ETV Bharat / bharat

ಸುಪ್ರೀಂ ಕೋರ್ಟ್‌ನಿಂದ ಯೂಟ್ಯೂಬರ್‌ ಮನೀಶ್ ಕಶ್ಯಪ್‌ಗೆ ಬಿಗ್ ರಿಲೀಫ್ - ರಾಷ್ಟ್ರೀಯ ಭದ್ರತಾ ಕಾಯಿದೆ

ಯೂಟ್ಯೂಬರ್ ಮನೀಶ್ ಕಶ್ಯಪ್ ಅವರನ್ನು ಮಧುರೈ ಜೈಲಿನಿಂದ ಬೇರೆ ಜೈಲಿಗೆ ಕರೆದೊಯ್ಯದಂತೆ ಸುಪ್ರೀಂ ಕೋರ್ಟ್​ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ.

ಮನೀಶ್ ಕಶ್ಯಪ್‌
ಮನೀಶ್ ಕಶ್ಯಪ್‌
author img

By

Published : Apr 21, 2023, 10:53 PM IST

ದೆಹಲಿ/ಪಾಟ್ನಾ: ಬಿಹಾರದ ಯೂಟ್ಯೂಬರ್ ಮನೀಶ್ ಕಶ್ಯಪ್ ಅವರ ಸಂಕಟ ಸ್ವಲ್ಪ ಕಡಿಮೆಯಾಗುತ್ತಿದೆ. ಇವರ ಮೇಲೆ ಎನ್​ಎಸ್​ಎ ವಿಧಿಸಿರುವ ಕುರಿತು ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಮುಂದಿನ ಆದೇಶದವರೆಗೆ ಮನೀಶ್ ಕಶ್ಯಪ್‌ರನ್ನು ಮಧುರೈ ಜೈಲಿನಲ್ಲಿಯೇ ಇರಿಸಬೇಕೆಂದು ತಿಳಿಸಿದೆ.

ರಾಜ್ಯದಲ್ಲಿ ಹಲವು ಎಫ್‌ಐಆರ್‌ಗಳು ದಾಖಲಾಗಿರುವುದರಿಂದ ಮನೀಶ್ ಕಶ್ಯಪ್ ಅವರನ್ನು ಮಧುರೈ ಜೈಲಿನಿಂದ ಬೇರೆ ಜೈಲಿಗೆ ಕರೆದೊಯ್ಯದಂತೆ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಆದೇಶಿಸಿದೆ. ಇದೇ ವೇಳೆ, ಎನ್‌ಎಸ್‌ಎ ಹೇರಿದ್ದರ ಕುರಿತಾಗಿ ತಮಿಳುನಾಡು ಸರ್ಕಾರವನ್ನು ಪ್ರಶ್ನಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಪಿ.ಎಸ್.ನರಸಿಂಹ ನೇತೃತ್ವದ ಪೀಠದ ಮುಂದೆ ಮನೀಶ್ ಕಶ್ಯಪ್ ಪರ ವಕೀಲ ಸಿದ್ಧಾರ್ಥ್ ದವೆ ಈ ವಿಷಯ ಮಂಡಿಸಿದ್ದು, ಕಕ್ಷಿದಾರರ ವಿರುದ್ಧ ಎನ್‌ಎಸ್‌ಎ ಅರ್ಜಿ ಸಲ್ಲಿಸಲಾಗಿದೆ. ತಮಿಳುನಾಡಿನಲ್ಲಿ ಆರು ಮತ್ತು ಬಿಹಾರದಲ್ಲಿ ಮೂರು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ತಿಳಿಸಿದರು.

ಎನ್‌ಎಸ್‌ಎ ಏಕೆ? : ಈ ವಿಚಾರದಲ್ಲಿ ರಾಜ್ಯವು ಮನೀಶ್ ಕಶ್ಯಪ್ ವಿರುದ್ಧ ಎನ್‌ಎಸ್‌ಎಯನ್ನು ಏಕೆ ಹೇರಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಪೀಠ, ಎನ್‌ಎಸ್‌ಎ ಏನು?, ಈ ವ್ಯಕ್ತಿಯ ವಿರುದ್ಧ ಸೇಡು ಏಕೆ? ಎಂದು ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಪ್ರಶ್ನಿಸಿತು. ಇದಕ್ಕೆ ಸಿಬಲ್ ಪ್ರತಿಕ್ರಿಯಿಸಿ, ಬಿಹಾರದಿಂದ ವಲಸೆ ಬಂದ ಕಾರ್ಮಿಕರ ಮೇಲೆ ತಮಿಳುನಾಡಿನಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಸುಳ್ಳು ವಿಡಿಯೋ ಮಾಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದ್ದಾರೆ.

ಏಪ್ರಿಲ್ 28 ರಂದು ಮುಂದಿನ ವಿಚಾರಣೆ: ಎನ್‌ಎಸ್‌ಎ ಅಡಿಯಲ್ಲಿ ತನ್ನ ಬಂಧನ ಪ್ರಶ್ನಿಸಿ ಅರ್ಜಿಯನ್ನು ತಿದ್ದುಪಡಿ ಮಾಡಲು ಅರ್ಜಿದಾರರ ವಕೀಲರಿಗೆ ನ್ಯಾಯಾಲಯ ಅನುಮತಿ ನೀಡಿತು. ತಮಿಳುನಾಡು ಮತ್ತು ಬಿಹಾರ ಸರ್ಕಾರಗಳಿಗೆ ನೋಟಿಸ್‌ ಜಾರಿಗೊಳಿಸಿತು. ಆರ್ಟಿಕಲ್ 32 ರ ಅಡಿಯಲ್ಲಿ ಅರ್ಜಿದಾರರು ಎನ್ಎಸ್ಎ ಅಡಿಯಲ್ಲಿ ಬಂಧನ ಆದೇಶವನ್ನು ಪ್ರಶ್ನಿಸಬಹುದು ಎಂದು ಪೀಠ ಹೇಳಿದೆ.

ಅರ್ಜಿದಾರರಿಗೆ ಅರ್ಜಿಯನ್ನು ತಿದ್ದುಪಡಿ ಮಾಡಲು ಅವಕಾಶವಿದೆ. ಮಧುರೈ ಜೈಲಿನಿಂದ ಬೇರೆಲ್ಲಿಗೂ ತನ್ನ ಕಕ್ಷಿದಾರನನ್ನು ಕರೆದುಕೊಂಡು ಹೋಗದಂತೆ ನಿರ್ದೇಶನ ನೀಡಬೇಕೆಂದು ದವೆ ನ್ಯಾಯಾಲಯವನ್ನು ಒತ್ತಾಯಿಸಿದರು. ಮಧುರೈ ಜೈಲಿನಿಂದ ಬೇರೆ ಸ್ಥಳಕ್ಕೆ ಸ್ಥಳಾಂತರಿಸದಂತೆ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 28ಕ್ಕೆ ನಿಗದಿಪಡಿಸಿದೆ.

ಬಿಹಾರ, ತಮಿಳುನಾಡಿನಲ್ಲಿ ಒಟ್ಟು ಐದು ಪ್ರಕರಣ: ತಮಿಳುನಾಡಿನಲ್ಲಿ ಹಿಂದಿ ಮಾತನಾಡುವ ವಲಸೆ ಕಾರ್ಮಿಕರೊಂದಿಗೆ ಹಿಂಸಾಚಾರದ ಆರೋಪದ ಪ್ರಕರಣದಲ್ಲಿ ಬಿಹಾರದ ಪ್ರಸಿದ್ಧ ಯೂಟ್ಯೂಬರ್ ಮನೀಶ್ ಕಶ್ಯಪ್ ಅವರು ನಕಲಿ ವಿಡಿಯೊಗಳನ್ನು ಪ್ರಸಾರ ಮಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮನೀಶ್ ವಿರುದ್ಧ ಬಿಹಾರ ಮತ್ತು ತಮಿಳುನಾಡಿನಲ್ಲಿ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ. ಮನೀಷ್ ಕಶ್ಯಪ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಒಂದೇ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದರು. ಇದರೊಂದಿಗೆ ಮನೀಶ್ ಕಶ್ಯಪ್ ಅವರು ತಮ್ಮ ಮೇಲೆ ಎನ್‌ಎಸ್‌ಎ ವಿಧಿಸುವ ಕುರಿತು ಎಸ್‌ಸಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು.

ತಮಿಳುನಾಡು ಸರ್ಕಾರಕ್ಕೆ ನೋಟಿಸ್​ ಜಾರಿ: ಯೂಟ್ಯೂಬರ್ ಮನೀಶ್ ಕಶ್ಯಪ್‌ಗೆ ಎನ್‌ಎಸ್‌ಎ ಏಕೆ ವಿಧಿಸಲಾಗಿದೆ ಎಂದು ಕೇಳಿ ತಮಿಳುನಾಡು ಸರ್ಕಾರಕ್ಕೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ನೋಟಿಸ್‌ನಲ್ಲಿ ಎನ್‌ಎಸ್‌ಎ ವಿಧಿಸುವ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನೆ ಕೇಳಿದ್ದು, ಇದಕ್ಕೆ ತಮಿಳುನಾಡು ಸರ್ಕಾರ ಉತ್ತರಿಸಬೇಕಾಗುತ್ತದೆ. ಮನೀಶ್ ಕಶ್ಯಪ್ ಮೇಲೆ ಎನ್ಎಸ್ಎ (ರಾಷ್ಟ್ರೀಯ ಭದ್ರತಾ ಕಾಯಿದೆ) ವಿಧಿಸಿರುವ ಕಾರಣವನ್ನು ಸುಪ್ರೀಂ ಕೋರ್ಟ್ ಕೇಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ಏಪ್ರಿಲ್ 28 ರಂದು ನಡೆಯಲಿದೆ.

ಇದನ್ನೂ ಓದಿ: ಯೂಟ್ಯೂಬರ್‌ ಮನೀಶ್ ಕಶ್ಯಪ್ ಪ್ರಕರಣ: ರಾಷ್ಟ್ರೀಯ ಭದ್ರತಾ ಕಾಯ್ದೆಯ ಮಹತ್ವವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.