ETV Bharat / bharat

ಕೊಲೆ ಯತ್ನ ಆರೋಪ ಹೊತ್ತಾಗ 10 ವರ್ಷದ ಬಾಲಕ: 53ನೇ ವಯಸ್ಸಿನಲ್ಲಿ ಖುಲಾಸೆ - ದೋಷ ಮುಕ್ತ

ಬಿಹಾರದ ಬಕ್ಸರ್​ ಜಿಲ್ಲೆಯಲ್ಲಿ ಕೊಲೆ ಯತ್ನ ಪ್ರಕರಣದ ಆರೋಪಿಯನ್ನು 43 ವರ್ಷಗಳ ಬಳಿಕ ನ್ಯಾಯಾಲಯವು ಖುಲಾಸೆಗೊಳಿಸಿ ಆದೇಶಿಸಿದೆ.

bihar-man-acquitted-in-attempt-to-murder-case-after-43-years-in-buxar
ಕೊಲೆ ಯತ್ನ ಆರೋಪ ಹೊತ್ತಾಗ 10 ವರ್ಷದ ಬಾಲಕ: 53ನೇ ವಯಸ್ಸಿನಲ್ಲಿ ಖುಲಾಸೆ
author img

By

Published : Oct 12, 2022, 6:33 PM IST

ಬಕ್ಸರ್ (ಬಿಹಾರ): ಕೊಲೆ ಯತ್ನ ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 43 ವರ್ಷಗಳ ಬಳಿಕ ಖುಲಾಸೆಗೊಂಡಿದ್ದಾರೆ. ಹತ್ತು ವರ್ಷದ ಬಾಲಕನಿದ್ದಾಗ ಕೊಲೆ ಯತ್ನದ ಆರೋಪ ಹೊತ್ತಿದ್ದ ಆ ವ್ಯಕ್ತಿಗೆ ಈಗ 53 ವರ್ಷ ಎಂಬುವುದೇ ಈ ಪ್ರಕರಣದ ಮತ್ತೊಂದು ವಿಶೇಷತೆ.

ಬಿಹಾರದ ಬಕ್ಸರ್​ ಜಿಲ್ಲೆಯ ಚೌಗೈ ನಿವಾಸಿ ಮುನ್ನಾ ಸಿಂಗ್ ಎಂಬ ವ್ಯಕ್ತಿಯೇ ದೋಷ ಮುಕ್ತರಾದವರು. ಶ್ಯಾಮ್ ಬಿಹಾರಿ ಸಿಂಗ್ ಅವರ ಮಗನಾದ ಮುನ್ನಾ ಸಿಂಗ್​ ತನ್ನ 10 ವರ್ಷ 5 ತಿಂಗಳ ವಯಸ್ಸಿನಲ್ಲಿ ಅಂದರೆ 1979ರ ಸೆಪ್ಟೆಂಬರ್ 7ರಂದು ಅಂಗಡಿಯೊಂದಕ್ಕೆ ನುಗ್ಗಿ ಗುಂಡು ಹಾರಿಸಿದ್ದರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನ್ನಾ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 148 ಮತ್ತು 307ರ ಅಡಿ ದುಮ್ರಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಾಕ್ಷಿದಾರರು ಗೈರು, ಮುನ್ನಾ ಪಾರು: ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಮುನ್ನಾ ಸಿಂಗ್ ಎಫ್‌ಐಆರ್ ದಾಖಲಾದ ನಂತರ ಎಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಇದಾದ ಬಳಿಕ 2012ರಲ್ಲಿ ಪ್ರಕರಣವನ್ನು ಬಾಲಾಪರಾಧಿ ನ್ಯಾಯ ಮಂಡಳಿಗೆ ವರ್ಗಾವಹಿಸಲಾಗಿತ್ತು. ಈ ಪ್ರಕರಣದ ಸಾಕ್ಷ್ಯ ನೀಡಲು ಪ್ರಾಸಿಕ್ಯೂಷನ್​ಅನ್ನು ಹಲವು ಬಾರಿ ಕರೆಯಲಾಗಿತ್ತು.

ಆದರೆ, ವಿಚಾರಣೆ ವೇಳೆ ಯಾವುದೇ ಸಾಕ್ಷಿಗಳು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಮುನ್ನಾ ಸಿಂಗ್​ ವಿರುದ್ಧ ಆರೋಪವನ್ನು ಸಾಬೀತುಪಡಿಸಲು ಸಾಕ್ಷಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಅಲ್ಲದೇ, ಆತನ ವಿರುದ್ಧ ಸಾಕ್ಷಿ ಹೇಳುವುದು ಅಗತ್ಯವಾಗಿತ್ತು. ಆದರೆ, ಪದೇ ಪದೆ ಕರೆದರೂ ಸಾಕ್ಷಿ ಹೇಳಲು ಯಾರೂ ಬಂದಿರಲಿಲ್ಲ. ಆದ್ದರಿಂದ ಇದೇ ಮಂಗಳವಾರ ಬಾಲಾಪರಾಧ ನ್ಯಾಯ ಮಂಡಳಿಯ ನ್ಯಾಯಾಧೀಶ ಡಾ.ರಾಜೇಶ್ ಸಿಂಗ್ ಅವರು ಮುನ್ನಾ ಸಿಂಗ್ ಅವರನ್ನು ಆರೋಪದಿಂದ ಮುಕ್ತಗೊಳಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ: 1998ರಲ್ಲಿ 45 ರೂ. ಕಳವು.. ಸುದೀರ್ಘ 24 ವರ್ಷಗಳ ವಿಚಾರಣೆ.. ಅಪರಾಧಿಗೆ 4 ದಿನ ಜೈಲು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.