ಹೈದರಾಬಾದ್: ಭೂಮಂಡಲದಲ್ಲಿ ಬರೋಬ್ಬರಿ 3,14,82,599 ಜನರಿಗೆ ಕೋವಿಡ್ ಸೋಂಕು ಅಂಟಿದೆ. 9,69,298 ರೋಗಿಗಳು ಮೃತಪಟ್ಟಿದ್ದಾರೆ. ಆದರೆ, ಸೋಂಕಿತರ ಪೈಕಿ 2.3 ಕೋಟಿ ಮಂದಿ ಗುಣಮುಖರಾಗಿದ್ದಾರೆ.
ಕೊರೊನಾ ಪ್ರಕರಣ ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 70,46,216 ಇದ್ದು, ಮೃತರ ಸಂಖ್ಯೆ 2,04,506ಕ್ಕೆ ಏರಿಕೆಯಾಗಿದೆ. ಎರಡನೇ ಸ್ಥಾನಕ್ಕೆ ಜಿಗಿದಿರುವ ಭಾರತದಲ್ಲಿ ಕೇಸ್ಗಳ ಸಂಖ್ಯೆ 55,60,105 ಹಾಗೂ ಸಾವಿನ ಸಂಖ್ಯೆ 88,965ಕ್ಕೆ ಏರಿಕೆಯಾಗಿದೆ. ಆದರೆ, ಚೇತರಿಕೆಯ ಪ್ರಮಾಣದಲ್ಲಿ ಭಾರತ ಅಗ್ರಸ್ಥಾನದಲ್ಲಿದೆ.
ಪ್ರಪಂಚದಾದ್ಯಂತ 2.3 ಕೋಟಿ ಜನರು ಕೋವಿಡ್ನಿಂದ ಗುಣಮುಖರಾಗಿದ್ದು, ಇದರಲ್ಲಿ ಭಾರತದಲ್ಲೇ ಶೇ.19 ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ಜಾಗತಿಕ ಕೋವಿಡ್ ರಿಕವರಿ ರೇಟ್ನಲ್ಲಿ ಭಾರತ ಅಗ್ರಸ್ಥಾನ ಪಡೆದುಕೊಂಡಿದೆ. ಶೇ.18.70 ಪ್ರಮಾಣದೊಂದಿಗೆ ಎರಡನೇ ಸ್ಥಾನದಲ್ಲಿ ಅಮೆರಿಕ ಇದ್ದು, ಶೇ.16.90 ಪ್ರಮಾಣದೊಂದಿಗೆ ಬ್ರೆಜಿಲ್ ಜಾಗತಿಕ ಕೊರೊನಾ ಗುಣಮುಖರ ಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿದೆ.
ಕೋವಿಡ್ ಪೀಡಿತ ಜಗತ್ತಿನ ಮೂರನೇ ರಾಷ್ಟ್ರವಾದ ಬ್ರೆಜಿಲ್ನಲ್ಲಿ 45,60,083 ಪ್ರಕರಣ ಹಾಗೂ 1,37,350 ಸಾವು ವರದಿಯಾಗಿವೆ. 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 11,09,595 ಕೇಸ್ಗಳಿವೆ. 19,489 ಜನ ಸಾವನ್ನಪ್ಪಿದ್ದಾರೆ. ಒಟ್ಟು 188 ರಾಷ್ಟ್ರಗಳು ಕೋವಿಡ್ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ ಪೀಡಿತ ವಿಶ್ವದ ಟಾಪ್ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.
ಕೋವಿಡ್ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್ನಿಂದ ಈವರೆಗೆ ಚೀನಾದಲ್ಲಿ 85,297 ಪ್ರಕರಣ ಹಾಗೂ 4,634 ಸಾವು ವರದಿಯಾಗಿವೆ.