ಜೈಪುರ (ರಾಜಸ್ಥಾನ): ಇಲ್ಲಿನ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಅವರು ಆಯ್ಕೆ ಆಗಿದ್ದಾರೆ. ಸಂಗನೇರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಭಜನ್ ಲಾಲ್ ಶರ್ಮಾ ಚುನಾಯಿತರಾಗಿದ್ದರು. ದಿಯಾ ಕುಮಾರಿ ಮತ್ತು ಪ್ರೇಮಚಂದ್ ಬೈರ್ವಾ ಉಪ ಮುಖ್ಯಮಂತ್ರಿಗಳಾಗಿದ್ದಾರೆ. ಅಜ್ಮೀರ್ ಉತ್ತರ ಶಾಸಕ ವಾಸುದೇವ್ ದೇವನಾನಿ ಅವರನ್ನು ವಿಧಾನಸಭೆ ಸ್ಪೀಕರ್ ಮಾಡಲಾಗಿದೆ.
ಪಂಚರಾಜ್ಯ ಚುನಾವಣೆಯಲ್ಲಿ ಮೂರರಲ್ಲಿ ಗೆಲುವು ಸಾಧಿಸಿದ ಭಾರತೀಯ ಜನತಾ ಪಾರ್ಟಿ ಎಲ್ಲ ಕಡೆ ಹೊಸ ಮುಖಕ್ಕೆ ಅವಕಾಶ ಮಾಡಿಕೊಟ್ಟಿದೆ. ಛತ್ತೀಸ್ಗಢದಲ್ಲಿ ವಿಷ್ಣುದೇವ್ ಮತ್ತು ಮಧ್ಯಪ್ರದೇಶದಲ್ಲಿ ಮೋಹನ್ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಲಾಗಿತ್ತು. ರಾಜಸ್ಥಾನದಲ್ಲಿ ಸಿಎಂ ಸ್ಥಾನಕ್ಕೆ ಹೆಚ್ಚಿನ ಆಕಾಂಕ್ಷಿಗಳಿದ್ದರು. ಅವರೆಲ್ಲರನ್ನೂ ಹಿಂದಿಕ್ಕಿ ಭಜನ್ ಲಾಲ್ ಶರ್ಮಾ ಪಟ್ಟಕ್ಕೇರಲಿದ್ದಾರೆ.
-
ರಾಜಸ್ಥಾನ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಶ್ರೀ @BhajanlalBjp ಅವರಿಗೆ ಹಾರ್ದಿಕ ಅಭಿನಂದನೆಗಳು.
— BJP Karnataka (@BJP4Karnataka) December 12, 2023 " class="align-text-top noRightClick twitterSection" data="
ನಿಮ್ಮ ಅವಧಿಯಲ್ಲಿ ರಾಜಸ್ಥಾನ ರಾಜ್ಯವು ಅಭಿವೃದ್ಧಿಯ ನವ ಪಥದಲ್ಲಿ ಸಾಗಲಿ.#RajasthanCM pic.twitter.com/TgbOYTMxhd
">ರಾಜಸ್ಥಾನ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಶ್ರೀ @BhajanlalBjp ಅವರಿಗೆ ಹಾರ್ದಿಕ ಅಭಿನಂದನೆಗಳು.
— BJP Karnataka (@BJP4Karnataka) December 12, 2023
ನಿಮ್ಮ ಅವಧಿಯಲ್ಲಿ ರಾಜಸ್ಥಾನ ರಾಜ್ಯವು ಅಭಿವೃದ್ಧಿಯ ನವ ಪಥದಲ್ಲಿ ಸಾಗಲಿ.#RajasthanCM pic.twitter.com/TgbOYTMxhdರಾಜಸ್ಥಾನ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಶ್ರೀ @BhajanlalBjp ಅವರಿಗೆ ಹಾರ್ದಿಕ ಅಭಿನಂದನೆಗಳು.
— BJP Karnataka (@BJP4Karnataka) December 12, 2023
ನಿಮ್ಮ ಅವಧಿಯಲ್ಲಿ ರಾಜಸ್ಥಾನ ರಾಜ್ಯವು ಅಭಿವೃದ್ಧಿಯ ನವ ಪಥದಲ್ಲಿ ಸಾಗಲಿ.#RajasthanCM pic.twitter.com/TgbOYTMxhd
ಭಜನ್ ಲಾಲ್ ಶರ್ಮಾ ಸಂಗನೇರ್ ಕ್ಷೇತ್ರದಿಂದ ಆಯ್ಕೆಯಾದರು. ಶರ್ಮಾ 1,45,162 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಪುಷ್ಪೇಂದ್ರ ಭಾರದ್ವಾಜ್ ಅವರ ವಿರುದ್ಧ 48,081 ಮತಗಳ ಅಂತರದಿಂದ ಗೆಲುವು ದಾಖಲಿಸಿದರು. ಪ್ರಸ್ತುತ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿರುವ ಶರ್ಮಾ ಅವರು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಗ್ರೂಪ್ ಫೋಟೋ ತೆಗೆಸಿಕೊಂಡಿದ್ದು, ಶರ್ಮಾ ಕೊನೆಯ ಸಾಲಿನಲ್ಲಿ ನಿಂತಿದ್ದರು.
"ಕಿರೋಡಿ ಲಾಲ್ ಮೀನಾ, ಮದನ್ ದಿಲಾವರ್ ಮತ್ತು ಇಡೀ ಸಭೆ ಶರ್ಮಾ ಅವರ ಹೆಸರನ್ನು ಬೆಂಬಲಿಸಿದೆ. ಆದ್ದರಿಂದ ಭಜನ್ ಲಾಲ್ ಶರ್ಮಾ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗುತ್ತಾರೆ ಎಂದು ನಾನು ಘೋಷಿಸಿದ್ದೇನೆ. ಭಜನ್ ಲಾಲ್ ಶರ್ಮಾ ಅವರ ಅಡಿ ರಾಜಸ್ಥಾನವು ಅಭಿವೃದ್ಧಿ ಹೊಂದುತ್ತದೆ ಎಂದು ನನಗೆ ಭರವಸೆ ಇದೆ" ಎಂದು ರಾಜನಾಥ್ ಸಿಂಗ್ ಹೇಳಿದರು.
ಸಿಎಂ ಸ್ಥಾನಕ್ಕೆ ಇತ್ತು ಭಾರಿ ಸ್ಪರ್ಧೆ: ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನಕ್ಕೆ ಮಾಜಿ ಸಿಎಂ ವಸುಂಧರಾ ರಾಜೆ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಬಿಜೆಪಿಯ ಹಿರಿಯ ನಾಯಕ ಓಂ ಮಾಥುರ್, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಸಚಿವ ಅರ್ಜುನ್ ಮೇಘವಾಲ್, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ದಿಯಾ ಕುಮಾರಿ, ಬಾಬಾ ಬಾಲಕನಾಥ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸಿಪಿ ಜೋಶಿ ಸ್ಪರ್ದೆಯಲ್ಲಿದ್ದರು.
ಸಂಜೆ 4 ಗಂಟೆಗೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಹೋಟೆಲ್ ಲಲಿತ್ನಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ನೇಮಿಸಿರುವ ವೀಕ್ಷಕರಾದ ರಾಜನಾಥ್ ಸಿಂಗ್, ಸರೋಜ್ ಪಾಂಡೆ, ವಿನೋದ್ ತಾವ್ಡೆ, ಚುನಾವಣಾ ಉಸ್ತುವಾರಿ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ರಾಜ್ಯಾಧ್ಯಕ್ಷ ಸಿ.ಪಿ.ಜೋಶಿ ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಜಸ್ಥಾನದ ಹೊಸ ಸಿಎಂ ಯಾರು?: ಶಾಸಕಾಂಗ ಸಭೆ ಕರೆದ ಬಿಜೆಪಿ, ಇಂದೇ ಅಧಿಕೃತ ಘೋಷಣೆ