ETV Bharat / bharat

ತಂದೆ-ಮಗನನ್ನು ಬಲಿ ಪಡೆದ ಹುಟ್ಟುಹಬ್ಬ, ಶಾಲಾ ಆಡಳಿತ ಮಂಡಳಿ? - ಖಮ್ಮಂನಲ್ಲಿ ತಂದೆ ಮಗ ಆತ್ಮಹತ್ಯೆ

ಈ ಘಟನೆಯಿಂದ ಸಾಕಷ್ಟು ನೊಂದಿದ್ದ ತಂದೆ ರಾಂಬಾಬು ಭಾನುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಈ ಕುರಿತಂತೆ ದೂರು ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ..

Birthday Celebrations killed the son and father in khammam district
ತಂದೆ, ಮಗನನ್ನು ಹುಟ್ಟುಹಬ್ಬ ಮತ್ತು ಶಾಲಾ ಆಡಳಿತ ಮಂಡಳಿ?
author img

By

Published : Dec 19, 2021, 9:06 PM IST

Updated : Dec 19, 2021, 9:28 PM IST

ಖಮ್ಮಂ, ತೆಲಂಗಾಣ : ಹುಟ್ಟು ಹಬ್ಬದ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಮಗ ಇಬ್ಬರೂ ಪ್ರಾಣ ಕಳೆದುಕೊಂಡಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ಸತ್ತುಪಲ್ಲಿ ಎಂಬಲ್ಲಿ ನಡೆದಿದೆ.

ಸತ್ತುಪಲ್ಲಿ ನಿವಾಸಿಯಾದ ಚಲ್ಲಾ ರಾಂಬಾಬು ಎಂಬಾತ ತನ್ನ ಮಗನಾದ ಸಾಯಿ ಭಾನುಪ್ರಕಾಶ್​​ನನ್ನು ಖಾಸಗಿ ಶಾಲೆಯೊಂದಕ್ಕೆ ಸೇರಿಸಿದ್ದ. 10ನೇ ತರಗತಿ ಓದುತ್ತಿರುವ ಸಾಯಿ ಭಾನುಪ್ರಕಾಶ್ ಇದೇ ಡಿಸೆಂಬರ್ 14ರಂದು ತನ್ನ ಜನ್ಮದಿನವನ್ನು ಸ್ನೇಹಿತರೊಂದಿಗೆ ಶಾಲೆಯಲ್ಲಿಯೇ ಆಚರಣೆ ಮಾಡಿಕೊಂಡಿದ್ದಾನೆ.

ಈ ವಿಚಾರ ತಿಳಿದ ಶಾಲಾ ಆಡಳಿತ ಮಂಡಳಿ ಭಾನುಪ್ರಕಾಶ್​ನೊಂದಿಗೆ, ಆತನ ತಂದೆಗೂ ಕೂಡ ನಿಂದಿಸಿದೆ. ಇಷ್ಟೇ ಅಲ್ಲ, ಒಂದು ವಾರದ ಮಟ್ಟಿಗೆ ಭಾನುಪ್ರಕಾಶ್​ನನ್ನು ಶಾಲೆಯಿಂದ ಸಸ್ಪೆಂಡ್ ಮಾಡಿದೆ.

ಈ ವಿಚಾರದಿಂದ ಮನನೊಂದು ಭಾನುಪ್ರಕಾಶ ಡಿಸೆಂಬರ್ 15ರಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಸ್ಪತ್ರೆ ಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಭಾನುಪ್ರಕಾಶ್ ಮೃತಪಟ್ಟಿದ್ದಾನೆ.

ಈ ಘಟನೆಯಿಂದ ಸಾಕಷ್ಟು ನೊಂದಿದ್ದ ತಂದೆ ರಾಂಬಾಬು ಭಾನುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಈ ಕುರಿತಂತೆ ದೂರು ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸಿಖ್ಖರ ಧ್ವಜ ನಿಶಾನ್ ಸಾಹಿಬ್‌ಗೆ ಅಗೌರವ ಆರೋಪ ; ಪಂಜಾಬ್‌ನಲ್ಲಿ ಮತ್ತೊಬ್ಬ ವ್ಯಕ್ತಿ ಹತ್ಯೆ

Last Updated : Dec 19, 2021, 9:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.