ETV Bharat / bharat

ಬಂಗಾಳ ಚುನಾವಣೆ ಗೆಲ್ಲಲು ಬಿಜೆಪಿಯು ಟಿಎಂಸಿಯ 'ದೇಶದ್ರೋಹಿಗಳನ್ನು' ಸೇರಿಸಿಕೊಳ್ಳುತ್ತಿದೆ : ದೀದಿ ಆರೋಪ

ಬಿಜೆಪಿಯವರು ಗಲಭೆ ಬಯಸುತ್ತಾರೆ, ನಮಗೆ ಶಾಂತಿ ಬೇಕು. ಆದ್ದರಿಂದ ನಮ್ಮ ಘೋಷಣೆ ಎಂದರೆ ನಮಗೆ ಬಿಜೆಪಿ ಬೇಡ, ನಮಗೆ ಗಲಭೆ ಬೇಡ, ನಮಗೆ ಭ್ರಷ್ಟಾಚಾರ ಬೇಡ ಮತ್ತು ನಾವು ದೇಶವನ್ನು ಒಡೆಯುವುದನ್ನು ಬಯಸುವುದಿಲ್ಲ. ಲಾಕ್​ಡೌನ್​ ಸಮಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರಿಗೆ ಸಹಾಯ ನೀಡಿಲ್ಲ..

Mamata Banerjee
:ಮಮತಾ ಬ್ಯಾನರ್ಜಿ ಆರೋಪ
author img

By

Published : Feb 5, 2021, 9:52 AM IST

ಕೋಲ್ಕತಾ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಭಾರತೀಯ ಜನತಾ ಪಕ್ಷ ತೃಣಮೂಲ ಕಾಂಗ್ರೆಸ್ ಪಕ್ಷದ ದೇಶದ್ರೋಹಿಗಳನ್ನು ಸೇರಿಸಿಕೊಳ್ಳುವ ಸೂತ್ರ ಅಳವಡಿಸಿಕೊಂಡಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಇಲ್ಲಿನ ಗೀತಾಂಜಲಿ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, "ಟಿಎಂಸಿಯಿಂದ ಕೆಲವು ದೇಶದ್ರೋಹಿಗಳನ್ನು ಕರೆದುಕೊಂಡು ಬಂಗಾಳ ಚುನಾವಣೆ ಗೆಲ್ಲಲು ಕಸರತ್ತು ನಡೆದಿದೆ. ಆದ್ರೆ, ಟಿಎಂಸಿಯಿಂದ ಬಿಜೆಪಿಗೆ ಹೋಗುವವರು ತಾವು ಹೋಗುತ್ತಿರುವುದು ಬಿಜೆಪಿ ದಂಗೆಕೋರರ ಪಕ್ಷಕ್ಕೆ ಎಂಬುದನ್ನು ನೆನಪಿನಲ್ಲಿಡಬೇಕು" ಎಂದು ಹೇಳಿದರು.

ಅಲ್ಲಿಗೆ ಹೋಗುವವರು, ತಮ್ಮ ಅಕ್ರಮ ಆಸ್ತಿಯನ್ನು ಸುರಕ್ಷಿತವಾಗಿರಿಸಿಕೊಳ್ಳಲು ಬಿಜೆಪಿಗೆ ಹೋಗ್ತಿದ್ದಾರೆ. ಟಿಎಂಸಿ ನೇತೃತ್ವದ ರಾಜ್ಯ ಸರ್ಕಾರದ ಕೆಲಸ ಮಾಡುತ್ತಿರುವವರು ಮತ್ತು ಮತದಾರರು ಬಿಜೆಪಿಯನ್ನು ರಾಜ್ಯದಿಂದ ಹೊರಗಿಡಬೇಕು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಯಾಕೆಂದರೆ, ಅವರು ಶಾಂತಿ ಮತ್ತು ಸಾಮರಸ್ಯಕ್ಕೆ ಭಂಗ ತರುತ್ತಾರೆ.

ಬಿಜೆಪಿಯವರು ಗಲಭೆ ಬಯಸುತ್ತಾರೆ, ನಮಗೆ ಶಾಂತಿ ಬೇಕು. ಆದ್ದರಿಂದ ನಮ್ಮ ಘೋಷಣೆ ಎಂದರೆ ನಮಗೆ ಬಿಜೆಪಿ ಬೇಡ, ನಮಗೆ ಗಲಭೆ ಬೇಡ, ನಮಗೆ ಭ್ರಷ್ಟಾಚಾರ ಬೇಡ ಮತ್ತು ನಾವು ದೇಶವನ್ನು ಒಡೆಯುವುದನ್ನು ಬಯಸುವುದಿಲ್ಲ "ಎಂದು ಬ್ಯಾನರ್ಜಿ ಹೇಳಿದರು. ಲಾಕ್​ಡೌನ್​ ಸಮಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರಿಗೆ ಸಹಾಯ ನೀಡಿಲ್ಲ ಎಂದು ದೀದಿ ಆರೋಪಿಸಿದರು.

ಲಾಕ್​ಡೌನ್ ಸಮಯದಲ್ಲಿ ಅನೇಕ ವಲಸೆ ಕಾರ್ಮಿಕರು ಸಾವನ್ನಪ್ಪಿದರು. ಅವರಿಗೆ ಕೇಂದ್ರ ಸರ್ಕಾರ ರೈಲು ಟಿಕೆಟ್​ ಖರ್ಚನ್ನು ಸಹ ನೀಡಲಿಲ್ಲ. ಆದರೆ, ಕೆಲವು ಕಳ್ಳರನ್ನು ವಿಶೇಷ ವಿಮಾನದಲ್ಲಿ ದೆಹಲಿಗೆ ಕರೆದೊಯ್ಯಲು ಸಾಕಷ್ಟು ಹಣವನ್ನು ಖರ್ಚು ಮಾಡಿತು ಎಂದ್ರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ ಸಿಎಂ ಮಮತಾ ಬ್ಯಾನರ್ಜಿ,ಕೇಂದ್ರ ಸಿಎಎ ವಾಪಸ್ ತೆಗೆದುಕೊಂಡಿಲ್ಲವಾದ್ರೆ, ನಾನು ಅದನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳುತ್ತಿದ್ದೇನೆ. ನಾವು ಸಿಎಎಯನ್ನು ಬಂಗಾಳದಲ್ಲಿ ಅನುಮತಿಸುವುದಿಲ್ಲ ಎಂದ್ರು.

ಇನ್ನು, ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಸುವೆಂದು ಅಧಿಕಾರಿ, ರಾಜೀವ್ ​ಬ್ಯಾನರ್ಜಿ ಸೇರಿ ಹಲವಾರು ಟಿಎಂಸಿ ನಾಯಕರು ಬಿಜೆಪಿಗೆ ಸೇರಲು ಪಕ್ಷವನ್ನು ತೊರೆದರು. ಆದರೆ, ಪಶ್ಚಿಮ ಬಂಗಾಳದ 294 ವಿಧಾನಸಭಾ ಸ್ಥಾನಗಳ ಚುನಾವಣೆಯ ವೇಳಾಪಟ್ಟಿಯನ್ನು ಭಾರತದ ಚುನಾವಣಾ ಆಯೋಗ ಇನ್ನೂ ಪ್ರಕಟಿಸಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.