ETV Bharat / bharat

ಪಂಚರಾಜ್ಯ ಕದನ: ಅಸ್ಸೋಂನಲ್ಲಿ ಬಿಜೆಪಿಗಿದೆ ಕಠಿಣ ಸವಾಲು - ಅಸ್ಸೋಂ ಚುನಾವಣೆ ಸುದ್ದಿ

ಸದ್ಯ ದೇಶದಲ್ಲಿ ಪಂಚರಾಜ್ಯಗಳ ಚುನಾವಣೆ ನಡೆಯುತ್ತಿದ್ದು, ಇಲ್ಲಿ ಬರುವ ಫಲಿತಾಂಶದತ್ತ ಜನರ ಚಿತ್ತ ನೆಟ್ಟಿದೆ. ಅದರಲ್ಲೂ ಅಸ್ಸೋಂ ನಲ್ಲಿ ಬಿಜೆಪಿ ಅನೇಕ ಕಠಿಣ ಸವಾಲುಗಳನ್ನು ಎದುರಿಸಬೇಕಾಗಿದೆ. ಬಿಜೆಪಿ ಶಾಸಕರ ಕಾರಿನಲ್ಲಿ ಇವಿಎಂ ಯಂತ್ರ ಪತ್ತೆಯಾಗಿರುವುದು ಬಿಜೆಪಿಗೆ ಸಮಸ್ಯೆಗಳನ್ನು ಸೃಷ್ಟಿಸಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಈ ವಿಷಯದ ಬಗ್ಗೆ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಈ ಘಟನೆ ಬಗ್ಗೆ ಭಾರತೀಯ ಜನತಾ ಪಕ್ಷದ ಕೇಂದ್ರ ಮುಖಂಡರಿಂದ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಪಕ್ಷದ ಹೆಚ್ಚಿನ ನಾಯಕರು ಈ ಕುರಿತು ಪ್ರತಿಕ್ರಿಯೆ ನೀಡಲು ಸಹ ನಿರಾಕರಿಸಿದ್ದಾರೆ.

BJP facing a tough challenge in Assam
ಅಸ್ಸೋಂನಲ್ಲಿ ಬಿಜೆಪಿಗೆ ಕಠಿಣ ಸವಾಲುಗಳು
author img

By

Published : Apr 3, 2021, 9:25 AM IST

ಗುವಾಹಟಿ(ಅಸ್ಸೋಂ): ಸದ್ಯ ದೇಶದಲ್ಲಿ ಪಂಚರಾಜ್ಯಗಳ ಚುನಾವಣೆಯತ್ತಲೇ ಎಲ್ಲರ ಚಿತ್ತ ನೆಟ್ಟಿದೆ. ಅದರಲ್ಲೂ ಅಸ್ಸೋಂ ನಲ್ಲಿ ಬಿಜೆಪಿ ಅನೇಕ ಕಠಿಣ ಸವಾಲುಗಳನ್ನು ಎದುರಿಸಬೇಕಾಗಿದೆ. ಕಮಲ ಪಾಳಯದ ಲೀಡರ್​​ ಪ್ರಧಾನಿ ಮೋದಿ, ಹಿರಿಯ ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್, ಜೆಪಿ ನಡ್ಡಾ ಸೇರಿದಂತೆ ಅತಿರಥ- ಮಹಾರಥರೇ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಸಾಂಪ್ರದಾಯಿಕ ಕಾಂಗ್ರೆಸ್ ಮತದಾರರನ್ನ ಕಮಲ ಪಡೆಯತ್ತ ಸೆಳೆಯುವತ್ತ ಚಿತ್ತ ನೆಟ್ಟಿದ್ದಾರೆ.

ಈ ಸಾಂಪ್ರದಾಯಿಕ ಕಾಂಗ್ರೆಸ್ ಮತದಾರರನ್ನು ತನ್ನತ್ತ ಸೆಳೆಯಲು ಭಾರತೀಯ ಜನತಾ ಪಕ್ಷ ತಂತ್ರಗಳನ್ನು ಹೆಣೆಯುತ್ತಿದೆ. ಧರ್ಮದ ಹೆಸರಿನಲ್ಲಿ ಕಾಂಗ್ರೆಸ್ ಹೇಗೆ ವಿಭಜನೆಯನ್ನು ಸೃಷ್ಟಿಸಿದೆ ಮತ್ತು ಅಸ್ಸೋಂನ ಜನರ ಹಕ್ಕುಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ಬಿಜೆಪಿ ಸರ್ಕಾರ ಒಳನುಸುಳುವಿಕೆಯನ್ನು ಹೇಗೆ ತಡೆಯಿತು ಎಂಬುದರ ಕುರಿತು ಪ್ರಧಾನಿ ಮೋದಿ ಗುರುವಾರ ತಮ್ಮ ಭಾಷಣದಲ್ಲಿ ಹೇಳಿದರು.

ಇದನ್ನೂ ಓದಿ: ಕೇರಳದಲ್ಲಿ ಯುಡಿಎಫ್-ಎಲ್​ಡಿಎಫ್ ಎರಡೂ ಅವಳಿ-ಜವಳಿ ಇದ್ದಂತೆ: ಮೋದಿ ವಾಗ್ದಾಳಿ

ಬಿಜೆಪಿ ಶಾಸಕರ ಕಾರಿನಲ್ಲಿ ಇವಿಎಂ ಯಂತ್ರ ಪತ್ತೆಯಾಗಿರುವುದು ಬಿಜೆಪಿಗೆ ಸಮಸ್ಯೆಗಳನ್ನು ಸೃಷ್ಟಿಸಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿ ಪಕ್ಷಗಳು ಈ ವಿಷಯದ ಬಗ್ಗೆ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಈ ಘಟನೆ ಬಗ್ಗೆ ಭಾರತೀಯ ಜನತಾ ಪಕ್ಷದ ಕೇಂದ್ರ ಮುಖಂಡರಿಂದ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಪಕ್ಷದ ಹೆಚ್ಚಿನ ನಾಯಕರು ಈ ಕುರಿತು ಪ್ರತಿಕ್ರಿಯೆ ನೀಡಲು ಸಹ ನಿರಾಕರಿಸಿದ್ದಾರೆ.

ಮತ್ತೊಂದೆಡೆ, ಅಸ್ಸೋಂನಲ್ಲಿ ಬಾಂಗ್ಲಾದೇಶದ ಒಳನುಸುಳುವವರು ಮತ್ತು ಸಿಎಎ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸುವುದು ಬಿಜೆಪಿಯ ಕಾರ್ಯತಂತ್ರವಾಗಿದೆ. ಪಕ್ಷದ ಹಲವಾರು ನಾಯಕರು ತಮ್ಮ ಚುನಾವಣಾ ಭಾಷಣಗಳಲ್ಲಿ ಈ ವಿಷಯಗಳ ಬಗ್ಗೆ ಗಮನ ಹರಿಸುತ್ತಿರುವುದು ಗಮನಾರ್ಹವಾಗಿದೆ.

ಇದನ್ನೂ ಓದಿ: ತನಿಖಾ ಸಂಸ್ಥೆಗಳಿಂದ ದಾಳಿ ನಡೆಸುವುದು ಬಿಜೆಪಿ ಕಾರ್ಯವಿಧಾನ: ರಾಹುಲ್ ವ್ಯಂಗ್ಯ

ಐದು ವರ್ಷಗಳ ಹಾದಿಯಲ್ಲಿ, ಒಳನುಸುಳುವಿಕೆಯ ವಿಷಯ ಎತ್ತಿರುವುದರಿಂದಲೇ ಕಳೆದ ಬಾರಿ ಅಸ್ಸೋಂನಲ್ಲಿನ ಭಾರತೀಯ ಜನತಾ ಪಕ್ಷದ ಐತಿಹಾಸಿಕ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಪಕ್ಷವು ಚಹಾ ತೋಟದ ಕಾರ್ಮಿಕರ ಸಮಸ್ಯೆಗಳ ಮೇಲೆಯೇ ತನ್ನ ಲಕ್ಷ್ಯವನ್ನ ಕೇಂದ್ರೀಕರಿಸಿದೆ. ಬದ್ರುದ್ದೀನ್ ಅಜ್ಮಲ್ ಅವರ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಇದಲ್ಲದೇ, ಈಶಾನ್ಯದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಮಾಡಿದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಲಾಭ ಮಾಡಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ.

ಬಂಗಾಳ, ಅಸ್ಸೋಂ, ತಮಿಳುನಾಡು, ಕೇರಳ ಅಥವಾ ಪುದುಚೇರಿ ಎಲ್ಲ ಚುನಾವಣೆಗಳನ್ನು ಬಿಜೆಪಿ ಸವಾಲಾಗಿ ತೆಗೆದುಕೊಂಡರೂ ಮಾಧ್ಯಮಗಳು ಬಂಗಾಳದತ್ತ ಹೆಚ್ಚು ಗಮನ ಹರಿಸಿವೆ. ಬಿಜೆಪಿಗೆ ಸಂಬಂಧಿಸಿದಂತೆ, ಇತರ ರಾಜ್ಯಗಳೂ ಸಹ ಅಷ್ಟೇ ಮುಖ್ಯ. ಬಿಜೆಪಿಯ ಹಿರಿಯ ಮುಖಂಡರಿಂದ ಹಿಡಿದು ಪ್ರಧಾನಮಂತ್ರಿಯವರೆಗೆ ಪುದುಚೇರಿಗೆ ತಮಿಳುನಾಡು ಮತ್ತು ಕೇರಳದಷ್ಟೇ ಪ್ರಾಮುಖ್ಯತೆ ನೀಡಲಾಗಿದೆ.

ಇದನ್ನೂ ಓದಿ: 'ನಮ್ಮ ಕ್ಷೇತ್ರಗಳಲ್ಲಿ ಕ್ಯಾಂಪೇನ್‌ ಮಾಡಿ': ಮೋದಿಗೆ ಡಿಎಂಕೆ ಅಭ್ಯರ್ಥಿಗಳ ವಿಚಿತ್ರ ಬೇಡಿಕೆ!

ಸಿಎಎ ಮತ್ತು ಎನ್‌ಆರ್‌ಸಿ ಅಸ್ಸೋಂ ಚುನಾವಣೆಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ಪ್ರಶ್ನೆಗಳಿಗೆ ರಾಜಕೀಯ ವಿಶ್ಲೇಷಕ ದೇಶ್ ರತನ್ ನಿಗಮ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಸಿಎಎ ವಿಷಯಕ್ಕೆ ಸಂಬಂಧಿಸಿದಂತೆ, ಅಸ್ಸೋಂನ ಜನರು ಭಾರತಕ್ಕೆ ಸೇರಿದವರು. ಹೇಗಾದರೂ, ಇತರ ದೇಶಗಳಲ್ಲಿ ಶೋಷಣೆಗೆ ಒಳಗಾಗುತ್ತಿರುವ ಹಿಂದೂ ನಿರಾಶ್ರಿತರು ತಮ್ಮ ದೇಶದಲ್ಲಿ ಬಂದು ನೆಲೆಸಬೇಕೆಂದು ಅವರು ಬಯಸುತ್ತಾರೆ. ಆದರೆ, ಒಳನುಸುಳುವಿಕೆಗೆ ಸಂಬಂಧಿಸಿದಂತೆ, ಇದು ಅಸ್ಸೋಂನ ಸಂಸ್ಕೃತಿಗೆ ಅಪಾಯವಾಗಿದೆ. ಆದ್ದರಿಂದ ಎನ್ಆರ್​ಸಿ ದೇಶದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅಸ್ಸೋಂನ ಬಿಜೆಪಿಗೆ ಎನ್ಆರ್​ಸಿ ವಿಷಯವು ಮಹತ್ವದ್ದಾಗಿದೆ ಎಂದು ನಾನು ಭಾವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.