ಪುರುಲಿಯಾ(ಪ.ಬಂಗಾಳ):ಪ್ರಧಾನಿಗೆ ಪ್ರಜಾಪ್ರಭುತ್ವ ಪೆಟ್ಟು ನೀಡಬೇಕು ಎಂಬ ಮಮತಾ ಬ್ಯಾನರ್ಜಿ ಹೇಳಿಕೆಗೆ ಭಾವನಾತ್ಮಕವಾಗಿ ಟಾಂಗ್ ನೀಡಿರುವ ಮೋದಿ, ನಿಮ್ಮ ಹೊಡೆತ ನನಗೆ ಆಶೀರ್ವಾದದಂತೆ ಎಂದು ಹೇಳಿದ್ದಾರೆ.
ನಿಮ್ಮ ಹೇಳಿಕೆಯನ್ನು ನಾನು ಒಪ್ಪುತ್ತೇನೆ. ನಿಮಗೆ ಒಂದು ಮಾತು ಕೇಳ್ತೇನೆ. ಚಿಟ್ ಫಂಡ್ ಹೆಸರಲ್ಲಿ ಜನರ ಹಣ ಕೊಳ್ಳೆ ಹೊಡೆದ ನಿಮ್ಮದೇ ಸಹೋದ್ಯೋಗಿಗಳಿಗೆ ಹೊಡೆಯುವ ಧೈರ್ಯ ನಿಮಗಿದೆಯೇ? ಎಂದು ನಾಜೂಕಾಗಿಯೇ ಮೋದಿ ಕುಟುಕಿದರು.
ಲೋಕಸಭೆ ಚುನಾವಣೆಗೆ ಮೇ 12 ರಂದು 5ನೇ ಸುತ್ತಿನ ಮತದಾನ ನಡೆಯಲಿದ್ದು, ಪ್ರಧಾನಿ ಮೋದಿ ಮತಬೇಟೆ ನಡೆಸುತ್ತಿದ್ದಾರೆ.