ETV Bharat / bharat

ಯುವಕ ಉಗುಳಿದ್ದಕ್ಕೆ ಪೊಲೀಸರಿಂದ ಅಮಾನವೀಯ ಶಿಕ್ಷೆ.. ವಿಡಿಯೋ ವೈರಲ್: ಪೊಲೀಸರ ಅಮಾನತು - ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ

ಬಿಹಾರದ ಸಮಸ್ತಿಪುರದಲ್ಲಿ ಪೊಲೀಸ್​ರಿಂದ ನಡೆದ ಅಮಾನವೀಯ ಕೃತ್ಯ ಬಯಲಿಗೆ ಬಂದಿದೆ. ಮುಜಾಫರ್‌ಪುರದ ಯುವಕನನ್ನು ಪೊಲೀಸರು ತೀವ್ರವಾಗಿ ಥಳಿಸಿದ್ದಲ್ಲದೇ ಆತನಿಂದ ಐದು ಬಾರಿ ಉಗುಳುವಂತೆ ಮಾಡಿ ನೆಕ್ಕಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Police beaten youth ,licked spit in samastipur
ಸಮಸ್ತಿಪುರದಲ್ಲಿ ಪೊಲೀಸ್ ಪೇದೆ ಯುವಕನಿಂದ ಉಗುಳಿಸಿಕೊಂಡಿರುವುದು
author img

By

Published : Jul 1, 2023, 4:53 PM IST

Updated : Jul 1, 2023, 10:34 PM IST

ಯುವಕ ಉಗುಳಿದ್ದಕ್ಕೆ ಪೊಲೀಸರಿಂದ ಅಮಾನವೀಯ ಶಿಕ್ಷೆ

ಸಮಸ್ತಿಪುರ: ಬಿಹಾರದಲ್ಲಿ ಪೊಲೀಸರು ಜನರ ಮೇಲೆ ದರ್ಪ ತೋರಿಸುವ ಸುದ್ದಿಗಳು ವರದಿಯಾಗುತ್ತಲೇ ಇರುತ್ತವೆ. ಮುಜಫರ್​​ಪುರಕ್ಕೆ ಹೊರಟಿದ್ದ ಯುವಕನೊಬ್ಬ ಬಸ್ ನಿಂತಿದ್ದ ವೇಳೆ ಗುಟ್ಕಾ ತಿಂದು ಉಗುಳಿದ್ದಾನೆ. ಆ ವೇಳೆ, ಸ್ವಲ್ಪ ಮುಂದೆ ಬಸ್ ಹೋಗಿದೆ.ಯುವಕ ಗುಟ್ಕಾ ಉಗುಳಿದ್ದು, ಬಸ್ ಬದಿಗೆ ನಿಂತಿದ್ದ ಹಾಕ್ಸ್ ತಂಡದ ಪೊಲೀಸ್ ಪೇದೆ ಮೇಲೆ ಬಿದ್ದಿದೆ.

ಇದರಿಂದ ಕುಪಿತಗೊಂಡ ಹಾಕ್ಸ್ ತಂಡದ ಪೇದೆ ಯುವಕನನ್ನು ತೀವ್ರ ಥಳಿಸಿದ ಮೇಲೆ ಐದು ಬಾರಿ ಉಗುಳುವಂತೆ ಪ್ರಚೋದಿಸಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ಆದ ಬಳಿಕ ಎಸ್ಪಿ ವಿನಯ್ ತಿವಾರಿ, ಪೊಲೀಸರ ಹಾಕ್ಸ್ ತಂಡವನ್ನು ಅಮಾನತುಗೊಳಿಸಿದ್ದಾರೆ. ನಿಂತಿದ್ದ ಬಸ್ ಕೆಳಗಿದ್ದ ಖಾಲಿ ಜಾಗವನ್ನು ನೋಡಿ ಮುಜಫರ್​​​ಪುರಕ್ಕೆ ತೆರಳುತ್ತಿದ್ದ ಯುವಕನೊಬ್ಬ ಗುಟ್ಕಾ ತಿಂದು ಉಗುಳಿರುವುದು ನಗರದ ಪಟೇಲ್ ಮೈದಾನದ ಗೋಲಂಬರ್ ಬಳಿ ನಡೆದಿದೆ. ಯುವಕ ಉಗುಳುತ್ತಿದ್ದಾಗ ನಿಂತಿದ್ದ ಬಸ್​ನ್ನು ಕಂಡೆಕ್ಟರ್ ಸ್ವಲ್ಪ ಮುಂದಕ್ಕೆ ಹೋಗುವಂತೆ ಸೂಚಿಸಿದ್ದಾರೆ. ಈ ವೇಳೆ ರಸ್ತೆ ಬದಿ ಕರ್ತವ್ಯ ನಿರತ ಪೊಲೀಸರ ಹಾಕ್ಸ್ ತಂಡದ ಪೇದೆಯೊಬ್ಬನ ದೇಹದ ಮೇಲೆ ಗುಟ್ಕಾ ಉಗುಳು ಬಿದ್ದಿದೆ. ಇದರಿಂದ ಆಕ್ರೋಶಗೊಂಡ ಪೊಲೀಸ್ ಪೇದೆ ಬಸ್ ಹಿಂದೆ ಓಡಿ ಹೋಗಿ ಯುವಕನನ್ನು ಕೆಳಗಿಳಿಸಿ, ತೀವ್ರವಾಗಿ ಥಳಿಸಿದ್ದಾನೆ ಅಲ್ಲದೇ ಯುವಕನಿಂದ ಐದು ಬಾರಿ ಉಗುಳವಂತೆ ಮಾಡಿ, ಆತನಿಂದ ಅದನ್ನು ಬಾಯಿಂದ ನೆಕ್ಕುವಂತೆ ಮಾಡಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ.

ಸಂತ್ರಸ್ತ ಹೇಳಿದ್ದೇನು?: ಯುವಕ ಸಮಸ್ತಿಪುರದಿಂದ ಮುಜಾಫರ್‌ಪುರಕ್ಕೆ ಪ್ರಯಾಣಿಸುತ್ತಿದ್ದ. ಸಣ್ಣ ತಪ್ಪಿಗೆ ಪೊಲೀಸ್​ ಪೇದೆ ಉಗ್ರ ಶಿಕ್ಷೆ ನೀಡಿದ್ದಾರೆ. ಹೀಗೆ ಪೊಲೀಸರಿಂದ ಅಮಾನವೀಯ ಶಿಕ್ಷೆಗೆ ಒಳಗಾದ ವ್ಯಕ್ತಿಯನ್ನು ಮುಜಾಫರ್‌ಪುರ ಜಿಲ್ಲೆಯ ನಿವಾಸಿ ಕಿಶೋರ್ ಕುಮಾರ್ (ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದೆ. ಸಮಸ್ತಿಪುರ ಬಸ್ ನಿಲ್ದಾಣದಿಂದ ತಾನೂ ಬಸ್ ಸೀಟು ಕಾಯ್ದಿದಿರಿಸಿದ ನಂತರ ಮುಜಫರ್‌ಪುರಕ್ಕೆ ಹೋಗುತ್ತಿದ್ದೆ, ಈ ಮಧ್ಯೆ ಈ ಘಟನೆ ಸಂಭವಿಸಿದೆ ಎಂದು ಸಂತ್ರಸ್ತ ತಿಳಿಸಿದ್ದಾನೆ.

ಗುಟ್ಕಾ ತಿಂದು ಬಸ್ ಹತ್ತಿದ್ದ ಬಳಿಕ ಗೋಲಂಬರ್ ಬಳಿ ನಿಲ್ಲಿಸಿದ್ದ ಬಸ್​ನಿಂದ ಗುಟ್ಕಾ ಉಗುಳಿದ್ದೆನು. ಈ ಮಧ್ಯೆ ಚಾಲಕ ಬಸ್ ಮುಂದೆ ಚಲಿಸುವಂತೆ ಸೂಚಿಸಿದ್ದ. ಈ ವೇಳೆ ಪೊಲೀಸರ ಮೈಮೇಲೆ ನನ್ನ ಗುಟ್ಕಾ ಉಗುಳು ಬಿದ್ದಿತ್ತು. ಪೊಲೀಸ್ ಪೇದೆ ಕೋಪಗೊಂಡು ನನ್ನನು ತೀವ್ರವಾಗಿ ಥಳಿಸಿದ್ದಲ್ಲದೇ, ಆ ಮೇಲೆ ಐದು ಬಾರಿ ಉಗುಳುವಂತೆ ಮಾಡಿ ಬಾಯಿಂದ ಸ್ವಚ್ಚಗೊಳಿಸುವಂತೆ ಶಿಕ್ಷೆ ನೀಡಿದ್ದಾರೆ ಎಂದು ಸಂತ್ರಸ್ತ ಯುವಕ ಆರೋಪಿಸಿದ್ದಾನೆ.

ಪೊಲೀಸ್ ತಂಡ ಅಮಾನತು: ಈ ಘಟನೆ ಬಳಿಕ ಎಸ್ಪಿ ವಿನಯ್ ತಿವಾರಿ ಅವರು ಕ್ರೀಪ್ರ ಕ್ರಮ ಕೈಗೊಂಡು ಗೋಲಂಬರ್ನಲ್ಲಿ ಬೀಡುಬಿಟ್ಟಿದ್ದ ತಂಡವನ್ನು ಅಮಾನತುಗೊಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಡಿಎಸ್ಪಿಗೆ, ಎಸ್ಪಿ ಸೂಚನೆ ನೀಡಿದ್ದಾರೆ. ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಯುವಕನನ್ನು ಅನಧಿಕೃತವಾಗಿ ಥಳಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಇದು ತಪ್ಪು, ಕ್ಷಿಪ್ರವಾಗಿ ಕಾರ್ಯನಿರ್ವಹಿಸಿ, ಟೀಮ್ ಹಾಕ್ಸ್ ಅನ್ನು ಅಮಾನತುಗೊಳಿಸಲಾಗಿದೆ. ತನಿಖೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು"- ಎಸ್​​​​​ಪಿ ವಿನಯ್ ತಿವಾರಿ ತಿಳಿಸಿದ್ದಾರೆ.

ಇದನ್ನೂಓದಿ:ಅವಧಿ ಮುಗಿದ ಆಹಾರ ಉತ್ಪನ್ನಗಳ ಮರು ಪ್ಯಾಕಿಂಗ್.. ಗೋದಾಮಿನ ಮೇಲೆ ಅಧಿಕಾರಿಗಳ ದಾಳಿ

Last Updated : Jul 1, 2023, 10:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.