ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗಿಂತ ಪುತ್ರನ ಬಳಿ ಐದು ಪಟ್ಟು ಆಸ್ತಿ ಇದೆ.
ರಾಜ್ಯ ಸರ್ಕಾರದ ವೆಬ್‌ಸೈಟ್‌ನಲ್ಲಿ ಡಿಸೆಂಬರ್ 31 ರಂದು ಪ್ರಕಟಿಸಿರುವ ಆಸ್ತಿ ವಿವರಗಳ ಪ್ರಕಾರ, ಸಿಎಂ ನಿತೀಶ್ ಕುಮಾರ್ ಬಳಿ 29,385 ರೂಪಾಯಿ ಹಣವಿದೆ. ಬ್ಯಾಂಕ್‌ಗಳಲ್ಲಿ ಸುಮಾರು 42,763 ರೂಪಾಯಿ ಡೆಪಾಸಿಟ್ ಮಾಡಿದ್ದಾರೆ. ದೆಹಲಿಯ ದ್ವಾರಕದಲ್ಲಿರುವ ಸಹಕಾರಿ ಹೌಸಿಂಗ್ ಸೊಸೈಟಿಯಲ್ಲಿ 1 ಫ್ಲ್ಯಾಟ್ ಹೊಂದಿದ್ದಾರೆ. ತಮ್ಮ ಬಳಿ 13 ಹಸುಗಳು ಹಾಗೂ 9 ಕರುಗಳಿವೆ ಎಂದು ನಿತೀಶ್ ಘೋಷಿಸಿಕೊಂಡಿದ್ದಾರೆ.
ಪುತ್ರ ನಿಶಾಂತ್ ಬಳಿ 1.63 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ 1.98 ಕೋಟಿ ರೂ.ಗಳ ಸ್ಥಿರಾಸ್ತಿ ಇದೆ. ಇವರಿಗೆ ನಳಂದ ಜಿಲ್ಲೆಯಲ್ಲಿ ಕೃಷಿ ಭೂಮಿ ಇದ್ದು, ತಮ್ಮ ಸ್ವಂತ ಗ್ರಾಮ ಕಲ್ಯಾಣ್ ಭಾಗ್‌ನಲ್ಲಿ ಕೃಷಿಯೇತರ ಭೂಮಿ ಹೊಂದಿದ್ದಾರೆ. ರಾಜಧಾನಿ ಪಾಟ್ನಾದಲ್ಲಿ ಮನೆಗಳಿವೆ.
ವರ್ಷದ ಕೊನೆಯ ವೇಳೆಗೆ ಸಚಿವ ಸಂಪುಟದ ಸದಸ್ಯರು ತಮ್ಮ ಆಸ್ತಿ ಘೋಷಿಸಿಕೊಳ್ಳುವುದನ್ನು ಸಿಎಂ ನಿತೀಶ್ ಕುಮಾರ್ ಸರ್ಕಾರ ಕಡ್ಡಾಯಗೊಳಿಸಿದೆ. ಅದರಂತೆ ಸಿಎಂ ಕೂಡ ತಮ್ಮ ಆಸ್ತಿ ಘೋಷಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮೀರತ್‌ಗಿಂದು ಮೋದಿ ಭೇಟಿ: ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿವಿಗೆ ಶಂಕುಸ್ಥಾಪನೆ