ಪಾಟ್ನಾ: 243 ಕ್ಷೇತ್ರಗಳಿಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆ ಮತದಾನ ಇಂದು ಮುಕ್ತಾಯಗೊಂಡಿದ್ದು, ನವೆಂಬರ್ 10ರಂದು ಅಭ್ಯರ್ಥಿಗಳ ಭವಿಷ್ಯ ಬಹಿರಂಗಗೊಳ್ಳಲಿದೆ. ಮೂರು ಹಂತಗಳಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆದಿದ್ದು, ಅಕ್ಟೋಬರ್ 27, ನವೆಂಬರ್ 3 ಹಾಗೂ 7ರಂದು ಮೂರು ಮತದಾನ ನಡೆದಿತ್ತು. ಮೊದಲನೇ ಹಂತದಲ್ಲಿ 71 ಕ್ಷೇತ್ರ, ಎರಡನೇ ಹಂತದಲ್ಲಿ 94 ಕ್ಷೇತ್ರ ಹಾಗೂ ಕೊನೆಯ ಹಂತದಲ್ಲಿ 78 ಕ್ಷೇತ್ರದಲ್ಲಿ ವೊಟಿಂಗ್ ಆಗಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ಜೆಡಿ ಮೈತ್ರಿ ಮಾಡಿಕೊಂಡು ತೇಜಸ್ವಿ ಯಾದವ್ ನೇತೃತ್ವದಲ್ಲಿ ಕಣಕ್ಕಿಳಿದಿದೆ. ಬಿಜೆಪಿ-ಜೆಡಿಯು ಮೈತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದೆ.
ಮೂರನೇ ಹಂತದಲ್ಲಿ ಶೇ. 55.22ರಷ್ಟು ವೊಟಿಂಗ್ ಆಗಿದ್ದು, 2015ರಲ್ಲಿ ಶೇ. 56.66ರಷ್ಟು ಮತದಾನವಾಗಿತ್ತು. ಇಂದಿನ ಕ್ಷೇತ್ರಗಳ ಚುನಾವಣಾ ಕಣದಲ್ಲಿ 110 ಮಹಿಳೆಯರು ಸೇರಿ 1,204 ಅಭ್ಯರ್ಥಿಗಳಿದ್ದಾರೆ.