ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಮಾನ್ಯತೆ ಪಡೆದ ಪತ್ರಕರ್ತರಿಗೆ ಬಂಪರ್ ಉಡುಗೊರೆ ನೀಡಿದ್ದಾರೆ. ಪ್ರತಿ ವರ್ಷ ಐದು ಪಕ್ಷ ರೂಪಾಯಿ ಆರೋಗ್ಯ ವಿಮೆ ಮಾಡಿಸಲು ನಿರ್ಧರಿಸಿದ್ದಾರೆ.
ಆಡಳಿತ ಮತ್ತು ಆಡಳಿತದ ಕಾರ್ಯಗಳನ್ನ ಜನರಿಗೆ ತಲುಪಿಸಲು ಸೇತುವೆಯಾಗಿ ಮಾಧ್ಯಮಗಳು ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ರಾಜ್ಯ ಸರ್ಕಾರ ಪ್ರತಿ ವರ್ಷಕ್ಕೆ ಐದು ಲಕ್ಷ ರೂಪಾಯಿ ಆರೋಗ್ಯ ವಿಮೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅದಕ್ಕಾಗಿ ಪತ್ರಕರ್ತರು ತಮ್ಮ ಜನ್ಮ ದಿನಾಂಕ ಅಕ್ಟೋಬರ್ 28ರೊಳಗೆ 9453005360 ಮತ್ತು 9450300635ಗೆ ಮೆಸೇಜ್ ಮಾಡಬಹುದಾಗಿದೆ. ಅಥವಾ informationpress2017@gmail.comಗೂ ಮೇಲ್ ಮಾಡಬಹುದಾgiದೆ.
ದೇಶಾದ್ಯಂತ ಕೊರೊನಾ ವಾರಿಯರ್ಸ್ಗಳಾಗಿ ಪತ್ರಕರ್ತರು ಕೆಲಸ ಮಾಡ್ತಿದ್ದು, ಕೋವಿಡ್ ಸೋಂಕಿನಿಂದಾಗಿ ಅನೇಕರು ಸಾವನ್ನಪ್ಪಿದ್ದಾರೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.