ETV Bharat / bharat

ಬಿಹಾರ: ಮಾಟ ಮಂತ್ರದ ಆರೋಪ.. ಬೆಂಕಿ ಹಚ್ಚಿ ಮಹಿಳೆಯ ಸಜೀವದಹನ - ಹಲವು ಪೊಲೀಸರು ಗಾಯ

ಮಾಟಗಾತಿ ಎಂದು ಆರೋಪಿಸಿ ಮಹಿಳೆಯನ್ನು ಸಜೀವವಾಗಿ ಸುಟ್ಟು ಹಾಕಿದ ಘಟನೆ ಬಿಹಾರದ ಗಯಾದಲ್ಲಿ ಇಂದು(ಶನಿವಾರ) ನಡೆದಿದೆ.

bihar-woman-burnt-alive-for-alleged-witchcraft
ಮಾಟಗಾತಿ ಆರೋಪಕ್ಕೆ ಬೆಂಕಿ ಹಚ್ಚಿ ಮಹಿಳೆಯ ಸಜೀವದಹನ
author img

By

Published : Nov 5, 2022, 10:46 PM IST

ಗಯಾ(ಬಿಹಾರ): ಮಾಟ ಮಂತ್ರ ಮಾಡುತ್ತಿದ್ದಾಳೆ ಎಂಬ ಆರೋಪದ ಮೇಲೆ ಗುಂಪೊಂದು ದಾಳಿ ಮಾಡಿ ಮನೆಯಲ್ಲೇ ಬಟ್ಟೆಗಳನ್ನು ಸುತ್ತಿ ಬೆಂಕಿ ಹಚ್ಚಿ ಸಜೀವ ದಹನ ಮಾಡಿದ ಆಘಾತಕಾರಿ ಘಟನೆ ಬಿಹಾರದ ಗಯಾದಲ್ಲಿ ಶನಿವಾರ ನಡೆದಿದೆ. ಗಯಾ ಜಿಲ್ಲೆಯ ಪಚ್ಮಾಹ್ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು, ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿದಾಗ ಖಾಕಿ ಪಡೆ ಮೇಲೂ ದಾಳಿ ನಡೆಸಲಾಗಿದೆ.

ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಅಸಹಜವಾಗಿ ಸಾವನ್ನಪ್ಪಿದ್ದರು. ಇದರಿಂದ ಆಕ್ರೋಶಗೊಂಡ ಗುಂಪೊಂದು ಇದಕ್ಕೆ ಮಹಿಳೆಯೇ ಕಾರಣ ಎಂದು ಆರೋಪಿಸಿದ್ದಾರೆ. ಈಕೆ ಮಂತ್ರ ವಿದ್ಯೆ ಕಲಿತಿದ್ದು, ಅದರ ಪ್ರಯೋಗದಿಂದ ವ್ಯಕ್ತಿ ಸಾವಿಗೀಡಾಗಿದ್ದಾನೆ ಎಂದು, ಆಕೆ ಮನೆಯಲ್ಲಿದ್ದ ವೇಳೆ ದಾಳಿ ಮಾಡಿದ ಗುಂಪು ಥಳಿಸಿದೆ.

ಬಳಿಕ ಆಕೆಯನ್ನು ಬಟ್ಟೆಯಿಂದ ಸುತ್ತಿ ಸಜೀವವಾಗಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ವಿಷಯ ತಿಳಿದ ಪೊಲೀಸರು ಗ್ರಾಮಕ್ಕೆ ಆಗಮಿಸಿದಾಗ ಕ್ರೋಧಗೊಂಡ ಗುಂಪು, ಸಿಬ್ಬಂದಿ ಮೇಲೂ ದಾಳಿ ಮಾಡಿದೆ. ಇದರಿಂದ ಘಟನೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೃತದೇಹವನ್ನು ಶವಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದೆ.

ಓದಿ: ಸೇನಾ ವಾಹನಕ್ಕೆ ಅಪ್ಪಳಿಸಿದ ಟ್ರಕ್​.. ಇಬ್ಬರು ಬಿಎಸ್​ಎಫ್​ ಯೋಧರು ಹುತಾತ್ಮ, ಐವರಿಗೆ ಗಂಭೀರ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.