ETV Bharat / bharat

14 ವಿಧಾನಸಭೆ, 2 ಲೋಕಸಭಾ ಉಪ ಚುನಾವಣೆಗಳಲ್ಲಿ ಸೋತ ನಂತ್ರ ತೈಲ ಬೆಲೆ ಇಳಿಕೆ: ಕಾಂಗ್ರೆಸ್‌ ಆರೋಪ - ರಂದೀಪ್‌ ಸುರ್ಜೇವಾಲ

ಇಂದಿನಿಂದ ಜಾರಿಗೆ ಬರುವಂತೆ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ ಅಬಕಾರಿ ಸುಂಕ ಕಡಿತ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ಮುಂದುವರಿಸಿದ್ದು, ಉಪ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ಬಳಿಕ ತೈಲ ಬೆಲೆ ಇಳಿಸಿದ್ದಾರೆ ಎಂದು ಆರೋಪಿಸಿದೆ.

BJP cornered in bypolls reduced excise duty on fuel: Cong
14 ವಿಧಾನಸಭೆ, 2 ಲೋಕಸಭಾ ಉಪ ಚುನಾವಣೆಗಳಲ್ಲಿ ಸೋತ ನಂತ್ರ ತೈಲ ಬೆಲೆ ಇಳಿಕೆ: ಕಾಂಗ್ರೆಸ್‌
author img

By

Published : Nov 4, 2021, 6:15 PM IST

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದ್ದು, ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಳಪೆ ಸಾಧನೆ ತೋರಿದ್ದರಿಂದಲೇ ತೈಲ ಬೆಲೆ ಇಳಿಸುವ ನಿರ್ಧಾರಕ್ಕೆ ಬಂದಿದೆ ಎಂದು ಆರೋಪಿಸಿದೆ.

ಲೋಕಸಭೆಯ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಈ ಬಗ್ಗೆ ಟ್ವೀಟ್‌ ಮಾಡಿದ್ದು, ಉಚಿತವಾಗಿ ಕೋವಿಡ್‌ ಲಸಿಕೆ ನೀಡಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಹೆಚ್ಚಿಸಲಾಗಿದೆ ಎಂದು ಹಲವು ತಿಂಗಳುಗಳಿಂದ ಹೇಳಿಕೊಂಡು ಬಂದ ಬಿಜೆಪಿ ತಮ್ಮ ಬೂಟಾಟಿಕೆ ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ತೈಲ ಬೆಲೆ ಕೊಂಚ ಇಳಿಕೆಯಾಗಿರುವುದು ದೇಶದ ಜನರಿಗೆ ಸಣ್ಣ ರಿಲೀಫ್‌ ಸಿಕ್ಕಿದೆ ಅಂತ ಹೇಳಿದ್ದಾರೆ.

  • After months of claiming that rise in duty of petrol and diesel was to pay for free vaccines, the BJP had to swallow their hypocrisy and partially roll back prices. The people of India have got a minor reprieve. This a day after @RahulGandhi attacked the Govt. over inflation.🙏🏻

    — Gaurav Gogoi (@GauravGogoiAsm) November 4, 2021 " class="align-text-top noRightClick twitterSection" data=" ">

ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೇವಾಲ, ಟ್ಯಾಕ್ಸ್-ಪರಾವಲಂಬಿ ಮೋದಿ ಸರ್ಕಾರಕ್ಕೆ ಸತ್ಯದ ಕನ್ನಡಿ ತೋರಿಸಿದ್ದಕ್ಕಾಗಿ ಜನರಿಗೆ ಅಭಿನಂದನೆಗಳು! ಆದರೆ ನೆನಪಿಡಿ - 14 ಉಪಚುನಾವಣೆಗಳು ಮತ್ತು 2 ಲೋಕಸಭೆಗಳಲ್ಲಿ ಸೋತ ನಂತರ ಲೀಟರ್‌ ಮೇಲೆ ಪೆಟ್ರೋಲ್ 5 ರೂ., ಡೀಸೆಲ್ ಮೇಲೆ 10 ರೂಪಾಯಿ ಇಳಿಸಿ ಮೋದಿಜಿ ದೀಪಾವಳಿ ಉಡುಗೊರೆಯಾಗಿ ನೀಡಿದ್ದಾರೆ ಎಂದು ಸರಣಿ ಟ್ವೀಟ್‌ ಮಾಡಿದ್ದಾರೆ. 2014ರ ಮೇನಲ್ಲಿ ಪೆಟ್ರೋಲ್ 71.41 ರೂ., ಡೀಸೆಲ್ 55.49 ರೂ. ಆದರೆ ಕಚ್ಚಾ ತೈಲ ಬ್ಯಾಲರ್‌ಗೆ 105.71 ಇತ್ತು ಎಂದಿದ್ದಾರೆ.

  • 3/3
    Pl see the Jumlas of “Modi-nomics”!

    In Year 2021, Price of Petrol were hiked by ₹28 & Diesel by ₹26/litre.

    After losing 14 bye elections & 2 Lok Sabhas, reducing Petrol-Diesel price by ₹5 & ₹10 is tom-tommed as ‘Diwali Gift’ of Modi Ji!

    Hey Ram…..#Petrol#Diesel

    — Randeep Singh Surjewala (@rssurjewala) November 3, 2021 " class="align-text-top noRightClick twitterSection" data=" ">

ಸದ್ಯ ಅಬಕಾರಿ ಸುಂಕ ಕಡಿತಗೊಳಿಸಿದ ನಂತರ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್ ಬೆಲೆ 110.04 ರಿಂದ 103.97 ರೂ.ಗೆ ಇಳಿದಿದೆ. 98.42 ರೂಪಾಯಿ ಇದ್ದ ಲೀಟರ್‌ ಡೀಸೆಲ್‌ 86.67ಕ್ಕೆ ತಲುಪಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ 115.85 ರಿಂದ Rs109.98 ಕ್ಕೆ ಇಳಿದರೆ, ಡೀಸೆಲ್ ಲೀಟರ್‌ಗೆ 106.62 ರಿಂದ 94.14ಕ್ಕೆ ತಗ್ಗಿದೆ. ದೇಶದ ಎಲ್ಲಾ ಮಹಾನಗರಗಳಿಗಿಂತ ಇದು ಅಧಿಕವಾಗಿದೆ.

ಇಂದಿನಿಂದ ಜಾರಿಗೆ ಬರುವಂತೆ ಲೀಟರ್‌ ಪೆಟ್ರೋಲ್‌ ಬೆಲೆಯಲ್ಲಿ 5 ರೂ. ಹಾಗೂ ಡೀಸೆಲ್‌ ಮೇಲೆ 10 ರೂ. ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಘೋಷಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.