ETV Bharat / bharat

3.92 ಲಕ್ಷ ಕೋಟಿ ಮೌಲ್ಯದ ಸ್ಪೆಕ್ಟ್ರಂ ಹರಾಜಿಗೆ ಮಾ.1 ರಿಂದ ಬಿಡ್ಡಿಂಗ್

author img

By

Published : Jan 6, 2021, 5:46 PM IST

ಜನವರಿ 12 ರಂದು ಪ್ರಿ ಬಿಡ್ ಕಾನ್ಫರೆನ್ಸ್ ಮತ್ತು ಜನವರಿ 28 ರಂದು ನೋಟಿಸ್‌ಗೆ ಸ್ಪಷ್ಟನೆ ಕೋರಲು ಕೊನೆಯ ದಿನಾಂಕವನ್ನು ದೂರಸಂಪರ್ಕ ಇಲಾಖೆ (ಡಿಒಟಿ) ನಿಗದಿಪಡಿಸಿದೆ. ಟೆಲಿಕಾಂ ಆಪರೇಟರ್‌ಗಳು ಹರಾಜಿನಲ್ಲಿ ಭಾಗವಹಿಸಲು ಫೆಬ್ರವರಿ 5 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

Bidding for spectrum auction to start from Mar 1: DoT notice
ದೂರಸಂಪರ್ಕ ಇಲಾಖೆ ಪ್ರಕಟನೆ

ನವದೆಹಲಿ : ಒಟ್ಟು 3.92 ಲಕ್ಷ ಕೋಟಿ ರೂ. ಮೌಲ್ಯದ ರೇಡಿಯೊ ವೇವ್‌ಗಳಿಗಾಗಿ ಆರನೇ ಸುತ್ತಿನ ಸ್ಪೆಕ್ಟ್ರಂ ಹರಾಜಿಗೆ ಮಾರ್ಚ್ 1 ರಿಂದ ಬಿಡ್ಡಿಂಗ್ ಪ್ರಾರಂಭವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಒಟ್ಟು 3.92 ಲಕ್ಷ ಕೋಟಿ ರೂ. ಮೌಲ್ಯದ 2,251.25 ಮೆಗಾಹರ್ಟ್ಸ್ ಸ್ಪೆಕ್ಟ್ರಂ ಹರಾಜು ಮಾಡುವ ಪ್ರಸ್ತಾಪಕ್ಕೆ 2020 ರ ಡಿಸೆಂಬರ್ 17 ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು.

ಓದಿ : ಇಂಡಿಯನ್ ಆಯಿಲ್ ಜೆಟ್ ಇಂಧನ ಮಾರಾಟ ಶೇ. 60ರಷ್ಟು ಚೇತರಿಕೆ

ಜನವರಿ 12 ರಂದು ಪ್ರಿ ಬಿಡ್ ಕಾನ್ಫರೆನ್ಸ್ ಮತ್ತು ಜನವರಿ 28 ರಂದು ನೋಟಿಸ್‌ಗೆ ಸ್ಪಷ್ಟನೆ ಕೋರಲು ಕೊನೆಯ ದಿನಾಂಕವನ್ನು ದೂರಸಂಪರ್ಕ ಇಲಾಖೆ (ಡಿಒಟಿ) ನಿಗದಿಪಡಿಸಿದೆ. ಟೆಲಿಕಾಂ ಆಪರೇಟರ್‌ಗಳು ಹರಾಜಿನಲ್ಲಿ ಭಾಗವಹಿಸಲು ಫೆಬ್ರವರಿ 5 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಫೆಬ್ರವರಿ 24 ರಂದು ಬಿಡ್​ದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಮತ್ತು 700, 800, 900, 2,100, 2,300 ಮತ್ತು 2,500 ಮೆಗಾಹರ್ಟ್ಸ್ ಫ್ರೀಕ್ವೆನ್ಸಿ ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್​ಗಾಗಿ ಮಾರ್ಚ್ 1 ರಿಂದ ಬಿಡ್​ ಪ್ರಾರಂಭಿಸಲಾಗುವುದು ಎಂದು ಸರ್ಕಾರ ಹೇಳಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.