ETV Bharat / bharat

Suspectd Heat wave: ಗಂಗಾ ನದಿಯಲ್ಲಿ ತೇಲಿ ಬಂದ ಶಂಕಿತ 'ಬಿಸಿಗಾಳಿ' ಸಂತ್ರಸ್ತರ ಶವಗಳು - Heat wave

ಬಿಸಿಗಾಳಿಯಿಂದ ಸಾವನ್ನಪ್ಪಿರುವ ಶಂಕಿತ ನಾಲ್ವರ ಮೃತದೇಹಗಳು ಗಂಗಾ ನದಿಯಲ್ಲಿ ತೇಲಿ ಬಂದ ಘಟನೆ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ವರದಿಯಾಗಿದೆ.

Bihar: Four bodies of suspected heat wave victims wash ashore in Ganga in Buxar
ಗಂಗಾ ನದಿಯಲ್ಲಿ ತೇಲಿ ಬಂದ ಶಂಕಿತ 'ಬಿಸಿಗಾಳಿ' ಸಂತ್ರಸ್ತರ ಶವಗಳು
author img

By

Published : Jun 24, 2023, 6:35 PM IST

ಬಕ್ಸರ್ (ಬಿಹಾರ): 2ನೇ ಕೋವಿಡ್ ಅಲೆಯಲ್ಲಿ ಸಂದರ್ಭದಲ್ಲಿ ಮೃತಪಟ್ಟವರ ಶವಗಳು ಗಂಗಾ ನದಿಯಲ್ಲಿ ತೇಲಿ ಬಂದಿದ್ದವು. ಇಂತಹದ್ದೇ ಆತಂಕಕಾರಿ ಬೆಳವಣಿಗೆಯನ್ನು ನೆನಪಿಸುವ ಘಟನೆ ಬಿಹಾರದಲ್ಲಿ ನಡೆದಿದೆ. ಇತ್ತೀಚಿಗೆ ಬಿಸಿಗಾಳಿಯಿಂದ ಸಾವನ್ನಪ್ಪಿರುವ ಶಂಕಿತ ನಾಲ್ವರ ಮೃತದೇಹಗಳು ಬಕ್ಸರ್ ಜಿಲ್ಲೆಯ ಗಂಗಾ ನದಿಯಲ್ಲಿ ಪತ್ತೆಯಾಗಿವೆ. ಸರಿಯಾದ ಶವಸಂಸ್ಕಾರ ಮಾಡಲು ಸಾಧ್ಯವಾಗದೇ ಶವಗಳನ್ನು ನದಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ಇಲ್ಲಿನ ಚೌಸಾ ಬ್ಲಾಕ್‌ನ ಮಹಾದೇವ ಗಂಗಾ ಘಾಟ್‌ಗೆ ನಾಲ್ಕು ಮೃತದೇಹಗಳು ಕೊಚ್ಚಿಕೊಂಡು ಬಂದಿವೆ. ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಸಂತ್ರಸ್ತರ ಸಾವಿಗೆ ಕಾರಣದ ಬಗ್ಗೆ ಅಧಿಕಾರಿಗಳು ನಿಖರ ಮಾಹಿತಿ ನೀಡಿಲ್ಲ. ಆದರೆ, ರಾಜ್ಯದಲ್ಲಿ ಜನರನ್ನು ಸಾಕಷ್ಟು ಕಂಗೆಡಿಸಿರುವ ಬಿಸಿಗಾಳಿಯಿಂದ ಇವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಮೃತರು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರಾಗಿದ್ದಾರೆ. ಅವರ ಕುಟುಂಬಗಳು ಸರಿಯಾದ ಶವಸಂಸ್ಕಾರದ ಖರ್ಚನ್ನು ಭರಿಸಲಾಗದ ಪರಿಸ್ಥಿತಿಯಲ್ಲಿವೆ. ಇದೇ ಕಾರಣಕ್ಕೆ ಶವಗಳನ್ನು ನದಿಗೆ ಎಸೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಚೌಸಾ ವಲಯಾಧಿಕಾರಿ ಬ್ರಿಜ್‌ ಬಿಹಾರಿ ಕುಮಾರ್, ಗಂಗಾ ನದಿಯಲ್ಲಿ ದಡಕ್ಕೆ ಕೊಚ್ಚಿ ಬಂದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನದಿಯಲ್ಲಿ ಮೃತದೇಹಗಳನ್ನು ತೇಲಿ ಬಿಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Heatwave: ಬಿಸಿಲಿಗೆ ಉತ್ತರ ಪ್ರದೇಶ ತತ್ತರ: ಒಂದೇ ಜಿಲ್ಲೆಯಲ್ಲಿ ಎರಡು ದಿನದೊಳಗೆ 34 ಜನರ ಸಾವು

ಬಿಸಿಗಾಳಿಗೆ ಉತ್ತರ ಭಾರತ ತತ್ತರ: ಈ ಬಾರಿ ಬಿಸಿಲಿಗೆ ಭಾರತದ ಹಲವು ರಾಜ್ಯಗಳಲ್ಲಿ ಜನತೆ ತತ್ತರಿಸುವಂತೆ ಆಗಿದೆ. ಉತ್ತರ ಪ್ರದೇಶ, ಬಿಹಾರದಲ್ಲಿ ಬಿಸಿಗಾಳಿಯಿಂದಲೇ ಸಾಕಷ್ಟು ಸಾವು-ನೋವು ಸಂಭವಿಸಿದೆ. ಕಾಯಿಲೆಗಳಿಂದ ಬಳಲುತ್ತಿದ್ದ ಜನರು ತೀವ್ರತರವಾದ ಶಾಖದಿಂದಾಗಿ ಆರೋಗ್ಯ ಸ್ಥಿತಿ ಹದಗೆಟ್ಟು ಹಲವರು ಮೃತಪಟ್ಟಿರುವುದು ವರದಿಯಾಗಿದೆ. ಅದರಲ್ಲೂ, ಹೃದಯಾಘಾತ, ಬ್ರೈನ್ ಸ್ಟ್ರೋಕ್ ಮತ್ತು ಅತಿಸಾರದಿಂದ ಹೆಚ್ಚಿನ ಸಾವುಗಳು ಸಂಭವಿಸಿವೆ. ಹೀಗಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಹಗಲಿನ ಹೊತ್ತಿನಲ್ಲಿ ಮನೆಯೊಳಗೆ ಇರಲು ವೈದ್ಯರು ಸಲಹೆ ನೀಡಿದ್ದರು.

ಉತ್ತರ ಪ್ರದೇಶದ ಒಂದರಲ್ಲೇ ಇದೇ ವಾರದ ನಾಲ್ಕು ದಿನಗಳಲ್ಲಿ ಸುಮಾರು 68ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಪೊಲೀಸ್​ ಕರ್ತವ್ಯದಲ್ಲಿದ್ದ ಮೂವರು ಅಧಿಕಾರಿಗಳು ಸಹ ಬಿಸಿಲಿನ ಹೊಡೆತಕ್ಕೆ ಸಿಲುಕಿ ಅಸುನೀಗಿದ್ದಾರೆ. ಚಾಂದೌಲಿ ಜಿಲ್ಲೆಯಲ್ಲಿ ಬಿಸಿಗಾಳಿಗೆ ಇಬ್ಬರು ಇನ್ಸ್ ಪೆಕ್ಟರ್​​​ಗಳು ಸಾವನ್ನಪ್ಪಿದ್ದರು. ಬಾಬುರಿ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದ ಸಬ್ ಇನ್ಸ್​ಪೆಕ್ಟರ್ ರವೀಂದರ್ ಸಿಂಗ್ ಮತ್ತು ಚಂದೌಲಿ ಪೊಲೀಸ್ ಲೈನ್​ನಲ್ಲಿ ನಿಯೋಜನೆಗೊಂಡಿದ್ದ ಸಬ್ ಇನ್ಸ್​ಪೆಕ್ಟರ್ ರಾಮಾಶ್ರಯ ಎಂಬುವವರು ಮೃತಪಟ್ಟಿದ್ದರು. ಇನ್ನೊಂದು ಕಡೆ ಬಲರಾಂಪುರದಲ್ಲಿ ಸಿಎಂ ಕಾರ್ಯಕ್ರಮದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಬ್​​ ಇನ್ಸ್​ಪೆಕ್ಟರ್​ ಕನ್ಹಯ್ಯಾ ಕುಮಾರ್​ ಎಂಬುವವರೇ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಬಿಸಿಲಿನ ದಗೆ ತಾಳಲಾರದೇ ಮೂವರು ಸಬ್​​​ಇನ್ಸ್​ಪೆಕ್ಟರ್​​ಗಳ ಸಾವು.. ಉತ್ತರ ಭಾರತದಲ್ಲಿ ಹೀಟ್​​​ ಸ್ಟ್ರೋಕ್​ ಅಟ್ಟಹಾಸ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.