ಗಾಂಧಿನಗರ: ಗುಜರಾತ್‌ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸುತ್ತಿದ್ದಂತೆ ಭೂಪೇಂದ್ರ ಪಟೇಲ್ 18ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿರುವ ಅವರು ಸಿಎಂ ಕಚೇರಿಯಲ್ಲಿ ಕುಳಿತುಕೊಳ್ಳುವ ಮುನ್ನ ಸೀಮಂದರ ಸ್ವಾಮಿ ಹಾಗೂ ದಾದಾ ಭಗವಾನರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದಾದಾ ಭಗವಾನ್ ಭಾರತದ ಆಧ್ಯಾತ್ಮಿಕ ನಾಯಕರು. ವಿಜ್ಞಾನ ಆಂದೋಲನ(ದಾದಾ ಭಗವಾನ್ ಗುಜರಾತ್) ಸ್ಥಾಪಿಸಿದವರು. ಭೂಪೇಂದ್ರ ಪಟೇಲ್ ಅವರು ಬಾಲ್ಯದಿಂದಲೂ ಇವರ ಧಾರ್ಮಿಕ ಅನುಯಾಯಿಯಾಗಿದ್ದಾರೆ.
ಭೂಪೇಂದ್ರ ಪಟೇಲ್ 13 ವರ್ಷದವರಿದ್ದಾಗ ಜೈನ ಸನ್ಯಾಸಿ ಶ್ರೀಮದ್ ರಾಜಚಂದ್ರರ ಬರಹಗಳಿಂದ ಬಹಳಷ್ಟು ಪ್ರಭಾವಿತರಾಗಿದ್ದಾರೆ. ಮಹಾತ್ಮಾ ಗಾಂಧಿಯವರ ಆಧ್ಯಾತ್ಮಿಕತೆಯ ಬೋಧನೆಗಳು ತನ್ನ ಬದುಕಿಗೆ ಸ್ಫೂರ್ತಿ ನೀಡಿವೆ ಎಂದು ಪಟೇಲ್ ಹೇಳಿದ್ದಾರೆ.
ಇದನ್ನೂಓದಿ: ಭಾರತ್ ಜೋಡೋ ಯಾತ್ರೆ: ಸಹೋದರಿಯೊಂದಿಗೆ ದೀರ್ಘ ಸಂವಾದ ನಡೆಸಿದ ರಾಹುಲ್ ಗಾಂಧಿ