ETV Bharat / bharat

ಕರ್ನಾಟಕಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಬಂದ ವ್ಯಕ್ತಿ: ಉಗ್ರ ಎಂಬ ಶಂಕೆ ಮೇಲೆ ಅಮೃತಸರದಲ್ಲಿ ಬಂಧಿ! - ಬಿಹಾರದಿಂದ ಕರ್ನಾಟಕಕ್ಕೆ

ಕರ್ನಾಟಕಕ್ಕೆ ತೆರಳುವುದಾಗಿ ಮನೆಯಿಂದ ಬಂದಿದ್ದ ಬಿಹಾರದ ವ್ಯಕ್ತಿಯೊಬ್ಬರು ಉಗ್ರ ಎಂಬ ಶಂಕೆ ಮೇಲೆ ಅಮೃತಸರದಲ್ಲಿ ಸೆರೆಯಾಗಿ ಜೈಲು ಸೇರಿದ್ದಾರೆ.

bihar-man-untraceable-for-six-years-found-in-amritsar-jail
ಕರ್ನಾಟಕಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಬಂದ ವ್ಯಕ್ತಿ: ಉಗ್ರ ಎಂಬ ಶಂಕೆ ಮೇಲೆ ಅಮೃತಸರದಲ್ಲಿ ಬಂಧಿ
author img

By

Published : Feb 4, 2023, 10:38 PM IST

ಭಾಗಲ್‌ಪುರ (ಬಿಹಾರ): ಬಿಹಾರದಲ್ಲಿ ಆರು ವರ್ಷಗಳ ಹಿಂದೆ ಮನೆ ತೊರೆದು ಬಂದಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿರುವುದಾಗಿಯೇ ಎಂದು ಭಾವಿಸಿದ್ದ ಕುಟುಂಬಸ್ಥರಿಗೆ ಇದೀಗ ಆತನ ಬದುಕಿರುವ ಸುಳಿವು ದೊರೆತಿದೆ. ಕರ್ನಾಟಕಕ್ಕೆ ತೆರಳುವುದಾಗಿ ಮನೆಯಿಂದ ಬಂದಿದ್ದ ಆ ವ್ಯಕ್ತಿ ಈಗ ಪಂಜಾಬ್​ನ ಅಮೃತಸರದ ಜೈಲಿನಲ್ಲಿ ಇರುವುದು ಗೊತ್ತಾಗಿದೆ. ಈ ಮೂಲಕ ಮರಳಿ ಮನೆಗೆ ಹಿಂದಿರುಗುವ ಭರವಸೆಯು ಕುಟುಂಬ ಸದಸ್ಯರಲ್ಲಿ ಮೂಡಿದೆ. ಆದರೆ, ಆತನನ್ನು ಜೈಲಿನಿಂದ ಬಿಡುಗಡೆಗೊಳಿಸಬೇಕಾದರೆ ಕೆಲ ತೊಡಕುಗಳು ಕುಟುಂಬಕ್ಕೆ ಎದುರಾಗಿವೆ.

ಇದನ್ನೂ ಓದಿ: ಕ್ರಿಕೆಟ್​ ಬೆಟ್ಟಿಂಗ್​ ಜಾಲ ಬಯಲು: ದುಬೈನಿಂದ ಬುಕ್ಕಿಗಳ ಕಾರ್ಯಾಚರಣೆ, 1400 ಕೋಟಿ ವಹಿವಾಟು ಶಂಕೆ

ಹೌದು, ಭಾಗಲ್ಪುರ ಜಿಲ್ಲೆಯ ನಂದಲಾಲ್​ಪುರ ಗ್ರಾಮದ ನಿವಾಸಿ ಇಂದಲ್ ರಾಯ್​ ಎಂಬುವರು ಆರು ವರ್ಷಗಳ ಹಿಂದೆ ಕರ್ನಾಟಕಕ್ಕೆ ಹೋಗುವುದಾಗಿ ಮನೆಯಿಂದ ಬಂದಿದ್ದರು. ಆದರೆ, ಇದರ ನಂತರ ರೈ ತಮ್ಮ ಕುಟುಂಬ ಸದಸ್ಯರ ಸಂಪರ್ಕಕ್ಕೆ ಬಂದಿಲ್ಲ. ಈತನ ಪತ್ತೆಗಾಗಿ ಕುಟುಂಬಸ್ಥರು ಸಾಕಷ್ಟು ಪ್ರಯತ್ನಿಸಿದ್ದರೂ ಕೂಡ ಎಲ್ಲಿಯೂ ಈತನ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿಯೇ ಮನೆಯವರು ಇಂದಲ್ ರಾಯ್​ ಇನ್ನಿಲ್ಲ ಎಂದು ಭಾವಿಸಿದ್ದರು.

ಸುಳಿವು ಕೊಟ್ಟ ಪತ್ರ: ಸುದೀರ್ಘ ಆರು ವರ್ಷಗಳ ನಂತರ ಇದೀಗ ಇಂದಲ್​ ರಾಯ್​ ಇನ್ನೂ ಜೀವಂತವಾಗಿದ್ದರೆ ಎಂಬ ನೆಮ್ಮದಿ ಮತ್ತು ಅಚ್ಚರಿಯ ವಿಷಯವು ನಂದಲಾಲ್​ಪುರದಲ್ಲಿ ವಾಸವಾಗಿರುವ ಕುಟುಂಬಸ್ಥರಿಗೆ ಪತ್ರದ ಮೂಲಕ ತಲುಪಿದೆ. ಅರವಿಂದ್ ಕುಮಾರ್ ಚೌಧರಿ ಎಂಬುವವರು ಇಂದಲ್​ ರಾಯ್​ ಕುರಿತ ಸುಳಿವಿನ ಪತ್ರವನ್ನು ಕುಟುಂಬಸ್ಥರಿಗೆ ರವಾನಿಸಿದ್ದಾರೆ.

ಜೈಲಿನಲ್ಲಿ ರೈ - ಚೌಧರಿ ಭೇಟಿ: ಇಂದಲ್​ ರಾಯ್​ ಬಗ್ಗೆ ಸುಳಿವು ಕೊಟ್ಟಿರುವ ಅರವಿಂದ್ ಕುಮಾರ್ ಚೌಧರಿ, ಅಮೃತಸರದ ಜೈಲಿನಲ್ಲಿ ತಾವಿಬ್ಬರೂ ಭೇಟಿಯಾಗಿರುವುದಾಗಿಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನಾನು ಬಿಹಾರದ ಮೂಲದವನು. ಬಿಹಾರದಿಂದ ಕರ್ನಾಟಕಕ್ಕೆ ಹೊರಟಿದ್ದೆ. ಆದರೆ, ತಪ್ಪಿ ಪಂಜಾಬ್​ಗೆ ಬಂದಿದ್ದೆ. ನಂತರ ವಿವಿಧ ಸ್ಥಳಗಳಲ್ಲಿ ಅಲೆದಾಡಿ ಅಮೃತಸರಕ್ಕೆ ತಲುಪಿರುವುದಾಗಿ ಎಂದು ಇಂದಲ್​ ಹೇಳಿಕೊಂಡಿದ್ದಾರೆ ಎಂದೂ ಚೌಧರಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಉಗ್ರ ಎಂಬ ಶಂಕೆ ಮೇಲೆ ಸೆರೆ?: ಪಂಜಾಬ್​ನ ಅಮೃತಸರಕ್ಕೆ ತಪ್ಪಿ ಬಂದಿದ್ದ ತನ್ನನ್ನು ಭಯೋತ್ಪಾದಕ ಎಂಬ ಶಂಕೆಯ ಮೇಲೆ ಅಮೃತಸರ ಪೊಲೀಸರು ಬಂಧಿಸಿದ್ದಾರೆ ಎಂದು ಇಂದಲ್ ರಾಯ್ ಹೇಳಿದ್ದಾರೆ. ಅಲ್ಲದೇ, ಜೈಲಿನಿಂದ ಇಂದಲ್​ ರೈ ಅವರನ್ನು ಬಿಡುಗಡೆ ಮಾಡಿಸುವ ದಾರಿ ಬಗ್ಗೆಯೂ ಚೌಧರಿ ತಮ್ಮ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ. ಇಂದಲ್​ ರಾಯ್ ಬಗ್ಗೆ ನಡತೆ ಪ್ರಮಾಣಪತ್ರ (ಕ್ಯಾರೆಕ್ಟರ್ ಸರ್ಟಿಫಿಕೇಟ್)ವನ್ನು ಸ್ಥಳೀಯ ಸಂಸದರು, ಶಾಸಕರು ಅಥವಾ ಎಸ್‌ಪಿಯಿಂದ ಪಡೆಯಬೇಕು. ಆಗ ಮಾತ್ರ ರಾಯ್ ಬಿಡುಗಡೆ ಸಾಧ್ಯ ಎಂದು ಸಲಹೆ ನೀಡಿದ್ದಾರೆ.

ಗ್ರಾಮದ ಮುಖ್ಯಸ್ಥರ ಭೇಟಿಯಾದ ಕುಟುಂಬಸ್ಥರು: ಇಂದಲ್​ ರಾಯ್ ಜೀವಂತವಾಗಿದ್ದಾರೆ ಎಂಬ ಸುದ್ದಿ ತಿಳಿದು ಮತ್ತು ಅವರನ್ನು ಜೈಲಿನಿಂದ ಬಿಡುಗಡೆ ಮಾಡಿಸುವ ಸಲುವಾಗಿ ನೆರವಾಗುವಂತೆ ಗ್ರಾಮದ ಮುಖ್ಯಸ್ಥರನ್ನು ಕುಟುಂಬಸ್ಥರು ಮಾಡಿದ್ದಾರೆ. ಇಂದಲ್ ರಾಯ್ ಅವರನ್ನು ಹುಡುಕಲು ಸಾಕಷ್ಟು ಪ್ರಯತ್ನಿಸಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಆತ ಮೃತಪಟ್ಟಿದ್ದಾನೆ ಎಂದು ನಾವು ಭಾವಿಸಿದ್ದೆವು. ಹಲವು ವರ್ಷಗಳ ನಂತರ ಬದುಕಿದ್ದಾರೆ ಎಂಬ ವಿಷಯ ತಿಳಿದಿದೆ. ಮನೆಗೆ ಬರುವಿಕೆಗಾಗಿ ಕಾತುರದಿಂದ ಕಾಯುತ್ತಿದ್ದೇವೆ ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಬಾಲ್ಯ ವಿವಾಹಗಳ ವಿರುದ್ಧ ಸರ್ಕಾರದ ಕಠಿಣ ಕ್ರಮ: 12ನೇ ವಯಸ್ಸಿನಲ್ಲಿ ಮದುವೆಯಾಗಿದ್ದ ಯುವತಿ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.