ನಳಂದ (ಬಿಹಾರ) : ಆಟವಾಡುತ್ತ ತೆರೆದ ಕೊಳವೆಬಾವಿಯಲ್ಲಿ ಬಿದ್ದಿದ್ದ 3 ವರ್ಷದ ಮಗುವನ್ನು ಸತತ 5 ತಾಸುಗಳ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿದೆ. ಮಗು ಸದ್ಯ ಆರೋಗ್ಯವಾಗಿದ್ದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. "ಮಗುವನ್ನು ರಕ್ಷಿಸಲಾಗಿದ್ದು, ಮಗು ಆರೋಗ್ಯವಾಗಿದೆ. ಮಗುವನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಸುಮಾರು 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದ್ದೇವೆ" ಎಂದು ಬಿಹಾರ ನಳಂದದ ಎನ್‌ಡಿಆರ್‌ಎಫ್ ಅಧಿಕಾರಿ ರಂಜೀತ್ ಕುಮಾರ್ ಮಾಹಿತಿ ನೀಡಿದರು.
-
#WATCH | Bihar: The child who fell into a borewell in Kul village in Nalanda has been rescued. More details are awaited. https://t.co/G6FW8RDIJJ pic.twitter.com/KQouMHkffD
— ANI (@ANI) July 23, 2023 " class="align-text-top noRightClick twitterSection" data="
">#WATCH | Bihar: The child who fell into a borewell in Kul village in Nalanda has been rescued. More details are awaited. https://t.co/G6FW8RDIJJ pic.twitter.com/KQouMHkffD
— ANI (@ANI) July 23, 2023#WATCH | Bihar: The child who fell into a borewell in Kul village in Nalanda has been rescued. More details are awaited. https://t.co/G6FW8RDIJJ pic.twitter.com/KQouMHkffD
— ANI (@ANI) July 23, 2023
ಘಟನೆಯ ಹಿನ್ನೆಲೆ: 3 ವರ್ಷದ ಮಗುವೊಂದು 40 ಅಡಿ ಆಳದ ಕೊಳವೆಬಾವಿಯೊಳಗೆ ಆಟವಾಡುತ್ತ ಕೊಳವೆ ಬಾವಿಯೊಳಗೆ ಬಿದ್ದಿರುವ ದಾರುಣ ಘಟನೆ ಬಿಹಾರದ ನಳಂದದ ಕುಲ್ ಗ್ರಾಮದಲ್ಲಿ ಭಾನುವಾರ ನಡೆದಿತ್ತು. ಮಗುವಿನ ರಕ್ಷಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು. ಬಾವಿಗೆ ಬಿದ್ದ ಮಗುವಿನ ಹೆಸರು ಶಿವಂ ಕುಮಾರ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈತರೊಬ್ಬರು ಬೋರ್ ವೆಲ್ ಕೊರೆಸಿ ಅದಕ್ಕೆ ಮುಚ್ಚಳ ಹಾಕದ ಕಾರಣದಿಂದ ಈ ದುರಂತ ಸಂಭವಿಸಿದೆ. ಶಿವಂ ಜೊತೆ ಆಟವಾಡುತ್ತಿದ್ದ ಮಕ್ಕಳು ಪೋಷಕರಿಗೆ ಮಾಹಿತಿ ನೀಡಿದ ನಂತರ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ನಳಂದ ನಗರ ಪಂಚಾಯತ್ ನಳಂದ ಉಪಾಧ್ಯಕ್ಷ ನಳಿನ್ ಮೌರ್ಯ ರಕ್ಷಣಾ ಕಾರ್ಯಾಚರಣೆಗೆ ಸಹಕರಿಸುತ್ತಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಮೌರ್ಯ, ರೈತರೊಬ್ಬರು ಈ ಬೋರ್‌ವೆಲ್ ಅನ್ನು ಕೊರೆಸಿದ್ದಾರೆ. ಆದರೆ ಈ ಬೋರ್‌ವೆಲ್‌ನಲ್ಲಿ ನೀರು ಬಂದಿರಲಿಲ್ಲ. ಹೀಗಾಗಿ ಅವರು ಬೇರೆ ಕಡೆ ಬೋರ್‌ವೆಲ್ ಕೊರೆಸಿದರು. ಆದರೆ ಇದನ್ನು ಮುಚ್ಚದೆ ಹಾಗೆಯೇ ಬಿಟ್ಟರು ಎಂದು ಹೇಳಿದರು.
ಮಗು ಇನ್ನೂ ಜೀವಂತವಾಗಿದ್ದು, ಅದರ ಧ್ವನಿ ಈಗಲೂ ಕೇಳಿಸುತ್ತಿದೆ ಎಂದು ಸರ್ಕಲ್ ಪೊಲೀಸ್ ಆಫೀಸರ್ ಶಂಭು ಮಂಡಲ್ ಹೇಳಿದರು. ಮಗುವೊಂದು ಬೋರ್‌ವೆಲ್‌ಗೆ ಬಿದ್ದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮಗುವನ್ನು ರಕ್ಷಿಸಲು ನಾವು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ. ಮಗು ಇನ್ನೂ ಜೀವಂತವಾಗಿದೆ, ಅವರ ಧ್ವನಿ ನಮಗೆ ಕೇಳಿಸುತ್ತಿದೆ ಎಂದು ಅವರು ಕಾರ್ಯಾಚರಣೆ ಸಮಯದಲ್ಲಿ ಹೇಳಿದ್ದರು.
ಆಮ್ಲಜನಕವನ್ನು ಪಂಪ್ ಮಾಡಲು ಪ್ರಯತ್ನಿಸಲಾಗುತ್ತಿದೆ ಹಾಗೂ ಮಗುವನ್ನು ಬೋರ್‌ನಿಂದ ಹೊರತೆಗೆಯಲು ಜೆಸಿಬಿ ಯಂತ್ರಗಳನ್ನು ಕರೆಸಲಾಗಿದೆ. ಮಗುವನ್ನು ಸುರಕ್ಷಿತವಾಗಿ ಹೊರತರಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ಠಾಣೆ ಪ್ರಭಾರಿ ದಿನೇಶ್ ಕುಮಾರ್ ಸಿಂಗ್ ಹೇಳಿದ್ದರು.
"ರಕ್ಷಣಾ ಕಾರ್ಯಾಚರಣೆಯ ಸುರಕ್ಷತೆ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರದೇಶದಲ್ಲಿ ಭದ್ರತೆ ನಿಯೋಜಿಸಲಾಗಿದೆ. ಮಗುವಿಗೆ ತಕ್ಷಣದ ವೈದ್ಯಕೀಯ ನೆರವು ನೀಡಲು ಆಮ್ಲಜನಕ ಸೌಲಭ್ಯಗಳನ್ನು ಹೊಂದಿರುವ ವೈದ್ಯಕೀಯ ತಂಡಗಳು ಸ್ಥಳದಲ್ಲಿವೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕನನ್ನು ರಕ್ಷಿಸಲು ರಕ್ಷಣಾ ತಂಡಗಳು ಸಮಾನಾಂತರವಾಗಿ ರಂಧ್ರ ಕೊರೆಯಲು ಪ್ರಯತ್ನಿಸುತ್ತಿವೆ. ಬಾಲಕನನ್ನು ಹೊರತರಲು ಬೋರ್‌ವೆಲ್‌ನೊಳಗೆ ಹಗ್ಗ ಹಾಕುವ ಪರ್ಯಾಯ ಪ್ರಯತ್ನವನ್ನು ಸಹ ಪರಿಗಣಿಸಲಾಗಿತ್ತು. ಶಿವಂ ನ ತಾಯಿ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ, ಬಾಲಕ ಹತ್ತಿರದಲ್ಲೇ ಆಟವಾಡುತ್ತಿದ್ದ. ಆಟವಾಡುತ್ತಿದ್ದಾಗ ಕಾಲು ಜಾರಿ ಬೋರ್‌ವೆಲ್‌ನಲ್ಲಿ ಬಿದ್ದಿದ್ದಾನೆ ಎಂದು ತಾಯಿ ಹೇಳಿದರು.
ಘಟನೆಯ ಬಗ್ಗೆ ಹಿರಿಯ ಅಧಿಕಾರಿಗೂ ಮಾಹಿತಿ ನೀಡಲಾಗಿದೆ.
ಇತ್ತೀಚೆಗೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಬೋರ್‌ವೆಲ್‌ನಿಂದ ಹೊರತೆಗೆದ ಹೆಣ್ಣು ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿತ್ತು. ಇದೇ ರೀತಿಯ ಘಟನೆಯಲ್ಲಿ, ಜೂನ್ 6 ರಂದು ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ 300 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದು ಎರಡೂವರೆ ವರ್ಷದ ಪುಟ್ಟ ಮಗು ತನ್ನ ಪ್ರಾಣ ಕಳೆದುಕೊಂಡಿತು.
ಇದನ್ನೂ ಓದಿ : ಆಟವಾಡುತ್ತಿದ್ದ ಬಾಲಕಿ ಬಾಯ್ತೆರೆದ ಬೋರ್‌ವೆಲ್‌ಗೆ ಬಿದ್ದಳು.. ರಕ್ಷಣಾ ಕಾರ್ಯಾಚರಣೆ ಚುರುಕು