ETV Bharat / bharat

ಮುಸ್ಲಿಂರಲ್ಲಿರುವ ಶೇ. 90 ರಷ್ಟು ಜನ ಮತಾಂತರ ಆದವರೇ : ಬಿಹಾರ ಸಚಿವ ಅಶೋಕ್ ಚೌಧರಿ ವಿವಾದಾತ್ಮಕ ಹೇಳಿಕೆ

ಮುಸ್ಲಿಮರು ಲಂಡನ್, ಅಮೆರಿಕ ಅಥವಾ ಅಫ್ಘಾನಿಸ್ತಾನದಿಂದ ಬಂದಿಲ್ಲ, ಅವರು ಮೂಲತಃ ದಲಿತರು, ಹಿಂದೂ ಜಾತಿ ಶ್ರೇಣೀಕರಣದಿಂದಾಗಿ ಅವರು ಮತಾಂತರಗೊಂಡಿದ್ದಾರೆ ಎಂದು ಬಿಹಾರದ ಸಚಿವ ಅಶೋಕ್ ಚೌಧರಿ ಹೇಳಿದ್ದಾರೆ.

Bihar minister courts controversy; says 90 per cent Muslims in India are converted
ಹಿಂದೂ ಜಾತಿ ಶ್ರೇಣೀಕರಣದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ:ಬಿಹಾರ ಸಚಿವ ಅಶೋಕ್ ಚೌಧರಿ ವಿವಾದಾತ್ಮಕ ಹೇಳಿಕೆ
author img

By

Published : Mar 19, 2023, 9:50 PM IST

ನಳಂದ(ಬಿಹಾರ): ಮುಸ್ಲಿಂ ಸಿಬ್ಬಂದಿಗೆ ಸರ್ಕಾರ ನೀಡಿರುವ ರಂಜಾನ್ ಸೌಲಭ್ಯವನ್ನು ಬಿಹಾರ ಲೋಕೋಪಯೋಗಿ ಸಚಿವ ಅಶೋಕ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ. ಭಾರತದಲ್ಲಿರುವ ಶೇ.90ರಷ್ಟು ಮುಸ್ಲಿಮರು ಹಿಂದೂ ಧರ್ಮದಿಂದ ಮತಾಂತರಗೊಂಡವರೇ ಆಗಿದ್ದಾರೆ ಎಂದು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಮರು ಲಂಡನ್, ಅಮೆರಿಕ ಅಥವಾ ಅಫ್ಘಾನಿಸ್ತಾನದಿಂದ ಬಂದಿಲ್ಲ, ಅವರು ಮೂಲತಃ ದಲಿತರು, ಹಿಂದೂ ಜಾತಿ ಶ್ರೇಣೀಕರಣದಿಂದಾಗಿ ಅವರು ಮತಾಂತರಗೊಂಡಿದ್ದಾರೆ ಎಂದರು.

"ಕೆಲಸದಲ್ಲಿ ಇಂತಹ ಸಡಿಲಿಕೆಗಳನ್ನು ಯಾವಾಗಲೂ ಅಲ್ಪಸಂಖ್ಯಾತರಿಗೆ ನೀಡಲಾಗಿದೆ. ಬಿಜೆಪಿ ಯಾವಾಗಲೂ ಹಿಂದೂ-ಮುಸ್ಲಿಂ ಬಗ್ಗೆ ಏನಾದರೂ ಹೇಳುತ್ತಲೇ ಇರುತ್ತದೆ. ಎಲ್ಲಾ ವಿಷಯಗಳಲ್ಲಿ ಹಿಂದೂ-ಮುಸ್ಲಿಂ ಎಂಬ ದೃಷ್ಟಿಕೋನದಲ್ಲಿ ನೋಡುತ್ತದೆ. ಮುಸ್ಲಿಮರು ಯಾರು? ಅವರು ಲಂಡನ್ ಅಥವಾ ಅಮೆರಿಕದಿಂದ ಬಂದಿಲ್ಲ. ಅವರು ಅಫ್ಘಾನಿಸ್ತಾನದಿಂದ ಬಂದಿಲ್ಲ. ಶೇ.90ರಷ್ಟು ಜನರು ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆಯಿಂದ ಬೇಸತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಚೌಧರಿ ಹೇಳಿದ್ದಾರೆ.

ಇದನ್ನೂ ಓದಿ:ರಾಹುಲ್​ ಗಾಂಧಿ ನಿವಾಸಕ್ಕೆ ಪೊಲೀಸರ ಭೇಟಿ, ಬೆದರಿಕೆಯ ರಾಜಕಾರಣ ಎಂದ ಕಾಂಗ್ರೆಸ್​: ಬಿಜೆಪಿ ತಿರುಗೇಟು

ಬಿಹಾರ ಸರ್ಕಾರ ಹೊರಡಿಸಿದ ಆದೇಶವೇನು?: ಮಾರ್ಚ್ 23 ಅಥವಾ 24 ರಿಂದ ಪ್ರಾರಂಭವಾಗುವ ಒಂದು ತಿಂಗಳ ರಂಜಾನ್ ಸಮಯದಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಒಂದು ಗಂಟೆ ಮುಂಚಿತವಾಗಿ ಕಚೇರಿಗೆ ತಲುಪಲು ಮತ್ತು ಅವರು ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಹೊರಡಲು ಬಿಹಾರ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಈ ನಿರ್ಧಾರದ ಬಗ್ಗೆ ಬಿಜೆಪಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸರ್ಕಾರವನ್ನು ಟೀಕಿಸಿದೆ. ಭಯೋತ್ಪಾದಕ ಧನಸಹಾಯದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಐದು ವರ್ಷಗಳ ಕಾಲ ನಿಷೇಧಿಸಲಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಸಿದ್ಧಾಂತವನ್ನು ನಂಬುವವರು ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿದೆ.

ಬಿಜೆಪಿ ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದೆ: ಮುಸ್ಲಿಮರಲ್ಲಿ ಅಸ್ಪೃಶ್ಯತೆ ಅಸ್ತಿತ್ವದಲ್ಲಿಲ್ಲದ ಕಾರಣ, ದಲಿತರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ಚೌಧರಿ ನಂತರ ಸ್ಪಷ್ಟನೆ ನೀಡಿದರು. ನಂತರ ಈ ವಿಷಯದ ಬಗ್ಗೆ ಬಿಜೆಪಿ ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದೆ ಎಂದು ಅವರು ಆರೋಪಿಸಿದರು. ಇದರ ಮಧ್ಯೆ ಈ ಆದೇಶವನ್ನು ರದ್ದುಗೊಳಿಸಬೇಕು ಮತ್ತು ನವರಾತ್ರಿಯ ಸಮಯದಲ್ಲಿ ಹಿಂದೂ ಉದ್ಯೋಗಿಗಳಿಗೆ ಇದೇ ರೀತಿಯ ಅಧಿಸೂಚನೆಯನ್ನು ಏಕೆ ಹೊರಡಿಸುವುದಿಲ್ಲ ಎಂದು ಬಿಜೆಪಿ ಪ್ರಶ್ನಿಸಿದೆ.

ಧಾರ್ಮಿಕ ಉನ್ಮಾದ ಹರಡಬೇಕು ಎಂಬುದು ಬಿಜೆಪಿಯ ಆಶಯ: ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ಮಾತನಾಡಿ, ಈ ದೇಶದಲ್ಲಿ ಧಾರ್ಮಿಕ ಉನ್ಮಾದ ಹರಡಬೇಕು ಎಂಬುದು ಬಿಜೆಪಿಯ ಆಶಯ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಯಾವಾಗಲೂ 17 ವರ್ಷಗಳಿಂದ ಸರ್ಕಾರವನ್ನು ನಡೆಸುತ್ತಿದ್ದಾರೆ. ಬಿಹಾರದಲ್ಲಿ ಸಾಮಾಜಿಕ ಸೌಹಾರ್ದತೆ, ಕೋಮು ಸೌಹಾರ್ದತೆ ಕಾಪಾಡಬೇಕು ಮತ್ತು ಅದಕ್ಕಾಗಿ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಅದೇ ದಿಕ್ಕಿನಲ್ಲಿ ಸರ್ಕಾರವೂ ಈ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಪಿಎಂಒ ಅಧಿಕಾರಿ ಎಂದು ಹೇಳಿ ವಂಚನೆ ಪ್ರಕರಣ: ಪ್ರೋಟೋಕಾಲ್​ಗೆ ಅನುಕೂಲ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.