ಭೋಪಾಲ್: ಈ ಬಾರಿ ದೀಪಾವಳಿಗೆ ಹಲವೆಡೆ ಪಟಾಕಿಗಳನ್ನು ನಿಷೇಧಿಸಲಾಗಿದೆ. ಇಲ್ಲೊಬ್ಬ ಹೋಮ್ ಬೇಕರ್ ಮನಿಷಾ ಅವರು ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ಸಂದೇಶವನ್ನು ಸಾರಿದ್ದಾರೆ.
ಭೋಪಾಲ್ ಮೂಲದ ಹೋಮ್ ಬೇಕರ್ ಮನಿಷಾ, ಸಿಹಿ ತಿನಿಸುಗಳಿಗೆ ಪಟಾಕಿಯ ರೂಪ ನೀಡಿದ್ದಾರೆ. ಮನಿಷಾ ಮತ್ತು ಅವರ ಪತಿ ಡಾ.ಅನುಪಮ್ ಅವರು ರಾಕೆಟ್, ಬಾಂಬ್ ಮತ್ತು ಚೈನ್ ಕ್ರ್ಯಾಕರ್‌ಗಳ ಆಕಾರದ ಚಾಕೋಲೆಟ್ಗಳನ್ನು ತಯಾರಿಸಿದ್ದಾರೆ. ಪಟಾಕಿ ತೊರೆದು ಪರಿಸರ ಸ್ನೇಹಿಯಾಗಿ ಬೆಳಕಿನ ಹಬ್ಬವನ್ನು ಆಚರಿಸಲು ಜನರನ್ನು ಪ್ರೋತ್ಸಾಹಿಸುವುದು ಇವರ ಉದ್ದೇಶವಾಗಿದೆ.
ಈಟಿವಿ ಭಾರತದ ಜೊತೆ ಮಾತನಾಡಿದ ಮನಿಷಾ, ನಮ್ಮಲ್ಲಿ ರಾಕೆಟ್, ಬಾಂಬ್ ಮತ್ತು ಹೂವಿನ ಮಡಕೆಗಳ ಆಕಾರದಲ್ಲಿ ಚಾಕೋಲೆಟ್‌ಗಳಿವೆ. ಕೋವಿಡ್-19 ಸಾಂಕ್ರಾಮಿಕದಿಂದ ಜನರು ಹೆಚ್ಚಾಗಿ ಮಾರುಕಟ್ಟೆಯ ವಸ್ತುಗಳ ಬಗ್ಗೆ ಜನರಲ್ಲಿ ಭಯವಿದೆ. ಆದರೂ ಈ ವಿವಿಧ ಆಕಾರದ ಪಟಾಕಿಗಳಿಗೆ ಗ್ರಾಹಕ ಪ್ರತಿಕ್ರಿಯೆ ಅದ್ಭುತವಾಗಿದೆ.
ಪಟಾಕಿಗಳನ್ನು ಸುಡುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಜನರು ಪರಿಸರ ಸ್ನೇಹಿ ದೀಪಾವಳಿಯನ್ನು ಈ ರೀತಿ ಆಚರಿಸಿದರೆ, ಪರಿಸರದ ಜೊತೆಗೆ, ನಾವು ಸಹ ಕೊರೊನಾದಿಂದ ಬದುಕುಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಡಾರ್ಕ್ ಮತ್ತು ಮಿಲ್ಕ್ ಚಾಕೋಲೆಟ್, ಹುರಿದ ಬಾದಾಮಿ, ಹಣ್ಣು ಸೇರಿದಂತೆ ವಿವಿಧ ಫ್ಲೇವರ್ಗಳಲ್ಲಿ ಕ್ರ್ಯಾಕರ್ ಚಾಕೋಲೆಟ್ಗಳು ಲಭ್ಯವಿದೆ.