ETV Bharat / bharat

ಕೊರೊನಾ ಸಮರದಲ್ಲಿ ಭಾರತೀಯ ಅಂಚೆ ಇಲಾಖೆ ಅವಿರತ ಶ್ರಮ.... ಸದ್ದಿಲ್ಲದೇ ಜನರ ಸೇವೆ

ಅಂಚೆ ವ್ಯವಸ್ಥೆ ಅಗತ್ಯ ಸೇವಾ ನಿರ್ವಹಣಾ ಕಾಯ್ದೆಯ ವ್ಯಾಪ್ತಿಗೆ ಬರುವುದರಿಂದ ಬೇರೆ ಯಾವುದೇ ಸೇವಾ ಪೂರೈಕೆದಾರರು ಕಾರ್ಯನಿರ್ವಹಿಸದ ವೇಳೆ ಸದ್ದಿಲ್ಲದೆ ಜನರಿಗೆ ಸೇವೆ ಸಲ್ಲಿಸುತ್ತಿದೆ.

postal service
ಭಾರತೀಯ ಅಂಚೆ ಸೇವೆ
author img

By

Published : May 12, 2020, 11:43 AM IST

Updated : May 12, 2020, 12:11 PM IST

ಹೈದರಾಬಾದ್: 1.56 ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳನ್ನು ಭಾರತ ಹೊಂದಿದ್ದು, ವಿಶ್ವದ ಅತ್ಯಂತ ಬೃಹತ್ ಅಂಚೆ ಜಾಲ ಹೊಂದಿರುವ ದೇಶ ಎಂಬ ಹೆಗ್ಗಳಿಗೆ ಪಡೆದಿದೆ. ಅದರಲ್ಲಿ 1.41 ಲಕ್ಷ ಕಚೇರಿಗಳು ಗ್ರಾಮೀಣ ಪ್ರದೇಶದಲ್ಲಿವೆ. ಕೋವಿಡ್​-19 ಪರೀಕ್ಷಾ ಕಿಟ್‌ಗಳು, ವೆಂಟಿಲೇಟರ್‌ಗಳು, ಮಾಸ್ಕ್​ಗಳು ಮತ್ತು ಔಷಧಗಳನ್ನು ದೂರದ ಸ್ಥಳಗಳಿಗೆ ತಲಪಿಸುವಲ್ಲಿ ಭಾರತೀಯ ಅಂಚೆ ಮುಖ್ಯ ಪಾತ್ರವಹಿಸಿದೆ.

ಅಂಚೆ ವ್ಯವಸ್ಥೆ ಅಗತ್ಯ ಸೇವಾ ನಿರ್ವಹಣಾ ಕಾಯ್ದೆಯ ವ್ಯಾಪ್ತಿಗೆ ಬರುವುದರಿಂದ ಬೇರೆ ಯಾವುದೇ ಸೇವಾ ಪೂರೈಕೆದಾರರನ್ನು ಅನುಮತಿಸದಿರುವ ಸಮಯದಲ್ಲಿ, ಇದು ಜನರಿಗೆ ಸೇವೆ ಸಲ್ಲಿಸುತ್ತಿದೆ.

ಭೌಗೋಳಿಕ ನಿರ್ಬಂಧಗಳನ್ನು ಹೊರತುಪಡಿಸಿ, ಹಿಮಾಚಲ ಪ್ರದೇಶದ ಉನಾ ಮತ್ತು ಮೇಘಾಲಯದ ನಾರ್ತ್​ - ಈಸ್ಟರ್ನ್​ ವಿಶ್ವವಿದ್ಯಾಲಯಕ್ಕೆ ಔಷಧಗಳು ಮತ್ತು ಉಪಕರಣಗಳನ್ನ ಭಾರತೀಯ ಅಂಚೆ ತಲುಪಿಸಿದೆ. ಪುದುಚೇರಿಯಿಂದ ಒಡಿಶಾ ಮತ್ತು ಗುಜರಾತ್‌ಗೆ ವೆಂಟಿಲೇಟರ್‌ಗಳನ್ನು ರವಾನಿಸಲಾಗಿದೆ.

ಭಾರತೀಯ ಅಂಚೆ ವ್ಯವಸ್ಥೆಯು ಸುಗಮ ಹಣದ ವ್ಯವಹಾರಕ್ಕಾಗಿ ಗ್ರಾಹಕರ ಮನೆ ಬಾಗಿಲಿಗೆ ಹಣ ವಿತ್​ಡ್ರಾ, ಖಾತೆಗಳನ್ನು ತೆರೆಯುವುದು, ನೇರ ಲಾಭ ವರ್ಗಾವಣೆ ಮತ್ತು ಪಿಂಚಣಿ ಪಾವತಿಗಳನ್ನು ಸಕ್ರಿಯಗೊಳಿಸಲು ಇಲಾಖೆ ಪ್ರಯತ್ನಿಸುತ್ತಿದೆ.

ಅಂಚೆ ಇಲಾಖೆ 500 ಕಿಲೋ ಮೀಟರ್‌ಗಳಷ್ಟು ವಿಶೇಷ ರಸ್ತೆ ನಕ್ಷೆಯನ್ನು ರಚಿಸಿದೆ. ಈ ನಕ್ಷೆಯು 75 ನಗರಗಳನ್ನು ಜೋಡಿಸುವ 22 ಮಾರ್ಗಗಳನ್ನು ಒಳಗೊಂಡಿದೆ. ಅಗತ್ಯ ವಸ್ತುಗಳನ್ನು ವೇಗವಾಗಿ ತಲುಪಿಸಲು ಈ ನಕ್ಷೆಯನ್ನು ಬಳಸಲಾಗುತ್ತದೆ.

ಸಮಯೋಚಿತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಇದು ವಿಶೇಷ ಮೇಲ್ ವ್ಯವಸ್ಥೆ ಮಾಡಿದೆ. ಕೋಲ್ಡ್ - ಚೈನ್ ಮೂಲಕ ಔಷಧಗಳನ್ನು ಸಹ ವಿತರಿಸಲಾಗುತ್ತಿದೆ. ಮಾರ್ಚ್ 24 ರಿಂದ ಲಾಕ್​ಡೌನ್​ ಘೋಷಣೆ ಬಳಿಕ ದೇಶದ ಅತ್ಯಂತ ದೂರದ ಸ್ಥಳಗಳಲ್ಲಿರುವ ನಾಗರಿಕರ ಮನೆ ಬಾಗಿಲಿಗೆ ಅಗತ್ಯ ಸೇವೆಗಳನ್ನು ತಲುಪಿಸಿದೆ. ಅಂಚೆ ಇಲಾಖೆ 1.56 ಲಕ್ಷಕ್ಕೂ ಅಧಿಕ ಅಂಚೆ ಕಚೇರಿಗಳು ಮತ್ತು 4 ಲಕ್ಷಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿದೆ.

ಇಂಡಿಯನ್​​ ಪೋಸ್ಟ್ ತನ್ನ ಭಾರತೀಯ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನೊಂದಿಗೆ 16 ಪ್ರಾದೇಶಿಕ ಡಿಪೋಗಳಿಂದ ಕೊರೊನಾ ಪರೀಕ್ಷಾ ಕಿಟ್‌ಗಳನ್ನು ದೇಶಾದ್ಯಂತ ಕೋವಿಡ್​-19 ಪರೀಕ್ಷೆಗೆ ಗೊತ್ತುಪಡಿಸಿದ 200 ಹೆಚ್ಚುವರಿ ಲ್ಯಾಬ್‌ಗಳಿಗೆ ತಲುಪಿಸಲು ಒಪ್ಪಂದ ಮಾಡಿಕೊಂಡಿದೆ. ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿ ಪ್ರಾದೇಶಿಕ ಡಿಪೋಗೆ ಪೋಸ್ಟ್ ಏಜೆನ್ಸಿ ಮತ್ತು ಐಸಿಎಂಆರ್ ಎರಡೂ ಏಜೆನ್ಸಿಗಳಿಂದ ನೋಡಲ್ ಅಧಿಕಾರಿಗಳನ್ನು ಗುರುತಿಸಲಾಗಿದೆ. ಇಂಡಿಯಾ ಪೋಸ್ಟ್ ಕೋಲ್ಕತ್ತಾ, ರಾಂಚಿ, ಪಾಟ್ನಾ, ಜೋಧ್​ಪುರ, ಅಜ್ಮೀರ್, ಜೈಪುರ, ಇಂಫಾಲ್ ಮತ್ತು ಐಜ್ವಾಲ ಮುಂತಾದವುಗಳಲ್ಲಿ ಸರಕುಗಳನ್ನು ವಿತರಿಸಿದೆ.

ಲಾಕ್​ಡೌನ್​ ಸಮಯದಲ್ಲಿ ಭಾರತೀಯ ಅಂಚೆ ಇಲಾಖೆಯ 1.7 ಲಕ್ಷ ಉಳಿತಾಯ ಖಾತೆಗಳಿಂದ 23 ಸಾವಿರ ಕೋಟಿ ರೂ ವಹಿವಾಟು ನಡೆಸಿದೆ. ಇದನ್ನು ಹೊರತು ಪಡಿಸಿ 78 ಲಕ್ಷ ಬ್ಯಾಂಕ್​ ಖಾತೆದಾರರ ಸುಮಾರು 2 ಸಾವಿರ ಕೋಟಿ ರೂ ಹಣವನ್ನ ಖಾತೆದಾರರಿಗೆ ತಲುಪಿಸಿದೆ ಮತ್ತು ಸಂಗ್ರಹ ಮಾಡಿದೆ.

ಇಷ್ಟೇ ಅಲ್ಲದೇ ಆಧಾರ್ ಆಧರಿತ ಪಾವತಿ ವ್ಯವಸ್ಥೆ (ಎಇಪಿಎಸ್) ಮುಖಾಂತರ ನಿತ್ಯ ಒಂದು ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸಿರುವ ಭಾರತೀಯ ಅಂಚೆ ಇಲಾಖೆ, 32 ಲಕ್ಷ ಕಾಗದ ಹಾಗೂ 17 ಲಕ್ಷ ಮನಿ ಆರ್ಡರ್​​ಗಳನ್ನ ಜನರಿಗೆ ತಲುಪಿಸಿದೆ.

Last Updated : May 12, 2020, 12:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.