ETV Bharat / bharat

ಯೋಗ-ಧ್ಯಾನದಲ್ಲಿ ತಲ್ಲೀನರಾದ ತೇರೆ ನಾಮ್‌ ಚಿತ್ರದ 'ನಿರ್ಜರಾ'.. ಜನರೊಂದಿಗೆ ಬೆರೆಯೋದು ಬಲು 'ಖುಷಿ' - ಡೆಹ್ರಾಡೂನ್

2000ನೇ ಇಸವಿಯಲ್ಲಿ ಯುವಕುಡು ಚಿತ್ರದೊಂದಿಗೆ ತೆಲುಗು ಚಿತ್ರರಂಗದಲ್ಲಿ ಇವರು ವೃತ್ತಿಜೀವನ ಪ್ರಾರಂಭಿಸಿದರು. ಈ ಚಿತ್ರದಲ್ಲಿ ಅವರು ನಟ ಸುಮಂತ್ ಜೊತೆ ಕಾಣಿಸಿದ್ದರು. ತೆಲುಗು ಚಿತ್ರರಂಗದಲ್ಲಿ ಉತ್ತಮ ವೃತ್ತಿಜೀವನ ರೂಪಿಸಿಕೊಂಡ ನಂತರ ಭೂಮಿಕಾ ಸಲ್ಮಾನ್ ಖಾನ್ ಅವರೊಂದಿಗೆ ತೇರೆ ನಾಮ್ ಚಿತ್ರದಲ್ಲಿ ನಟಿಸಿದ್ದರು..

bhumika-chawla-heroine-of-salman-khans-film-tere-naam-is-spending-her-time-in-haridwar

author img

By

Published : Jun 8, 2021, 3:47 PM IST

ಡೆಹ್ರಾಡೂನ್ : 'ತೇರೆ ನಾಮ್' ಚಿತ್ರದ ನಾಯಕಿ ಭೂಮಿಕಾ ಚಾವ್ಲಾ ಅವರು ಕೆಲ ದಿನಗಳಿಂದ ಹರಿದ್ವಾರದಲ್ಲಿ ಸಮಯ ಕಳೆಯುತ್ತಿದ್ದಾರೆ.

ಕೊರೊನಾ ಹಿನ್ನೆಲೆ ಈ ಅವಧಿಯನ್ನು ಕಳೆಯುವ ಉದ್ದೇಶದಿಂದ ದೇವಭೂಮಿಯ ಕಡೆ ಕಣ್ಣಾಯಿಸಿರುವ ಅವರು, ಸುಮಾರು 3 ತಿಂಗಳುಗಳಿಂದ ಹರಿದ್ವಾರದ ಶ್ಯಾಂಪೂರ್ ಕಾಂಗ್ರಿಯಲ್ಲಿರುವ ಪತಿ ಭಾರತ್ ಠಾಕೂರ್ ಅವರ ತೋಟದ ಮನೆಯಲ್ಲಿ ವಾಸವಿದ್ದಾರೆ.

ಭೂಮಿಕಾ ಚಾವ್ಲಾ ಅವರ ಪತಿ ಪ್ರಸಿದ್ಧ ಯೋಗಪಟು. ಪತಿ-ಪತ್ನಿ ಇಬ್ಬರೂ ಕೂಡ ಹರಿದ್ವಾರದ ಕಾಂಗ್ರಿಯಲ್ಲಿದ್ದು, ತಮ್ಮ ತೋಟದ ಮನೆಯಲ್ಲಿಯೇ ಯೋಗ ಮತ್ತು ಆಧ್ಯಾತ್ಮಿಕತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಭೂಮಿಕಾ ಚಾವ್ಲಾ ಆಗಾಗ್ಗೆ ಅಲ್ಲಿನ ಸ್ಥಳೀಯರ ಜೊತೆಗೂ ಕಾಲ ಕಳೆಯುತ್ತಿದ್ದಾರೆ.

ಭೂಮಿಕಾ ಚಾವ್ಲಾ ಅವರು 1978ರ ಆಗಸ್ಟ್ 21ರಂದು ನವದೆಹಲಿಯ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಭೂಮಿಕಾ ನವದೆಹಲಿಯಲ್ಲಿಯೇ ವಿದ್ಯಾಭ್ಯಾಸ ಮುಗಿಸಿದ್ದಾರೆ. ಅವರ ತಂದೆ ಸೇನಾಧಿಕಾರಿಯಾಗಿದ್ದವರು. ಭೂಮಿಕಾಗೆ ಹಿರಿಯ ಸಹೋದರ ಮತ್ತು ತಂಗಿ ಇದ್ದಾರೆ.

ತೆಲುಗು ಚಲನಚಿತ್ರ ಮೂಲಕ ಬೆಳ್ಳಿತೆರೆಗೆ ಎಂಟ್ರಿ : 2000ನೇ ಇಸವಿಯಲ್ಲಿ ಯುವಕುಡು ಚಿತ್ರದೊಂದಿಗೆ ತೆಲುಗು ಚಿತ್ರರಂಗದಲ್ಲಿ ಇವರು ವೃತ್ತಿಜೀವನ ಪ್ರಾರಂಭಿಸಿದರು. ಈ ಚಿತ್ರದಲ್ಲಿ ಅವರು ನಟ ಸುಮಂತ್ ಜೊತೆ ಕಾಣಿಸಿದ್ದರು. ತೆಲುಗು ಚಿತ್ರರಂಗದಲ್ಲಿ ಉತ್ತಮ ವೃತ್ತಿಜೀವನ ರೂಪಿಸಿಕೊಂಡ ನಂತರ ಭೂಮಿಕಾ ಸಲ್ಮಾನ್ ಖಾನ್ ಅವರೊಂದಿಗೆ ತೇರೆ ನಾಮ್ ಚಿತ್ರದಲ್ಲಿ ನಟಿಸಿದ್ದರು. ಈ ಮುಖಾಂತರ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.