ETV Bharat / bharat

ಬೋಸ್‌ ಜೀವನದಿಂದ ಸ್ಫೂರ್ತಿ ಪಡೆದು ನವ ಭಾರತ ನಿರ್ಮಾಣಕ್ಕೆ ಮುಂದಾಗಿ ; ಯುವಕರಿಗೆ ಉಪ ರಾಷ್ಟ್ರಪತಿ ಕರೆ - ಅನಕ್ಷರತೆ, ಸಾಮಾಜಿಕ ಮತ್ತು ಲಿಂಗ ತಾರತಮ್ಯ

ನಾವು ದೇಶದ ಹಲವು ನಾಯಕರ ಬಗ್ಗೆ ಸಂಭ್ರಮಾಚರಣೆ ಮಾಡುತ್ತೇವೆ. ವಸಾಹತುಶಾಹಿ ಮನಸ್ಥಿತಿಯಿಂದ ನಾವು ಹೊರಬರಬೇಕು ಎಂದಿದ್ದಾರೆ. ಹಲವು ಸ್ವಾತಂತ್ರ್ಯ ಹೋರಾಟಗಾರರು ತಮ್ಮದೇ ಆದ ಹಲವು ಮಾರ್ಗಗಳಲ್ಲಿ ಹೋರಾಟ ಮಾಡಿದ್ದಾರೆ. ಅಂತಿಮವಾಗಿ ಎಲ್ಲರ ಗುರಿಯ ದೇಶಕ್ಕೆ ವಸಾಹತುಶಾಹಿ ಆಡಳಿತದಿಂದ ಸ್ವಾತಂತ್ರ್ಯ ತಂದುಕೊಡುವುದೇ ಆಗಿತ್ತು..

Youngsters should take inspiration from Netaji's life: VP Naidu
ಬೋಸ್‌ ಜೀವನದಿಂದ ಸ್ಫೂರ್ತಿ ಪಡೆದು ನವ ಭಾರತ ನಿರ್ಮಾಣಕ್ಕೆ ಮುಂದಾಗಿ ; ಯುವಕರಿಗೆ ಉಪ ರಾಷ್ಟ್ರಪತಿ ಕರೆ
author img

By

Published : Jan 23, 2021, 4:56 PM IST

ನವದೆಹಲಿ : ದೇಶದ ಯುವ ಜನತೆ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಜೀವನದಿಂದ ಸ್ಫೂರ್ತಿ ಪಡೆದು ಬಡತನ, ಅನಕ್ಷರತೆ, ಸಾಮಾಜಿಕ ಮತ್ತು ಲಿಂಗ ತಾರತಮ್ಯ ಹಾಗೂ ಭ್ರಷ್ಟಾಚಾರವನ್ನು ಸಮಾಜದಿಂದ ತೊಡೆದು ಹಾಕಬೇಕೆಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ.

ಬೋಸ್‌ ಜನ್ಮದಿನ ಹಿನ್ನೆಲೆ ತೆಲಂಗಾಣ ಸರ್ಕಾರ ಹೈದರಾಬಾದ್‌ನಲ್ಲಿ ಹಮ್ಮಿಕೊಂಡಿದ್ದ ಎಂಸಿಆರ್‌ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಜನಸಂಖ್ಯೆಯಲ್ಲಿ ಶೇ.65ರಷ್ಟು ಜನ 35ರ ವಯಸ್ಸಿನೊಳಗಿದ್ದಾರೆ.

ನವ ಭಾರತ ನಿರ್ಮಾಣಕ್ಕೆ ಯುವ ಸಮೂಹ ಮುಂದಾಗಬೇಕು. ಪ್ರತಿ ನಾಗರಿಕನಿಗೆ ತಾರತಮ್ಯ ಇರದೆ, ಸಮಾನ ಅವಕಾಶಗಳು ಸಿಕ್ಕಾಗ ದೇಶ ಸಂತೃಪ್ತಿ ಹಾಗೂ ಸಮೃದ್ಧಿಯಾಗಿರುತ್ತದೆ ಎಂದು ಹೇಳಿದ್ದಾರೆ.

ಪರಾಕ್ರಮ್‌ ಅಥವಾ ಧೈರ್ಯ ನೇತಾಜಿ ಅವರಲ್ಲಿತ್ತು ಎಂದಿರುವ ನಾಯ್ಡು ಅವರು, ಕೇಂದ್ರ ಸರ್ಕಾರ ಸುಭಾಷ್‌ ಚಂದ್ರ ಬೋಸ್‌ ಅವರ ಜನ್ಮದಿನವನ್ನು ಪರಾಕ್ರಮ‌ ದಿನ‌ ಎಂದು ಘೋಷಿಸಿರುವುದನ್ನು ಅಭಿನಂದಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸುಭಾಷ್‌ಚಂದ್ರ ಬೋಸ್‌ ಹಾಗೂ ಕೆಲ ಸ್ವಾತಂತ್ರ್ಯ ಹೋರಾಟಗಾರರು ದೇಶದಲ್ಲಿ ಸಾಮಾಜಿಕ ಬದಲಾವಣೆಗಳನ್ನು ತರಲು ಪ್ರಮುಖ ಪಾತ್ರವಹಿಸಿದ್ದಾರೆ. ಹಲವರಿಗೆ ಬೋಸ್‌ ಅವರ ಕೊಡುಗೆಯ ಬಗ್ಗೆ ತಿಳಿದಿಲ್ಲ. ಇತಿಹಾಸದ ಪುಸ್ತಕದಲ್ಲೂ ಈ ಬಗ್ಗೆ ಸರಿಯಾಗಿ ರೀತಿಯಲ್ಲಿ ಪ್ರದರ್ಶಿಸಿಲ್ಲ.

ನಾವು ದೇಶದ ಹಲವು ನಾಯಕರ ಬಗ್ಗೆ ಸಂಭ್ರಮಾಚರಣೆ ಮಾಡುತ್ತೇವೆ. ವಸಾಹತುಶಾಹಿ ಮನಸ್ಥಿತಿಯಿಂದ ನಾವು ಹೊರಬರಬೇಕು ಎಂದಿದ್ದಾರೆ. ಹಲವು ಸ್ವಾತಂತ್ರ್ಯ ಹೋರಾಟಗಾರರು ತಮ್ಮದೇ ಆದ ಹಲವು ಮಾರ್ಗಗಳಲ್ಲಿ ಹೋರಾಟ ಮಾಡಿದ್ದಾರೆ. ಅಂತಿಮವಾಗಿ ಎಲ್ಲರ ಗುರಿಯ ದೇಶಕ್ಕೆ ವಸಾಹತುಶಾಹಿ ಆಡಳಿತದಿಂದ ಸ್ವಾತಂತ್ರ್ಯ ತಂದುಕೊಡುವುದೇ ಆಗಿತ್ತು.

ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ರದ್ದು ಮಾಡಬೇಕೆಂದು ನೇತಾಜಿ ಸುಭಾಷ್‌ಚಂದ್ರ ಬೋಸ್‌ ಹೇಳಿದ್ದರು. ಈ ಹಿಂದೆ ಅಂದರೆ 1940ರಲ್ಲಿ ಎಲ್ಲಾ ಜಾತಿಯ, ಪಂಥ, ಧರ್ಮದ ಸೈನಿಕರು ಒಟ್ಟಾಗಿ ಜೀವಿಸಿ ಭಾರತ ಮೊದಲು ಎಂಬುದಕ್ಕಾಗಿ ಹೋರಾಟ ಮಾಡಿದ್ದರು ಎಂದು ಇತಿಹಾಸ ಸ್ಮರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.