ETV Bharat / bharat

ಭೀಮಾ ಕೋರೆಗಾಂವ್ ಪ್ರಕರಣ: ಹ್ಯಾಕ್ ಆದ ಆರೋಪಿ ವಿಲ್ಸನ್​​ ಲ್ಯಾಪ್​ಟಾಪ್​

ಜೈಲಿನಲ್ಲಿರುವ ಆರೋಪಿ ರೋನಾ ವಿಲ್ಸನ್ ಅವರ ಲ್ಯಾಪ್‌ಟಾಪ್​ನನ್ನು ಹ್ಯಾಕ್ ಮಾಡಲಾಗಿದೆ ಎಂದು ಅಮೆರಿಕ ಮೂಲದ ಡಿಜಿಟಲ್ ಫೊರೆನ್ಸಿಕ್ಸ್ ಸಂಸ್ಥೆಯ ಆರ್ಸೆನಲ್ ಕನ್ಸಲ್ಟಿಂಗ್ ವರದಿ ತಿಳಿಸಿದೆ. ವಿಲ್ಸನ್ ಅವರ ವಕೀಲರು ಈ ವರದಿಯನ್ನು ಹೈಕೋರ್ಟ್ ಮುಂದೆ ಸಲ್ಲಿಸಿದ್ದಾರೆ.

Documents were planted in jailed activist's laptop
ಹ್ಯಾಕ್ ಆದ ಆರೋಪಿ ವಿಲ್ಸನ್​​ ಲ್ಯಾಪ್​ಟಾಪ್​
author img

By

Published : Feb 12, 2021, 3:20 PM IST

ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ರೋನಾ ವಿಲ್ಸನ್ ಪರ ವಕೀಲರು, ಮುಂಬೈ ಹೈಕೋರ್ಟ್‌ಗೆ ಅವರ ಲ್ಯಾಪ್‌ಟಾಪ್‌ನಲ್ಲಿ ಬೆದರಿಕೆ ಪತ್ರಗಳನ್ನು ಸೈಬರ್ ಅಪರಾಧಿಗಳು ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಯುಎಸ್ ಮೂಲದ ಡಿಜಿಟಲ್ ಫೋರೆನ್ಸಿಕ್ಸ್ ಸಂಸ್ಥೆ ಆರ್ಸೆನಲ್ ಕನ್ಸಲ್ಟಿಂಗ್ ನೀಡಿದ ವರದಿಯನ್ನು ವಕೀಲರು ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ರೋನಾ ವಿಲ್ಸನ್ ಪರ ವಕೀಲ ಪಾಸ್ಬೋಲಾ, ಆರ್ಸೆನಲ್ ಕನ್ಸಲ್ಟಿಂಗ್ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಈ ವರದಿಯ ಪ್ರಕಾರ 22 ತಿಂಗಳುಗಳ ಕಾಲ ರೋನಾ ವಿಲ್ಸನ್ ಅವರ ಲ್ಯಾಪ್​ಟಾಪ್​ನನ್ನು ಹ್ಯಾಕ್ ಮಾಡಲಾಗಿದೆ. ವಿಶೇಷ ಮಾಲ್ವೇರ್ ಮೂಲಕ ಲ್ಯಾಪ್​​ಟಾಪ್​ನನ್ನು ಸ್ವಾಧೀನಪಡಿಸಿಕೊಂಡು, 10 ಪತ್ರಗಳನ್ನು ಇರಿಸಲಾಗಿದೆ. ಈ ಒಂದು ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಎನ್‌ಡಿಎ ಸರ್ಕಾರವನ್ನು ಉರುಳಿಸುವ ಬಗ್ಗೆ ಕೂಡ ಉಲ್ಲೇಖಿಸಲಾಗಿದೆ.

ಓದಿ: ಅಬ್ಬಾ!! ಅದೆಂಥಾ ಸೇಡು... ಕಾರ್ಪೊರೇಟರ್​ ಮೇಲೆ ಎರಡ್ಮೂರು ಬಾರಿ ಕಾರು ಹತ್ತಿಸಿ ಕೊಲೆ! ವಿಡಿಯೋ...

ರೋನಾ ವಿಲ್ಸನ್ ಅವರನ್ನು ಬಂಧಿಸಿದ ಬಳಿಕ, ಅವರ ಲ್ಯಾಪ್​ಟಾಪ್​ ಅನ್ನು ಎಲೆಕ್ಟ್ರಾನಿಕ್ ನಕಲನ್ನು ಯುಎಸ್‌ನ ವಾಷಿಂಗ್ಟನ್‌ನಲ್ಲಿರುವ ಆರ್ಸೆನಲ್ ಕನ್ಸಲ್ಟಿಂಗ್‌ಗೆ ಕಳುಹಿಸಲಾಗಿದೆ. ಸೈಬರ್ ದಾಳಿಕೋರರು ರೋನಾ ವಿಲ್ಸನ್ ಅವರ ಲ್ಯಾಪ್​​ಟಾಪ್​ನನ್ನು ಹ್ಯಾಕ್ ಮಾಡಿ, 10 ಬೆದರಿಕೆ ಪತ್ರಗಳನ್ನು ಹಾಕಿದ್ದಾರೆ. ವಿಶ್ವಾದ್ಯಂತ ಈ ರೀತಿಯ ಸೈಬರ್‌ ದಾಳಿಗಳು ನಡೆಯುತ್ತಿವೆ ಮತ್ತು ಇದು ತುಂಬಾ ಗಂಭೀರವಾದ ವಿಷಯವಾಗಿದೆ ಎಂದು ವರದಿ ಹೇಳಿದೆ.

ರೋನಾ ವಿಲ್ಸನ್ ಜೆಎನ್‌ಯುನ ಹಳೆಯ ವಿದ್ಯಾರ್ಥಿ ಮತ್ತು ಅವರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ರಾಜಕೀಯ ಕೈದಿಗಳ ಬಿಡುಗಡೆಗಾಗಿ ಕೆಲಸ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಸಕ್ರಿಯ ಕೆಲಸಗಾರರಲ್ಲಿ ಒಬ್ಬರಾಗಿದ್ದರು. ರಾಜಕೀಯ ಕೈದಿಗಳ ಬಿಡುಗಡೆ ಸಮಿತಿಯ ಸದಸ್ಯರಾಗಿದ್ದಾರೆ (ಸಿಆರ್‌ಪಿಪಿ). ಭೀಮಾ ಕೋರೆಗಾಂವ್ ಹಿಂಸಾಚಾರ ನಡೆದ ಬಳಿಕ ಮತ್ತು ಅವರ ಲ್ಯಾಪ್‌ಟಾಪ್​ನನ್ನು ವಶಪಡಿಸಿಕೊಂಡ ಕೂಡಲೇ ಅವರನ್ನು ಬಂಧಿಸಲಾಯಿತು. ಇನ್ನೂ ಈ ಸೈಬರ್​ ದಾಳಿಯ ಹಿಂದೆ ಯಾರಿದ್ದಾರೆ ಎಂದು ವರದಿ ಹೇಳಿಲ್ಲವಾದರೂ, ವಿಲ್ಸನ್​ ಒಬ್ಬರೇ ಈ ರೀತಿಯ ಸೈಬರ್​ ದಾಳಿಯ ಬಲಿಪಶುವಲ್ಲ ಎಂದು ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.