ನವದೆಹಲಿ: ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 10ರ ಸ್ಪರ್ಧಿ ಸ್ವಾಮಿ ಓಂ ಬುಧವಾರ ಬೆಳಗ್ಗೆ ನಿಧನರಾದರು.
ಸ್ವಯಂ ಘೋಷಿತ ದೇವಮಾನವ ಸ್ವಾಮಿ ಓಂ, ಗಾಜಿಯಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 63 ವರ್ಷದ ಸ್ವಾಮಿ, ಮೂರು ತಿಂಗಳ ಹಿಂದೆ ಕೋವಿಡ್ಗೆ ತುತ್ತಾಗಿದ್ದರು. ಅಷ್ಟೇ ಅಲ್ಲದೆ ಕೆಲ ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ.
ಕೊರೊನಾ ಬಳಿಕ ಅವರ ಆರೋಗ್ಯ ತೀರಾ ಹದಗೆಟ್ಟಿದ್ದಲ್ಲದೆ, ಕೆಲ ದಿನಗಳ ಹಿಂದೆ ಅವರು ಪಾರ್ಶ್ವವಾಯುಗೆ ತುತ್ತಾಗಿದ್ದರು ಎಂದು ತಿಳಿದು ಬಂದಿದೆ. ಅವರ ದೇಹದ ಅರ್ಧ ಭಾಗ ಪಾರ್ಶ್ವವಾಯುಗೆ ಒಳಗಾಗಿತ್ತು ಎಂದು ಅವರ ಸ್ನೇಹಿತ ಮುಖೇಶ್ ಜೈನ್ ಅವರ ಮಗ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇನ್ನು ಸ್ವಾಮಿ ಓಂ ಅವರ ಅಂತ್ಯಕ್ರಿಯೆಯನ್ನು ಮಧ್ಯಾಹ್ನ ದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ನಡೆಸಲಾಯಿತು.