ETV Bharat / bharat

ಜನತಾದಳ(ಯು) ಜೊತೆ ವಿಲೀನಗೊಳ್ಳುತ್ತಾ ಬಿಹಾರದ ರಾಷ್ಟ್ರೀಯ ಲೋಕ ಸಮತಾ ಪಕ್ಷ?

ಮಾರ್ಚ್ 14 ರಂದು ಪಾಟ್ನಾದಲ್ಲಿ ಜನತಾದಳ (ಯು) ಜೊತೆ ವಿಲೀನಗೊಳ್ಳುವ ಸಾಧ್ಯತೆ ಇದೆ. ಮುಂಬರುವ ವಿಲೀನವು ಬಿಹಾರದ ರಾಜಕೀಯದ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ ಎಂದು ಜೆಡಿ ಯು ಮೂಲಗಳು ತಿಳಿಸಿವೆ.

RLSP likely to merge with JD-U on March 14
ಜನತಾದಳ-ಯುನೈಟೆಡ್ ಜೊತೆ ವಿಲೀನಗೊಳ್ಳುತ್ತಾ ಬಿಹಾರದ ರಾಷ್ಟ್ರೀಯ ಲೋಕ ಸಮತಾ ಪಕ್ಷ.!?
author img

By

Published : Mar 12, 2021, 3:37 PM IST

ನವದೆಹಲಿ: ಬಿಹಾರದ ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ಮಾರ್ಚ್ 14 ರಂದು ಪಾಟ್ನಾದಲ್ಲಿ ಜನತಾದಳ-ಯುನೈಟೆಡ್ ಜೊತೆ ವಿಲೀನಗೊಳ್ಳುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್​ ಉಪಸ್ಥಿತರಿರುವರು ಎಂಬ ಮಾಹಿತಿ ದೊರೆತಿದೆ.

ಆರ್‌ಎಲ್‌ಎಸ್‌ಪಿಯ ಹಿರಿಯ ಮುಖಂಡರು, ಜೆಡಿ-ಯು ಜೊತೆ ವಿಲೀನಗೊಂಡ ಬಗ್ಗೆ ಪಕ್ಷದ ಕಾರ್ಯಕರ್ತರ ಅನುಮೋದನೆ ಪಡೆಯಲು ಆರ್‌ಎಲ್‌ಎಸ್‌ಪಿ ಮಾರ್ಚ್ 13-14ರಂದು ಪಾಟ್ನಾದಲ್ಲಿ ಎರಡು ದಿನಗಳ ಸಭೆ ಕರೆದಿದೆ ಎಂದು ಹೇಳಿದರು.

ಉಪೇಂದ್ರ ಕುಶ್ವಾಹ ಅವರ ನೇತೃತ್ವದಲ್ಲಿ, 243 ಸದಸ್ಯರ ಬಿಹಾರ ವಿಧಾನಸಭೆಯಲ್ಲಿ ಒಂದೇ ಒಂದು ಸ್ಥಾನವನ್ನು ಪಡೆಯಲು ಸಹ ಪಕ್ಷ ವಿಫಲವಾಯಿತು.

ಉಪೇಂದ್ರ ಕುಶ್ವಾಹ ಅವರ ಆಪ್ತ ಸಹವರ್ತಿ ಆರ್‌ಎಲ್‌ಎಸ್‌ಪಿ ಪ್ರಧಾನ ಕಾರ್ಯದರ್ಶಿ ಮಾಧವ್ ಆನಂದ್, ಮಾರ್ಚ್ 14 ರವರೆಗೆ ಕಾಯಿರಿ ಮತ್ತು ಪಕ್ಷದ ನಿರ್ಧಾರ ನಿಮಗೆ ತಿಳಿಯುತ್ತದೆ ಎಂದಿದ್ದಾರೆ. ಮುಂಬರುವ ವಿಲೀನವು ಬಿಹಾರದ ರಾಜಕೀಯದ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ ಎಂದು ಜೆಡಿ-ಯು ಮೂಲಗಳು ತಿಳಿಸಿವೆ.

243 ಸ್ಥಾನಗಳ ಪ್ರಬಲ ಬಿಹಾರ ವಿಧಾನಸಭೆಯಲ್ಲಿ ಎನ್‌ಡಿಎ 125 ಸ್ಥಾನಗಳ ಬಹುಮತವನ್ನು ಗಳಿಸಿದ್ದು, ಅದರಲ್ಲಿ ಬಿಜೆಪಿ 74 ಸ್ಥಾನಗಳಲ್ಲಿ, ಜೆಡಿ-ಯು 43 ಸ್ಥಾನಗಳಲ್ಲಿ ಗೆದ್ದರೆ, ಎಂಟು ಸ್ಥಾನಗಳನ್ನು ಇತರ ಎರಡು ಎನ್‌ಡಿಎ ಘಟಕಗಳು ಗೆದ್ದುಕೊಂಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.