ನವದೆಹಲಿ: ಬೈಕ್ ಸವಾರರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ಬಹುತೇಕ ಎಲ್ಲ ರಾಜ್ಯದ ಪೊಲೀಸರು ಮನವಿ ಮಾಡ್ತಾರೆ. ಆದರೆ, ಇದನ್ನು ನಿರ್ಲಕ್ಷಿಸಿ ಅನೇಕರು ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆಯುತ್ತಿರುತ್ತವೆ. ಆದರೆ, ಈ ವಿಡಿಯೋ ತುಣುಕು ನೋಡಿದ್ರೆ ಹೆಲ್ಮೆಟ್ ಹಾಕಿಕೊಂಡು ಪ್ರಯಾಣ ಮಾಡುವುದು ಎಷ್ಟು ಸೇಫ್ ಎಂಬುದು ಗೊತ್ತಾಗುತ್ತದೆ.
ಬೈಕ್ ಮೇಲೆ ತೆರಳುತ್ತಿದ್ದ ಸವಾರನೋರ್ವ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಡಿವೈಡರ್ಗೆ ಗುದ್ದಿದ್ದಾನೆ. ಈ ಸಂದರ್ಭದಲ್ಲಿ ಆತ ಸುಮಾರು ಮೀಟರ್ ದೂರ ಹಾರಿ ಬಿದ್ದಿದ್ದಾನೆ. ಆತನ ಬೈಕ್ ವಿದ್ಯುತ್ ಕಂಬಕ್ಕೆ ಗುದ್ದಿದೆ. ರಸ್ತೆಯಲ್ಲಿ ಬಿದ್ದ ಬೈಕ್ ಸವಾರನ ತಲೆ ಮೇಲೆ ವಿದ್ಯುತ್ ಕಂಬ ಕೂಡಾ ಬಿತ್ತು. ಆದರೆ, ವ್ಯಕ್ತಿಗೆ ಯಾವುದೇ ರೀತಿಯ ಗಾಯವಾಗಿಲ್ಲ. ಈ ವಿಡಿಯೋವನ್ನು ದೆಹಲಿ ಪೊಲೀಸರು ಶೇರ್ ಮಾಡಿದ್ದಾರೆ.
-
God helps those who wear helmet !#RoadSafety#DelhiPoliceCares pic.twitter.com/H2BiF21DDD
— Delhi Police (@DelhiPolice) September 15, 2022 " class="align-text-top noRightClick twitterSection" data="
">God helps those who wear helmet !#RoadSafety#DelhiPoliceCares pic.twitter.com/H2BiF21DDD
— Delhi Police (@DelhiPolice) September 15, 2022God helps those who wear helmet !#RoadSafety#DelhiPoliceCares pic.twitter.com/H2BiF21DDD
— Delhi Police (@DelhiPolice) September 15, 2022
ಎರಡು ಘಟನೆಯಲ್ಲಿ ಸವಾರನ ತಲೆಗೆ ಪೆಟ್ಟು ಬೀಳುವ ಸಾಧ್ಯತೆ ಇತ್ತು. ಆದರೆ, ಹೆಲ್ಮೆಟ್ ಹಾಕಿಕೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. 'ಹೆಲ್ಮೆಟ್ ಹಾಕಿಕೊಳ್ಳುವುದರಿಂದ ನಿಮ್ಮನ್ನು ಒಮ್ಮೆ, ಎರಡು, ಮೂರು ಅಷ್ಟೇ ಅಲ್ಲ ಅನೇಕ ಸಲ ರಕ್ಷಿಸಿಕೊಳ್ಳಬಹುದು' ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೈಕ್ಗೆ ಟಿಪ್ಪರ್ ಡಿಕ್ಕಿಯಾಗಿ ತಾಯಿ-ಮಗು ಸಾವು: ಹೆಲ್ಮೆಟ್ನಿಂದ ಉಳಿಯಿತು ಚಾಲಕನ ಪ್ರಾಣ
15 ಸೆಕೆಂಡ್ಗಳ ವಿಡಿಯೋದಲ್ಲಿ ಕಾರ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್ ಸವಾರ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದು, ಅಲ್ಲಿನ ದೀಪದ ಕಂಬಕ್ಕೆ ಬೈಕ್ ಗುದ್ದಿದೆ. ರಸ್ತೆ ಮೇಲೆ ಬಿದ್ದ ವ್ಯಕ್ತಿ ನಿಧಾನವಾಗಿ ಎದ್ದೇಳಲು ಮುಂದಾಗುತ್ತಿದ್ದಂತೆ ಆತನ ಮೇಲೆ ದೀಪದ ಕಂಬ ಸಹ ಬಿದ್ದಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಹೆಲ್ಮೆಟ್ ಹಾಕಿಕೊಳ್ಳುವುದರಿಂದ ಮಾರಣಾಂತಿಕ ಗಾಯದಿಂದ ಶೇ. 64ರಷ್ಟು ರಕ್ಷಣೆ ಮಾಡಬಹುದು.