ಚೆನ್ನೈ : ಆಹಾರವನ್ನು ತಲುಪಿಸುವ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 25 ವರ್ಷದ ಜೊಮ್ಯಾಟೊ ಡೆಲಿವರಿ ಬಾಯ್ಯೊಬ್ಬನನ್ನು ಶನಿವಾರ ಬಂಧಿಸಿರುವ ಪೊಲೀಸರು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಲಾಕ್‌ಡೌನ್ ಹಿನ್ನೆಲೆ ಆಹಾರ ವಿತರಣಾ ಬೇಡಿಕೆಗಳು ಕ್ಷೀಣಿಸುತ್ತಿದ್ದಂತೆ ಇದು ಆರೋಪಿ ಗುಣಶೇಖರನ್ನ ಅಲ್ಪ ಆದಾಯಕ್ಕೆ ಹೊಡೆತ ನೀಡಿದೆ. ಹೀಗಾಗಿ ಅವನು ಬದುಕಲು ಪರ್ಯಾಯ ಮಾರ್ಗಗಳನ್ನು ಸಕ್ರಿಯವಾಗಿ ಹುಡುಕುತ್ತಿರುವ ಸಂದರ್ಭದಲ್ಲಿ ಅವನ ಸ್ನೇಹಿತ ಆಹಾರವನ್ನು ತಲುಪಿಸುವಂತೆ ನಟಿಸಿ 'ಗಾಂಜಾ' ಮಾರಾಟ ಮಾಡಲು ಪ್ರೋತ್ಸಾಹಿಸಿದ್ದಾನೆಂದು ತಿಳಿದು ಬಂದಿದೆ.
ಇದರಿಂದ ಪ್ರೇರಿತರಾಗಿ ಚೆನ್ನೈನ ಪುರಾಸೈವಾಕ್ಕಂನ 25 ವರ್ಷದ ನಿವಾಸಿಯಾದ ಈತ, ತನ್ನ ಗಾಂಜಾ ವಿತರಣೆಯನ್ನು ಅಡ್ಯಾರ್, ಮಾಂಡವೇಲಿ, ಮೈಲಾಪುರ ಮತ್ತು ನಗರದ ಇತರ ಸ್ಥಳಗಳಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಪ್ರಾರಂಭಿಸಿದ್ದನು.
ಆದರೆ, ಇದು ಟಿಪ್-ಆಫ್ ಮೂಲಕ ಮೈಲಾಪುರ ಪೊಲೀಸರ ಗಮನಕ್ಕೆ ಬಂದಿದ್ದು, ಅವನನ್ನು ಸೆರೆ ಹಿಡಿಯಲು ವಿಶೇಷ ತಂಡವನ್ನು ರಚಿಸಿ, ನಂತರ ಆತನನ್ನು ಅಡ್ಯಾರ್‌ನ ವನ್ನಂಡುರೈ ಪ್ರದೇಶದಲ್ಲಿ ಬಂಧಿಸಿದ್ದಾರೆ. ಸುಮಾರು 10 ಗ್ರಾಂ ತೂಕದ ಸುಮಾರು 20 ಪ್ಯಾಕ್ ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸರು, ಆರೋಪಿ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.