ETV Bharat / bharat

ಸೋನು ಸೂದ್​ ನೆರವಿನಿಂದ ಮೂಡಿತು ಹೊಸ ಬೆಳಕು.. ಬಿಹಾರದ ಬಾಲಕಿ ಈಗ ಎಲ್ಲರಂತೆ ಕಿಲ ಕಿಲ - ಬಿಹಾರದ ನವಾಡ ಜಿಲ್ಲೆಯ ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳೊಂದಿಗೆ ಜನಿಸಿದ ಮಗುವಿಗೆ ಹೋಸ ಜೀವನ ರೂಪಿಸಿಕೊಟ್ಟಿರುವ ಸೋನು ಸೂದ್​

ಬಾಲಕಿಯ ಸಂಕಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಷಯ ಬಾಲಿವುಡ್ ನಟ ಸೋನು ಸೂದ್ ತಲುಪಿದ ನಂತರ ಬಾಲಕಿಯನ್ನು ಮುಂಬೈಗೆ ಕರೆತರುವಂತೆ ಪೋಷಕರನ್ನು ಕೇಳಿಕೊಂಡಿದ್ದರು. ಈಗ ಆಕೆಗೆ ಯಶಸ್ವಿ ಆಪರೇಷನ್​ ಆದ ನಂತರ ಎಲ್ಲರಂತೆ ಸಾಮಾನ್ಯ ಜೀವನ ನಡೆಸುವಂತಾಗಿದ್ದಾಳೆ.

ವಿಶೇಷ ಸಾಮರ್ಥ್ಯವುಳ್ಳ ಬಾಲಕಿಗೆ ಸೋನು ಸೂದ್ ಅಭಯ

author img

By

Published : Jul 3, 2022, 5:23 PM IST

ನವಾಡ (ಬಿಹಾರ): ಬಿಹಾರದ ನವಾಡ ಜಿಲ್ಲೆಯ ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳೊಂದಿಗೆ ಜನಿಸಿ, ನರಕಯಾತನೆ ಅನುಭವಿಸುತ್ತಿದ್ದ ಬಾಲಕಿ ಜೀವನದಲ್ಲಿ ನಟ ಸೋನು ಸೂದ್​ ಅವರ ಸಹಾಯ ಹೊಸ ಬೆಳಕು ಮೂಡಿಸಿದೆ. ಸೋನು ಸೂದ್ ಅವರ ಈ ನೆರವಿಗೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ತಮ್ಮ ಕಿರಿಯ ಮಗಳು ಚೌಮುಖಿ ಕುಮಾರಿಗೆ ಆಪರೇಷನ್​ ಮಾಡಿಸಿದ್ದಕ್ಕಾಗಿ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.

ಬಾಲಕಿ ಚೌಮುಖಿಯ ಸಂಕಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಷಯ ಬಾಲಿವುಡ್ ನಟ ಸೋನು ಸೂದ್ ತಲುಪಿದ ನಂತರ ಆಕೆಯನ್ನು ಮುಂಬೈಗೆ ಕರೆತರುವಂತೆ ಪೋಷಕರನ್ನು ಕೇಳಿಕೊಂಡಿದ್ದರು. ಬಾಲಕಿಯನ್ನು ಮುಂಬೈನಲ್ಲಿ ವೈದ್ಯರು ಪರೀಕ್ಷಿಸಿದರು. ನಂತರ ಅವರು ಸೂರತ್‌ನಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರು. ಈಗ ಬಾಲಕಿ ಸಾಮಾನ್ಯ ಜೀವನವನ್ನು ನಡೆಸಬಹುದಾಗಿದೆ. ಈ ಬಗ್ಗೆ ಪತ್ರಕರ್ತರೊಬ್ಬರು ಟ್ವೀಟ್​ ಮಾಡಿದ್ದನ್ನು ರೀ ಟ್ವೀಟ್​ ಮಾಡಿರುವ ಸೂದ್​, ಬಾಲಕಿಯನ್ನು ಹರಸಿದ್ದಾರೆ.

ಚೌಮುಖಿಯ ಹಿರಿಯ ಸಹೋದರ ಮತ್ತು ಸಹೋದರಿಯ ಶಿಕ್ಷಣದ ವೆಚ್ಚವನ್ನು ಸೂದ್ ಭರಿಸುವುದಾಗಿಯೂ ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಮಗಳ ಕೆನ್ನೆ, ಎದೆ ಭಾಗಕ್ಕೆ ಕಚ್ಚಿ ವಿಕೃತಿ.. ಬೆಳಗಾವಿಯಲ್ಲಿ ತಂದೆಯಿಂದಲೇ ಪೈಶಾಚಿಕ ಕೃತ್ಯ!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.