ETV Bharat / bharat

ಯುವಕರಿಂದ ಬೈಕ್ ರ‍್ಯಾಲಿ: RTC ಬಸ್​ ಚಾಲಕನ ಮೇಲೆ ಹಲ್ಲೆ - RTC ಬಸ್​ ಚಾಲಕನ ಮೇಲೆ ಹಲ್ಲೆ

ವಿಶಾಖಪಟ್ಟಣದಲ್ಲಿ ಯುವಕರಿಂದ ಮಧ್ಯರಾತ್ರಿ ಬೈಕ್ ರ‍್ಯಾಲಿ- ಮಾರ್ಗ ಮಧ್ಯೆ ಬಂದ ಆರ್ ಟಿಸಿ ಬಸ್ ಧ್ವಂಸಗೊಳಿಸಿ ಅಟ್ಟಹಾಸ- ಚಾಲಕನ ಮೇಲೆ ಹಲ್ಲೆ

ವಿಶಾಖಪಟ್ಟಣದಲ್ಲಿ ಯುವಕರಿಂದ ಬೈಕ್ ರ್ಯಾಲಿ
ವಿಶಾಖಪಟ್ಟಣದಲ್ಲಿ ಯುವಕರಿಂದ ಬೈಕ್ ರ್ಯಾಲಿ
author img

By

Published : Jul 11, 2022, 7:11 PM IST

Updated : Jul 11, 2022, 8:33 PM IST

ವಿಶಾಖಪಟ್ಟಣ (ಆಂಧ್ರಪ್ರದೇಶ): ನಗರದಲ್ಲಿ ಶನಿವಾರ ಮಧ್ಯರಾತ್ರಿ ಕೆಲ ಯುವಕರು ಬೈಕ್ ರ‍್ಯಾಲಿ ನಡೆಸಿ ಅವಾಂತರ ಸೃಷ್ಟಿಸಿದ್ದಾರೆ. ಮಾರ್ಗ ಮಧ್ಯೆ ಬಂದ ಆರ್​ಟಿಸಿ ಬಸ್​ನ್ನು ಧ್ವಂಸಗೊಳಿಸಿ, ಚಾಲಕನ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.

ಮಧ್ಯರಾತ್ರಿ 12 ಗಂಟೆಯಿಂದ 3 ಗಂಟೆಯವರೆಗೆ ಕೆಲ ಯುವಕರು ದ್ವಿಚಕ್ರ ವಾಹನದಲ್ಲಿ ಟ್ರಿಪಲ್‌ ಸವಾರಿ ಮಾಡಿದ್ದಾರೆ. ಆರ್​ಟಿಸಿ ಕಾಂಪ್ಲೆಕ್ಸ್, ಸ್ವರ್ಣ ಭಾರತಿ ಸ್ಟೇಡಿಯಂ, ಇಂಟರ್ ಸೆಕ್ಷನ್ ಹಾಗೂ ಬೀಚ್ ರಸ್ತೆಯಲ್ಲಿ ಬೈಕ್​ನಲ್ಲಿ ಸಂಚರಿಸಿ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾರೆ. ಆರ್​​ಟಿಸಿ ಕಾಂಪ್ಲೆಕ್ಸ್ ಜಂಕ್ಷನ್​ನಲ್ಲಿ ಹೋಗುತ್ತಿದ್ದ ಆರ್​ಟಿಸಿ ಬಸ್ ನಿಲ್ಲಿಸಿದ್ದಾರೆ. ಬಸ್ ಚಾಲಕ ದಾರಿ ಮಾಡಿಕೊಡುವಂತೆ ಕೇಳಿದಾಗ ಕೋಪಗೊಂಡ ಯುವಕರು ಬಸ್ ಧ್ವಂಸಗೊಳಿಸಿದ್ದಾರೆ.

ಯುವಕರಿಂದ ಬೈಕ್ ರ‍್ಯಾಲಿ

ಶನಿವಾರ ಮಧ್ಯರಾತ್ರಿ ನಡೆದ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ ಬಳಿಕ ಬೈಕ್‌ ರ‍್ಯಾಲಿಯಲ್ಲಿದ್ದ 35 ಮಂದಿಯನ್ನು ಗುರುತಿಸಲಾಗಿದೆ. ಚಾಲಕನ ಮೇಲೆ ಹಲ್ಲೆ ನಡೆಸಿದ ಯುವಕರು ಸೇರಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರು ಬಳಸಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಚೀನಾದ ಉಪಟಳ, ಪ್ರಧಾನಿಯವರ ಮೌನ ದೇಶಕ್ಕೆ ದೊಡ್ಡ ಗಂಡಾಂತರ: ಕಿಡಿಕಾರಿದ ರಾಹುಲ್​ ಗಾಂಧಿ

Last Updated : Jul 11, 2022, 8:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.