ETV Bharat / bharat

ಯೆಸ್​ ಬ್ಯಾಂಕ್​​ ಆರ್ಥಿಕ ಬಿಕ್ಕಟ್ಟು...ಕೆಲಸ ನಿರ್ವಹಿಸುತ್ತಿಲ್ಲ ಫೋನ್​ ಪೇ!

ಆರ್ಥಿಕ ತೊಂದರೆಗೊಳಗಾಗಿರುವ ಯೆಸ್​ ಬ್ಯಾಂಕ್​​ ಜತೆ ಈ ಹಿಂದೆ ಹೊಂದಾಣಿಕೆ ಮಾಡಿಕೊಂಡಿದ್ದ ಫೋನ್​ ಪೇ ಕೂಡ ಸಮಸ್ಯೆಗೊಳಗಾಗಿದ್ದು, ಗ್ರಾಹಕರು ಸಮಸ್ಯೆ ಅನುಭವಿಸುತ್ತಿದ್ದಾರೆ.

phone pay not working since from yesterday

author img

By

Published : Mar 6, 2020, 1:37 PM IST

ಮುಂಬೈ: ಖಾಸಗಿ ರಂಗದ ಪ್ರಮುಖ ಬ್ಯಾಂಕ್​ಗಳಲ್ಲಿ ಒಂದಾಗಿರುವ ಯೆಸ್​ ಬ್ಯಾಂಕ್​ ಆರ್ಥಿಕ ತೊಂದರೆ ಅನುಭವಿಸುತ್ತಿದ್ದು, ಇದರ ಮೇಲೆ ಈಗಾಗಲೇ ಆರ್​ಬಿಐ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, 50 ಸಾವಿರ ರೂ ವಿತ್​ ಡ್ರಾ ಮಾಡಿಕೊಳ್ಳುವಂತೆ ನಿರ್ಬಂಧ ಹೇರಿದೆ.

  • Dear @PhonePe_ customers. We sincerely regret the long outage. Our partner bank (Yes Bank) was placed under moratorium by RBI. Entire team's been working all night to get services back up asap. We hope to be live in a few hours. Thanks for your patience. Stay tuned for updates!

    — Sameer.Nigam (@_sameernigam) March 6, 2020 " class="align-text-top noRightClick twitterSection" data=" ">

ಇದೀಗ ಈ ಬ್ಯಾಂಕ್​​ನಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ಪೋನ್​ ಪೇ ಕೂಡ ತೊಂದರೆ ಅನುಭವಿಸುತ್ತಿದೆ. ಹಣ ವರ್ಗಾವಣೆ ಮೊಬೈಲ್ ಆಪ್ ಫೋನ್ ಪೇ ಯೆಸ್ ಬ್ಯಾಂಕ್​ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಆದರೆ, ಇದೀಗ ಯೆಸ್ ಬ್ಯಾಂಕ್ ಮೇಲಿನ ನಿಷೇಧದಿಂದ ಫೋನ್ ಪೇ ಸೇವೆಗಳು ಸಿಗುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಫೋನ್​ ಪೇ ಸಿಇಒ ಸಮಿರ್​ ಟ್ವೀಟ್​ ಮೂಲಕ ಗ್ರಾಹಕರ ಬಳಿ ಕ್ಷಮೆಯಾಚನೆ ಮಾಡಿದ್ದಾರೆ.

Yes Bank crisis
ಯೆಸ್​ ಬ್ಯಾಂಕ್​ ಷೇರು ಕುಸಿತ

ನಾವು ತಾತ್ಕಾಲಿಕವಾಗಿ ಸೇವೆ ನೀಡುತ್ತಿಲ್ಲ. ಇದರಿಂದ ಉಂಟಾಗಿರುವ ತೊಂದರೆಗೆ ಕ್ಷಮೆಯಾಚನೆ ಮಾಡುತ್ತೇವೆ ಎಂದಿರುವ ಅವರು, ಮರಳಿ ಸೇವೆ ಮುಂದುವರಿಸಲು ಕೆಲಸ ಮಾಡುತ್ತಿದ್ದು, ಕೆಲವೇ ಗಂಟೆಗಳಲ್ಲಿ ಮರಳಿ ಸೇವೆ ನೀಡಲಿದ್ದೇವೆ ಎಂದಿದ್ದಾರೆ. ಇನ್ನು ಮುಂಬೈ ಷೇರು ಪೇಟೆಯಲ್ಲಿ ಯೆಸ್​ ಬ್ಯಾಂಕ್​ ಷೇರು ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದ್ದು, ಶೇ. 59ರಷ್ಟು ಕುಸಿತ ಕಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.