ETV Bharat / bharat

ಮೌಢ್ಯತೆಯ ಪರಮಾವಧಿ: ನಾಲಿಗೆ ಕತ್ತರಿಸಿ ದೇವಿಗೆ ಅರ್ಪಿಸಿದ ವ್ಯಕ್ತಿ! - ಉತ್ತರ ಪ್ರದೇಶ ಇತ್ತೀಚಿನ ನ್ಯೂಸ್​

ಆಧುನಿಕತೆ ಎಷ್ಟೇ ಮುಂದುವರೆದಿದ್ದರೂ, ಕೆಲವೊಂದು ಗ್ರಾಮಗಳಲ್ಲಿ ಈಗಲೂ ಮೌಢ್ಯತೆಯ ಪರಮಾವಧಿ ಎದ್ದು ಕಾಣಿಸುತ್ತದೆ. ಅದಕ್ಕೆ ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆ ಜ್ವಲಂತ ಸಾಕ್ಷಿಯಾಗಿದೆ.

UP Man
UP Man
author img

By

Published : Oct 24, 2020, 9:56 PM IST

ಕೊಟ್ವಾಲಿ( ಉತ್ತರ ಪ್ರದೇಶ): ನಾವು 21ನೇ ಶತಮಾನದಲ್ಲಿದ್ರೂ, ಆಧುನಿಕತೆ ಇಷ್ಟೊಂದು ಮುಂದುವರೆದಿದ್ದರೂ ಕೆಲವೊಂದು ಪ್ರದೇಶಗಳಲ್ಲಿ ಮೂಡನಂಬಿಕೆಯಂತಹ ಅಮಾನವೀಯ ಕೃತ್ಯಗಳ ನಡೆಯುತ್ತಿವೆ. ಸದ್ಯ ಉತ್ತರ ಪ್ರದೇಶದ ಹಳ್ಳಿವೊಂದರಲ್ಲಿ ಅಂತಹ ಘಟನೆ ನಡೆದಿದೆ.

UP Man
ದೇವಿಗೆ ನಾಲಿಗೆ ಅರ್ಪಿಸಿದ ವ್ಯಕ್ತಿ ಆತ್ಮರಾವ್​

ಉತ್ತರ ಪ್ರದೇಶದ ಕೊಟ್ವಾಲಿಯ ಹಳ್ಳಿವೊಂದರಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೋರ್ವ ದೇವಿಗೆ ನಾಲಿಗೆ ಕತ್ತರಿಸಿ ಅರ್ಪಿಸಿದ್ದಾನೆ. ದೇವಿ ಈತನ ಮೈಯೊಳಗೆ ಬಂದಿದ್ದರಿಂದ ಈ ರೀತಿಯಾಗಿ ನಡೆದುಕೊಂಡಿದ್ದಾನೆಂದು ತಿಳಿದು ಬಂದಿದೆ.

ನಾಲಿಗೆ ಕತ್ತರಿಸಿ ದೇವಿಗೆ ಅರ್ಪಿಸಿದ ವ್ಯಕ್ತಿ

ಆರಂಭದಲ್ಲಿ ಯುವಕ ತನ್ನ ಕುತ್ತಿಗೆ ಕತ್ತರಿಸಿ ದೇವಿಯ ಪಾದಕ್ಕೆ ಅರ್ಪಣೆ ಮಾಡಲು ಮುಂದಾಗಿದ್ದನು. ಆದರೆ ತಾಯಿ ಅದನ್ನ ನಿರಾಕರಿಸಿದ್ದರಿಂದ ತನ್ನ ನಾಲಿಗೆ ಕತ್ತರಿಸಿ ದೇವಿಗೆ ಅರ್ಪಿಸಿದ್ದಾನೆ. ಇದನ್ನ ನೋಡಿರುವ ಗ್ರಾಮದ ಗುಂಪು ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ದಾಖಲು ಮಾಡುವ ಬದಲು ದೇವಿಯ ಮಹಿಳೆ ಎಂದು ಕೂಗಲು ಪ್ರಾರಂಭಿಸಿದರು. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾದಾಗ ನಿರಾಕರಣೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಆತನ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.

UP Man
ದೇವಿಯ ಮಹಿಳೆ ಎಂದು ಕೂಗಿದ ಸ್ಥಳೀಯರು

ಆತ್ಮರಾವ್​ ದೇವಿಯ ಮಹಾನ್​ ಭಕ್ತ ಎಂದು ಜನರು ಮಾತನಾಡಿಕೊಳ್ಳುತ್ತಾರೆ.ಖೇರಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಈತ ಈ ರೀತಿಯಾಗಿ ನಡೆದುಕೊಂಡಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.