾಗಿದ್ದು, ಉಳಿದ ನಾಯಕರಿಗೆ Y+ ಭದ್ರತೆ ನೀಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಬರುವ ಏಪ್ರಿಲ್ - ಮೇ ತಿಂಗಳಲ್ಲಿ 294 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಅನೇಕರು ಟಿಎಂಸಿ ತೊರೆದು ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ.