ಪಾಟ್ನಾ (ಬಿಹಾರ) : ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಕ್ಷಾ ಬಂಧನ ದಿನವಾದ ಇಂದು ಪಾಟ್ನಾದಲ್ಲಿ ಮರಗಳಿಗೆ ರಾಖಿಗಳನ್ನು ಕಟ್ಟಿದರು.
2012ರಿಂದ ಬಿಹಾರದ ಹಸಿರು ಪರಿಸರವನ್ನು ರಕ್ಷಿಸಲು ನಮ್ಮ ಎನ್ಡಿಎ ನೇತೃತ್ವದ ಸರ್ಕಾರ ರಕ್ಷಾಬಂಧನವನ್ನು 'ವೃಕ್ಷ ರಕ್ಷಾ ದಿವಸ್' (ವೃಕ್ಷ ಸಂರಕ್ಷಣಾ ದಿನ) ಎಂದು ಆಚರಿಸುತ್ತಾ ಬಂದಿದೆ. ಸಸಿಗಳನ್ನು ನೆಡುತ್ತಾ, ಪರಿಸರವನ್ನು ಸಂರಕ್ಷಿಸುತ್ತಾ, ಮರಗಿಡಗಳನ್ನು ಉಳಿಸಿ ಎಂದು ಸಿಎಂ ನಿತೀಶ್ ಕುಮಾರ್ ಕರೆ ನೀಡಿದ್ದಾರೆ.
'ಜಲ ಜೀವನ್ ಹರಿಯಾಲಿ' ಅಭಿಯಾನದಡಿ ಸಸಿಗಳನ್ನು ನೆಡುವತ್ತ ರಾಜ್ಯ ಸರ್ಕಾರ ಗಮನ ಹರಿಸಿದ್ದು, ಭವಿಷ್ಯದ ಪೀಳಿಗೆಗೆ ಪರಿಸರ ಸಂರಕ್ಷಣೆಯ ಬಗ್ಗೆ ಅರಿವಿರಬೇಕೆಂಬುದು ನಮ್ಮ ಉದ್ದೇಶ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಇತ್ತ ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಪುರದಲ್ಲಿ ಮಕ್ಕಳು ಮತ್ತು ವಯಸ್ಕರರು ಕೂಡ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಮರಗಳಿಗೆ ರಾಖಿಗಳನ್ನು ಕಟ್ಟಿದ್ದಾರೆ.