ಪಾಟ್ನಾ (ಬಿಹಾರ) : ಕಾಂಗ್ರೆಸ್ನ 11 ಶಾಸಕರು ಪಕ್ಷ ತೊರೆಯಬಹುದು ಎಂದು ಬಿಹಾರ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಶಾಸಕ ಭರತ್ ಸಿಂಗ್ ಹೇಳಿದ್ದಾರೆ. ಒಟ್ಟು 19 ಶಾಸಕರ ಪೈಕಿ 11 ಶಾಸಕರು ಮೂಲತಃ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಲ್ಲ ಎಂದು ಹೇಳಿರುವ ಸಿಂಗ್, ಅವರು ಹಣ ನೀಡಿ ಟಿಕೆಟ್ ಪಡೆದು ಶಾಸಕರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಮದನ್ ಮೋಹನ್ ಜಾ, ರಾಜ್ಯಸಭಾ ಸದಸ್ಯ ಅಖಿಲೇಶ್ ಪ್ರಸಾದ್ ಸಿಂಗ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಸದಾನಂದ್ ಸಿಂಗ್ ಕೂಡ ಪಕ್ಷದಿಂದ ನಿರ್ಗಮಿಸಬಹುದು. ನಾನು ಯಾವಾಗಲೂ ಆರ್ಜೆಡಿ - ಕಾಂಗ್ರೆಸ್ ಮೈತ್ರಿಕೂಟಕ್ಕೆ ವಿರುದ್ಧವಾಗಿದ್ದೇನೆ. ಅದು ಪಕ್ಷದ ಸ್ವಯಂ ವಿನಾಶಕ್ಕೆ ಕಾರಣವಾಗಲಿದೆ. ಹೈಕಮಾಂಡ್‌ಗೆ ಬಿಹಾರ ಕಾಂಗ್ರೆಸ್ನ ಪರಿಸ್ಥಿತಿಯ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಓದಿ : ಬಿಪಿಎಫ್ ತ್ಯಜಿಸಿ ಬಿಜೆಪಿ ಸೇರಿದ್ದ ಅಸ್ಸೋಂನ ಹಿರಿಯ ಬಿಜೆಪಿ ಮುಖಂಡನ ಮಗ ನಾಪತ್ತೆ
ಭರತ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ಜೆಡಿಯು ನಾಯಕ ರಾಜೀವ್ ರಂಜನ್, ಕಾಂಗ್ರೆಸ್ 'ಕೋಮಾ' ಸ್ಥಿತಿಯಲ್ಲಿದೆ. ಹಾಗಾಗಿಯೇ ಶಕ್ತಿ ಸಿಂಗ್ ಗೋಹಿಲ್ ಪಕ್ಷದ ಅಪಾಯವನ್ನು ಗ್ರಹಿಸಿರಬಹುದು, ಅದಕ್ಕಾಗಿಯೇ ಅವರು ತಮ್ಮ ಜವಾಬ್ದಾರಿಗಳಿಂದ ಮುಕ್ತರಾಗಬೇಕೆಂದು ವಿನಂತಿಸಿದ್ದಾರೆ. ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷವನ್ನು ಉಳಿಸಬೇಕು, ಆದರೆ ಅದು ಸುಲಭದ ಕೆಲಸವಲ್ಲ ಎಂದು ಹೇಳಿದ್ದಾರೆ.