ETV Bharat / bharat

ಹಕ್ಕಿ ಜ್ವರ ಭೀತಿ: ಕೇರಳದಲ್ಲಿ ಸಾವಿರಾರು ಬಾತುಕೋಳಿಗಳ ಮಾರಣ ಹೋಮಕ್ಕೆ ರೈತರು ಕಂಗಾಲು - ಕೇರಳದಲ್ಲಿ ಸಾವಿರಾರು ಬಾತುಕೋಳಿಗಳ ಮರಣ ಹೋಮ

ಕೋವಿಡ್‌ನಿಂದ ಈಗಾಗಲೇ ನಲುಗಿರುವ ಕೇರಳ ರೈತರಿಗೆ ಇದೀಗ ಹಕ್ಕಿ ಜ್ವರದ ಭೀತಿ ಶುರುವಾಗಿದೆ. ರೋಗದ ಭೀತಿಯಿಂದ ಕೆಲ ಜಿಲ್ಲೆಗಳಲ್ಲಿ ಸಾವಿರಾರು ಬಾತುಕೋಳಿಗಳನ್ನು ನಾಶಪಡಿಸುತ್ತಿರುವುದು ಸಾಕಣೆದಾರರಿಗೆ ದೊಡ್ಡ ಹೊಡೆತ ನೀಡಿದೆ.

Bird flu spreading in Kerala, farmers in a limbo
ಹಕ್ಕಿ ಜ್ವರ ಭೀತಿ; ಕೇರಳದಲ್ಲಿ ಸಾವಿರಾರು ಬಾತುಕೋಳಿಗಳ ಮರಣ ಹೋಮಕ್ಕೆ ರೈತ ಕಂಗಾಲು
author img

By

Published : Dec 17, 2021, 4:14 PM IST

ಕೊಟ್ಟಾಯಂ(ಕೇರಳ): ಕೇರಳದಲ್ಲಿ ಹಕ್ಕಿ ಜ್ವರ ಹರಡುತ್ತಿರುವುದು ಜನರಲ್ಲಿ ಆತಂಕ ಹೆಚ್ಚಿಸಿರುವುದು ಒಂದೆಡೆಯಾದರೆ ಜಾನುವಾರು ಸಾಕಣೆ ನಂಬಿಕೊಂಡಿರುವ ರೈತರಿಗೆ ಭಯಭೀತರಾಗಿದ್ದಾರೆ.

ಅಲಪ್ಪುಳ ಮತ್ತು ಕೊಟ್ಟಾಯಂನಲ್ಲಿ ಹಲವಾರು ಸ್ಥಳಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ದೃಢಪಟ್ಟಿರವುದರಿಂದ ಅಕ್ಕಪಕ್ಕದ ಜಿಲ್ಲೆಗಳಲ್ಲಿ ರೋಗ ಹರಡದಂತೆ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡಿದ್ದಾರೆ. ಈ ಜಿಲ್ಲೆಗಳಲ್ಲಿ ಇದುವರೆಗೆ ಸಾವಿರಾರು ಬಾತುಕೋಳಿಗಳನ್ನು ಕೊಂದು ಸುಟ್ಟು ಹಾಕಲಾಗಿದೆ.

ಸೋಂಕಿನ ಪ್ರಾಥಮಿಕ ಮೂಲ ಪತ್ತೆಹಚ್ಚಲು ಸರ್ಕಾರಿ ತಜ್ಞರ ತಂಡಗಳು ಈ ಜಿಲ್ಲೆಗಳಲ್ಲಿ ಪರೀಕ್ಷೆಯನ್ನು ಪ್ರಾರಂಭಿಸಿವೆ. ವಲಸೆ ಹಕ್ಕಿಗಳ ಕಾಲವಾಗಿರುವುದರಿಂದ ಸೋಂಕಿತ ವಲಸೆ ಹಕ್ಕಿಯಿಂದ ವೈರಸ್ ಹರಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಹಕ್ಕಿ ಜ್ವರ ಮನುಷ್ಯರಿಗೆ ಹರಡುವ ಸಾಧ್ಯತೆ ಕಡಿಮೆ ಇದೆ. ಆದರೂ ಆರೋಗ್ಯ ಇಲಾಖೆಗಳು ಪರಿಸ್ಥಿತಿ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಈ ಪ್ರದೇಶಗಳಲ್ಲಿ ಯಾವುದಾದರೂ ಅಸಾಮಾನ್ಯವಾಗಿ ಜ್ವರ ಅಥವಾ ಇತರ ಕಾಯಿಲೆಗಳು ಕಂಡು ಬಂದರೆ ವರದಿ ನೀಡುವಂತೆ ಮನವಿ ಮಾಡಿದ್ದಾರೆ.

ಕೋವಿಡ್‌ನಿಂದ ಈಗಾಗಲೇ ನಲುಗಿರುವ ರೈತರು, ತಮ್ಮ ಹೆಚ್ಚಿನ ಪಕ್ಷಿಗಳನ್ನು ರೋಗದ ಭೀತಿಯಿಂದ ನಾಶಪಡಿಸುತ್ತಿರುವ ದೊಡ್ಡ ಹೊಡೆತ ಎಂದು ಅಳಲು ತೋಡಿಕೊಂಡಿದ್ದಾರೆ. ಕೇರಳದಲ್ಲಿ ಪ್ರವಾಸೋದ್ಯಮ ಋತುವಾಗಿರುವುದರಿಂದ ಬಾತುಕೋಳಿ ಮಾಂಸವು ಕೊಟ್ಟಾಯಂ ಮತ್ತು ಅಲಪ್ಪುಳ ಪ್ರದೇಶಗಳಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಆದರೆ, ಈ ಪೀಕ್ ಸೀಸನ್ ನಲ್ಲಿ ರೈತರಿಗೆ ಸ್ವಲ್ಪ ಹಣ ಮಾಡುವ ಅವಕಾಶವನ್ನು ಹಕ್ಕಿ ಜ್ವರ ಹಾಳು ಮಾಡಿದೆ.

ಇದನ್ನೂ ಓದಿ: ಶಾರ್ಕ್​ ಪ್ರತಿಕಾಯಗಳಲ್ಲಿನ ಪ್ರೋಟೀನ್​​​​ನಿಂದ ಕೊರೊನಾಕ್ಕೆ ತಡೆ: ಸಂಶೋಧನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.