ಮುಂಬೈ(ಮಹಾರಾಷ್ಟ್ರ): ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಒಂದೂವರೆ ತಿಂಗಳಿನಿಂದ ನಡೆಯುತ್ತಿದ್ದ ಮಹಾರಾಷ್ಟ್ರ ಸರ್ಕಾರಕ್ಕೆ ಕೊನೆಗೂ ಸಚಿವರನ್ನು ನೇಮಿಸಲಾಗಿದೆ. ಮೈತ್ರಿ ಸರ್ಕಾರದ ಶಿವಸೇನೆಯಿಂದ 9 ಮತ್ತು ಬಿಜೆಪಿಯ 9 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಚಿವರಿಗೆ ಗೌಪ್ಯತೆ ಪ್ರಮಾಣ ಬೋಧಿಸಿದರು.
ಅಸಮಾಧಾನದ ಹೊಗೆ: ಬಿಜೆಪಿ- ಶಿವಸೇನೆ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ವಂಚಿತರಾದ ಆಕಾಂಕ್ಷಿಗಳಿಂದ ಅಸಮಾಧಾನದ ಹೊಗೆ ಎದ್ದಿದೆ. ಇದರಿಂದ ಮುನಿಸಿಕೊಂಡಿರುವ ಶಾಸಕರನ್ನು ಮನವೊಲಿಸುವ ಯತ್ನಗಳು ನಡೆಯುತ್ತಿವೆ.
ಬಿಜೆಪಿ ಸಚಿವರು: ಪಕ್ಷದ ಹಿರಿಯ ಶಾಸಕರಾದ ಚಂದ್ರಕಾಂತ್ ಪಾಟೀಲ್, ಸುಧೀರ್ ಮುಂಗಾಂತಿವಾರ್, ಗಿರೀಶ್ ಮಹಾಜನ್, ರಾಧಾಕೃಷ್ಣ ವಿಖೆ ಪಾಟೀಲ್, ರವೀಂದ್ರ ಚವ್ಹಾಣ್, ವಿಜಯ್ಕುಮಾರ್ ಗವಿತ್, ಅತುಲ್ ಸೇವ್.
ಶಿವಸೇನೆ ಮಂತ್ರಿಗಳು: ದಾದಾ ಭೂಸೆ, ಶಂಭುರಾಜೇ ದೇಸಾಯಿ, ಸಂದೀಪನ್ ಬೂಮ್ರೆ, ಉದಯ್ ಸಮಂತ್, ಅಬ್ದುಲ್ ಸತ್ತಾರ್, ದೀಪಕ್ ಕೇಸರ್ಕರ್, ಗುಲಾಬ್ರಾವ್ ಪಾಟೀಲ್, ಸಂಜಯ್ ರಾಥೋಡ್.
ಓದಿ: ಮಹಾ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್.. ಶಿಂಧೆ ಶಾಸಕರಲ್ಲಿ ಮೂಡಿದ ಅಸಮಾಧಾನದ ಹೊಗೆ, ಸಭೆ ಮೇಲೆ ಸಭೆ!