ETV Bharat / bharat

ರಾಜ್ಯಸಭೆ: ಕನ್ನಡದಲ್ಲಿ ರಾಯರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಟ ಜಗ್ಗೇಶ್​ - ಪ್ರಮಾಣ ವಚನ ಸ್ವೀಕರಿಸಿದ ಜಗ್ಗೇಶ್​

ನೂತನವಾಗಿ ರಾಜ್ಯಸಭೆಗೆ ಆಯ್ಕೆಯಾಗಿರುವ ಸ್ಯಾಂಡಲ್​ವುಡ್ ನಟ ಜಗ್ಗೇಶ್ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಅವರು ಗಮನ ಸೆಳೆದರು.

BJP Jaggesh takes oath
BJP Jaggesh takes oath
author img

By

Published : Jul 8, 2022, 3:02 PM IST

ನವದೆಹಲಿ: ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸ್ಯಾಂಡಲ್​ವುಡ್ ನಟ ಜಗ್ಗೇಶ್​ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅಚ್ಚ ಕನ್ನಡದಲ್ಲೇ ಜಗ್ಗೇಶ್​ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ಎಲ್ಲರ ಗಮನ ಸೆಳೆದಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿದ್ದ ಪೀಠದ ಸಮ್ಮುಖದಲ್ಲಿ ಜಗ್ಗೇಶ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಕನ್ನಡದಲ್ಲಿ ರಾಯರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಟ ಜಗ್ಗೇಶ್​

ಗುರು ರಾಘವೇಂದ್ರರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಅವರು, ಅದರ ವಿಡಿಯೋ ತುಣಕವೊಂದನ್ನ ತಮ್ಮ ಟ್ವೀಟರ್​ ಅಕೌಂಟ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೇಳೆ, ರಾಜ್ಯಸಭೆಯಲ್ಲಿ ಶ್ರದ್ಧೆಯಿಂದ ಪ್ರಮಾಣವಚನ ಸ್ವೀಕಾರ ಮಾಡಿದ್ದೇನೆ. ಸಿರಿಗನ್ನಡದಲ್ಲಿ ರಾಯರ ಹೆಸರಲ್ಲಿ ಸ್ವೀಕರಿಸಿದ ನನ್ನ ಬದುಕಿನ ಶ್ರೇಷ್ಠಕ್ಷಣ.. ಹೃದಯಪೂರ್ವಕ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

  • ರಾಜ್ಯಸಭೆಯಲ್ಲಿ ಶ್ರದ್ಧೆಯಿಂದ
    ಪ್ರಮಾಣವಚನ ಸಿರಿಗನ್ನಡದಲ್ಲಿ
    ರಾಯರ ಹೆಸರಲ್ಲಿ ಸ್ವೀಕರಿಸಿದ ನನ್ನ ಬದುಕಿನ ಶ್ರೇಷ್ಠಕ್ಷಣ...
    ಹೃದಯಪೂರ್ವಕ ಧನ್ಯವಾದ @narendramodi@BJP4Karnataka @BSBommai @blsanthosh @nalinkateel @arunbpbjp ರವರಿಗೆ🙏 pic.twitter.com/CCppTvZrmD

    — ನವರಸನಾಯಕ ಜಗ್ಗೇಶ್ (@Jaggesh2) July 8, 2022 " class="align-text-top noRightClick twitterSection" data=" ">

ಪ್ರಧಾನಿ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್‌ ಕುಮಾರ್‌ ಅವರಿಗೆ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಮಾಡುವುದಕ್ಕೂ ಮುಂಚಿತವಾಗಿ ದೆಹಲಿಯ ಬೃಂದಾವನದಲ್ಲಿ ರಾಯರ ದರ್ಶನ ಪಡೆದುಕೊಂಡಿದ್ದಾರೆ. ಜಗ್ಗೇಶ್ ಜೊತೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಲೆಹರ್ ಸಿಂಗ್ ಕೂಡ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.