ಇಂದೋರ್ (ಮಧ್ಯಪ್ರದೇಶ): ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಿರುದ್ಧ ಭಾರತೀಯ ಚುನಾವಣಾ ಆಯೋಗಕ್ಕೆ ಕರೆ ನೀಡಲಾಗಿದೆ. ಮಾದರಿ ನೀತಿ ಸಂಹಿತೆ ಮತ್ತು ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಒತ್ತಾಯಿಸಿದೆ.
-
BJP files complaint with ECI over Priyanka Gandhi's 'poll promise' in MP
— ANI Digital (@ani_digital) October 13, 2023 " class="align-text-top noRightClick twitterSection" data="
Read @ANI Story | https://t.co/aoRJJKc7S5#BJP #PriyankaGandhi #ECI #MadhyaPradeshElection2023 pic.twitter.com/RaDPDRB5yF
">BJP files complaint with ECI over Priyanka Gandhi's 'poll promise' in MP
— ANI Digital (@ani_digital) October 13, 2023
Read @ANI Story | https://t.co/aoRJJKc7S5#BJP #PriyankaGandhi #ECI #MadhyaPradeshElection2023 pic.twitter.com/RaDPDRB5yFBJP files complaint with ECI over Priyanka Gandhi's 'poll promise' in MP
— ANI Digital (@ani_digital) October 13, 2023
Read @ANI Story | https://t.co/aoRJJKc7S5#BJP #PriyankaGandhi #ECI #MadhyaPradeshElection2023 pic.twitter.com/RaDPDRB5yF
ಬಿಜೆಪಿಯ ಮಾಜಿ ಕಾನೂನು ಘಟಕದ ಸಂಚಾಲಕ ವಕೀಲ ಪಂಕಜ್ ವಾಧ್ವಾನಿ ಮಾಧ್ಯಮದೊಂದಿಗೆ ಮಾತನಾಡಿ, ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಿರುದ್ಧ ಮಂಡ್ಲಾದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಿಸಿದ್ದಕ್ಕಾಗಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯನ್ನು ಉಲ್ಲೇಖಿಸಿ ದೂರು ದಾಖಲಿಸಲಾಗಿದೆ.
ಶುಕ್ರವಾರ ಚುನಾವಣಾ ಆಯೋಗಕ್ಕೆ ವಕೀಲ ವಧ್ವಾನಿ ದೂರು ನೀಡಿದ್ದು, ದೂರಿನಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರವೂ ಪ್ರಿಯಾಂಕ ಗಾಂಧಿ ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಿಸಿರುವುದು ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಗಾಗಿ ಜನರನ್ನು ಮತಕ್ಕಾಗಿ ಓಲೈಸುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ.
ಮಂಡ್ಲಾ ಜಿಲ್ಲೆಯಲ್ಲಿ ಅಕ್ಟೋಬರ್ 12 ರಂದು ಸಾರ್ವಜನಿಕ ಭಾಷಣ ಕಾರ್ಯಕ್ರಮವೊಂದು ನಡೆದಿದ್ದು ಆ ವೇಳೆ ಪ್ರಿಯಾಂಕಾ ಗಾಂಧಿ 1 ರಿಂದ 12 ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ರೂ 500 ರಿಂದ ರೂ 1,500 ನೀಡುವುದಾಗಿ ಹೇಳಿದ್ದರು. ಈ ಯೋಜನೆಯ ಪ್ಯಾಕೇಜ್ ಒಟ್ಟು 648.80 ಕೋಟಿ ರೂಪಾಯಿ ಆಗಲಿದೆ. ಈ ಘೋಷಣೆ ಮಾದರಿ ಸಂಹಿತೆಯ ಉಲ್ಲಂಘನೆ ಮತ್ತು ಜನರನ್ನು ಮತ ನೀಡುವಂತೆ ಪ್ರೇರೇಪಿಸುವುದಾಗಿದೆ. ಅಲ್ಲದೇ ಮಧ್ಯಪ್ರದೇಶ ಪ್ರಾತಿನಿಧ್ಯ ಕಾಯ್ದೆಯ ಉಲ್ಲಂಘನೆಯೂ ಆಗಿದೆ. ಈ ಕುರಿತು ದೂರನ್ನು ನವದೆಹಲಿಯ ನಿರ್ವಚನ ಸದನದಲ್ಲಿ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ದೂರನ್ನು ಪರಿಶೀಲಿಸಿ ತನಿಖೆ ಆರಂಭಿಸಲಾಗಿದೆ ಎಂದು ವಾಧ್ವಾನಿ ತಿಳಿಸಿದ್ದಾರೆ.
ನವೆಂಬರ್ 17 ರಂದು ವಿಧಾನಸಭೆ ಚುನಾವಣೆ: ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಯ ಮೂಲಕ ರಾಜ್ಯವು 230 ವಿಧಾನಸಭಾ ಕ್ಷೇತ್ರಗಳಿಂದ ಶಾಸಕರನ್ನು ಆಯ್ಕೆ ಮಾಡಲಿದೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. (ಎಎನ್ಐ)
ಇನ್ನು ಈಗಾಗಲೇ ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿದೆ. ನವೆಂಬರ್ 17 ರಂದು ಮಧ್ಯಪ್ರದೇಶ, ನವೆಂಬರ್ 7ಕ್ಕೆ ಮಿಜೋರಾಂ ಮತ್ತು ಛತ್ತೀಸ್ಗಢ, ನವೆಂಬರ್ 25ಕ್ಕೆ ರಾಜಸ್ಥಾನ, ನವೆಂಬರ್ 30ಕ್ಕೆ ತೆಲಂಗಾಣದಲ್ಲಿ ಮತದಾನ ನಡೆಯಲಿದೆ. ಹಾಗೇ ಇವೆಲ್ಲ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 3 ರಂದು ಪ್ರಕಟವಾಗಲಿದೆ.
ಇದನ್ನೂ ಓದಿ: ಪಂಚರಾಜ್ಯಗಳ ಚುನಾವಣೆ ಘೋಷಣೆ: ಸಿಎಂ, ಮಾಜಿ ಸಿಎಂ, ಸಂಸದ ಹುರಿಯಾಳುಗಳ ಬಿಜೆಪಿ ಪಟ್ಟಿ ಬಿಡುಗಡೆ