ಕೋಲ್ಕತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಡಿ.27ರಂದು ಜಿಲ್ಲಾ ವೀಕ್ಷಕರು ಮತ್ತು ಜಿಲ್ಲಾ ಸಹ ವೀಕ್ಷಕರನ್ನು ನೇಮಕ ಮಾಡಿದ್ದಾರೆ.
ಕೋಲ್ಕತಾ ವಲಯಕ್ಕೆ ಸಂಬಂಧಿಸಿದಂತೆ ಸೋವನ್ ಚಟರ್ಜಿಯನ್ನು ವೀಕ್ಷಕರಾಗಿ ನೇಮಕ ಮಾಡಿದ್ರೆ, ಡೆಬ್ಜಿತ್ ಸರ್ಕಾರ್ ಅವರನ್ನು ಸಂಯೋಜಕನಾಗಿ ನೇಮಿಸಲಾಗಿದೆ. ಕೋಲ್ಕತಾ ವಲಯದ ಬಿಜೆಪಿಯ ಸಹ-ಸಂಯೋಜಕನಾಗಿ ಬೈಸಾಖಿ ಬ್ಯಾನರ್ಜಿ ಮತ್ತು ಶಂಕುದೇಬ್ ಪಾಂಡಾ ಅವರನ್ನು ನೇಮಿಸಲಾಗಿದೆ.
ಇದನ್ನು ಓದಿ: ದೇಶದ ಮೊದಲ ಚಾಲಕರಹಿತ ರೈಲು ಸೇವೆಗೆ ಇಂದು ಮೋದಿ ಚಾಲನೆ
ರಹ್ ಬಂಗಾ ವಲಯದ ಸಹವೀಕ್ಷಕರಾಗಿ ನಿರ್ಮಲ್ ಕರ್ಮಕರ್ ಅವರನ್ನು ಬಿಜೆಪಿ ನೇಮಿಸಿದೆ. ಕೂಚ್ ಬೆಹಾರ್ ಜಿಲ್ಲಾ ವೀಕ್ಷಕರಾಗಿ ಡಿಪೆನ್ ಪ್ರಮಾಣಿಕ್, ಡಾರ್ಜಿಲಿಂಗ್ ಜಿಲ್ಲಾ ವೀಕ್ಷಕರಾಗಿ ಭಾಸ್ಕರ್ ದೆ, ದಕ್ಷಿಣ ದಿನಾಜ್‌ಪುರ ಜಿಲ್ಲಾ ವೀಕ್ಷಕರಾಗಿ ಅಮಿತವ ಮೈತ್ರಾ, ಉತ್ತರ ಮುರ್ಷಿದಾಬಾದ್ ಜಿಲ್ಲಾ ವೀಕ್ಷಕರಾಗಿ ಮನಬೇಂದ್ರ ಚಕ್ರವರ್ತಿ, ಉತ್ತರ ನಾಡಿಯಾ ಆಗಿ ಗೋಪಾಲ್ ಸರ್ಕಾರ್, ಪ್ರದೀಪ್ ಬ್ಯಾನರ್ಜಿ ಮತ್ತು ಉತ್ತರ ಕೋಲ್ಕತಾ ಜಿಲ್ಲಾ ವೀಕ್ಷಕರಾಗಿ ಮನಸ್ ಭಟ್ಟಾಚಾರ್ಯರನ್ನು ನೇಮಕ ಮಾಡಲಾಗಿದೆ.
ಡೈಮಂಡ್ ಹಾರ್ಬರ್‌ನ ಜಿಲ್ಲಾ ವೀಕ್ಷಕರಾಗಿ ಸುಭನಾರಾಯಣ್, ಝರ್ಗಾರಾಮ್‌ಗೆ ವೀಕ್ಷಕರಾಗಿ ಸ್ವಪನ್ ಪಾಲ್, ಬರ್ಧಮಾನ್ ಜಿಲ್ಲಾ ವೀಕ್ಷಕರಾಗಿ ರಾಮಕೃಷ್ಣ ಪಾಲ್, ಅಸನ್ಸೋಲ್ ಜಿಲ್ಲೆ ವೀಕ್ಷಕರಾಗಿ ರಾಮಕೃಷ್ಣ ರಾಯ್, ಅರಂಬಾಗ್ ಜಿಲ್ಲಾ ವೀಕ್ಷಕರಾಗಿ ಡೆಬಶಿಶ್ ಮಿತ್ರರನ್ನು ನೇಮಿಸಲಾಗಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದೆ.