ಜಮುಯಿ (ಬಿಹಾರ) : ಒಂದೇ ಕಾಲಿನಲ್ಲಿ 1 ಕಿಲೋಮೀಟರ್ ದೂರದ ಶಾಲೆಗೆ ತುಂಬಾ ಕಷ್ಟಪಟ್ಟು ನಡೆದು ಬರುತ್ತಿದ್ದ ಹುಡುಗಿ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಅಲ್ಲಿನ ಜಿಲ್ಲಾಡಳಿತ ಹುಡುಗಿಯ ನೆರವಿಗೆ ಬಂದಿದೆ. ಕೃತಕ ಕಾಲನ್ನು ಜೋಡಿಸಿ ಬಾಲಕಿ ಸರಾಗವಾಗಿ ಓಡಾಡಲು ನೆರವಾಗಿದ್ದಾರೆ.
ಬಿಹಾರದ 10 ವರ್ಷದ ಬಾಲಕಿ ತನ್ನ ಮನೆಯಿಂದ 1 ಕಿಲೋಮೀಟರ್ ದೂರ ಇದ್ದ ಶಾಲೆಗೆ ಒಂದೇ ಕಾಲಿನಲ್ಲಿ ಜಿಗಿಯುತ್ತ ಹೋಗುತ್ತಿರುವ ವಿಡಿಯೋ ವೈರಲ್ ಆಗಿ ಭಾರಿ ಸದ್ದು ಮಾಡಿತ್ತು. ಬಳಿಕ ಈಕೆಗೆ ನೆರವಿನ ಹಸ್ತ ಚಾಚುವುದಾಗಿ ನಟ ಸೋನು ಸೂದ್ ಅವರು ಟ್ವೀಟ್ ಮಾಡಿದ್ದರು.
ಇದೀಗ ಆ ಬಾಲಿಕಿಯ ನೆರವಿಗೆ ಬಂದಿರುವ ಜಿಲ್ಲಾಡಳಿತ ಬಾಲಕಿಗೆ ಕೃತಕ ಕಾಲು ಜೋಡಿಸಲಾಗಿದೆ. ಇದನ್ನು ಟ್ವೀಟ್ ಮಾಡಿರುವ ಆರೋಗ್ಯ ಇಲಾಖೆ ಸಚಿವ ಇಂದೊಂದು ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ. ಅಲ್ಲದೇ ಜಿಲ್ಲಾಡಳಿತ ಕೂಡ ನಟ ಸೋನು ಸೂದ್ ಫೌಂಡೇಷನ್ಗೆ ಟ್ಯಾಗ್ ಮಾಡಿ, ಬಾಲಕಿಗೆ ಅಗತ್ಯ ನೆರವು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಓದಿ: ಒಂದೇ ಕಾಲಲ್ಲಿ ಕಿಲೋಮೀಟರ್ ನಡೆದು ಶಾಲೆಗೆ ಬರುವ ವಿದ್ಯಾರ್ಥಿನಿ.. ದಿವ್ಯಾಂಗ ಸೀಮಾ ಎಲ್ಲರಿಗೂ ಸ್ಫೂರ್ತಿ..