ಸಮಸ್ತಿಪುರ (ಬಿಹಾರ್): ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಸರ್ಕಾರಿ ನೌಕರನೊಬ್ಬ ದುಪ್ಪಟ್ಟು ಸಂಬಳ ಪಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಉದ್ಯೋಗಿ ಬಿರ್ಜು ರೈ ಎಂಬುವರು ಶಿಕ್ಷಕ ಮತ್ತು ರೋಜಗಾರ್ ಸೇವಕ ಹೀಗೆ ಎರಡೂ ಹುದ್ದೆಗಳನ್ನು ಹೊಂದಿದ್ದಾರೆ. ಆದರೆ ಕಾರ್ಯಕರ್ತರೊಬ್ಬರು ಆರ್‌ಟಿಐ ಅರ್ಜಿ ಸಲ್ಲಿಸಿದಾಗ ಈ ಎರಡು ನೌಕರಿ ಆಸಾಮಿಯ ವಂಚನೆ ಬೆಳಕಿಗೆ ಬಂದಿದೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸಮಸ್ತಿಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಯೋಗೇಂದ್ರ ಸಿಂಗ್ ಅವರು ಪ್ರಕರಣದ ತನಿಖೆಗಾಗಿ ತನಿಖಾ ಸಮಿತಿಯನ್ನು ರಚಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು- ಉದ್ಯೋಗಿಯೊಬ್ಬರು ಒಂದೇ ಸಮಯದಲ್ಲಿ ಎರಡು ಸಂಬಳ ಪಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ನಂತರ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈ ಬಗ್ಗೆ ಮಾಹಿತಿ ಕೋರಿ ಆರ್‌ಟಿಐ ಕಾರ್ಯಕರ್ತೆ ಕಾಂಚನ್ ಕುಮಾರಿ ಎಂಬುವರು ಅರ್ಜಿ ಸಲ್ಲಿಸಿದಾಗ ಎರಡು ಸಂಬಳದ ವಿಷಯ ಬಹಿರಂಗವಾಗಿದೆ. ಒಬ್ಬ ವ್ಯಕ್ತಿಗೆ ಒಂದು ಸರ್ಕಾರಿ ಹುದ್ದೆ ಹೊಂದಲು ಮಾತ್ರ ನಿಯಮದಲ್ಲಿ ಅವಕಾಶವಿದೆ. ಆದರೆ ಆರೋಪಿ ಸಿಬ್ಬಂದಿ ಬಿರ್ಜು ರೈ ಶಿಕ್ಷಕ ಮತ್ತು ರೋಜಗಾರ್ ಸೇವಕನಾಗಿ ಕೆಲಸ ಮಾಡುತ್ತಿದ್ದು, ದುಪ್ಪಟ್ಟು ಸಂಬಳವನ್ನೂ ಪಡೆಯುತ್ತಿದ್ದರು.
ತಪ್ಪಿತಸ್ಥ ನೌಕರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರ್‌ಟಿಐ ಕಾರ್ಯಕರ್ತೆ ಒತ್ತಾಯಿಸಿದ್ದಾರೆ. ಆರ್‌ಟಿಐ ಅರ್ಜಿಗೆ ಒದಗಿಸಲಾದ ಮಾಹಿತಿಯ ಪ್ರಕಾರ, ಬಿರ್ಜು ರೈ ಅವರು ಸೆಪ್ಟೆಂಬರ್ 2011 ರಿಂದ ಜೂನ್ 7, 2017 ರವರೆಗೆ ಜಿಲ್ಲೆಯ ಹಸನ್‌ಪುರ ಪಂಚಾಯತ್‌ನಲ್ಲಿ ರೋಜಗಾರ್ ಸೇವಕನಾಗಿ ಕೆಲಸ ಮಾಡಿದ್ದಾನೆ ಮತ್ತು ಈ ಅವಧಿಯಲ್ಲಿ ಆತ ನರೇಗಾ ಕೆಲಸ ನೋಡಿಕೊಳ್ಳುತ್ತಿದ್ದರು. ಮಧ್ಯಂತರ ಅವಧಿಯಲ್ಲಿ, ರೈ ಸೆಪ್ಟೆಂಬರ್ 5, 2014 ರಂದು ಮಾಧ್ಯಮಿಕ ಶಾಲೆಯೊಂದರಲ್ಲಿ ಶಿಕ್ಷಕರಾಗಿ ನೇಮಕಗೊಂಡಿದ್ದು, ಅವರನ್ನು ಹಸನ್‌ಪುರದಿಂದ ಉಜಿಯಾರ್‌ಪುರ ಬ್ಲಾಕ್‌ಗೆ ವರ್ಗಾಯಿಸಲಾಗಿತ್ತು.
ಇದನ್ನೂ ಓದಿ: ₹500 ರೂಪಾಯಿ ಆಸೆಗೆ ಆಸ್ಪತ್ರೆಯಲ್ಲೇ ಹೊಡೆದಾಡಿಕೊಂಡ ಆಶಾ ಕಾರ್ಯಕರ್ತೆಯರು!