ETV Bharat / bharat

ವಿಶ್ವದಲ್ಲಿ ಕೋವಿಡ್​ಗೆ 7 ಲಕ್ಷ ಮಂದಿ ಬಲಿ... ಅಮೆರಿಕದಲ್ಲೇ ಅರ್ಧ ಕೋಟಿ ಸೋಂಕಿತರು!

author img

By

Published : Aug 7, 2020, 5:52 PM IST

ಕೋವಿಡ್ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 50,32,179 ಇದ್ದು, ಮೃತರ ಸಂಖ್ಯೆ 1,62,804ಕ್ಕೆ ಏರಿಕೆಯಾಗಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಹೈದರಾಬಾದ್​: ಕೊರೊನಾ ರೌದ್ರಾವತಾರಕ್ಕೆ ವಿಶ್ವವೇ ತತ್ತರಿಸಿದೆ. ಈವರೆಗೆ ಬರೋಬ್ಬರಿ 1,92,61,406 ಮಂದಿಗೆ ವೈರಸ್​ ಅಂಟಿದ್ದು, 7,17,717 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಸೋಂಕಿತರ ಪೈಕಿ ಅರ್ಧಕ್ಕೂ ಅಧಿಕ ಅಂದರೆ 1,23,63,249 ಜನರು ಗುಣಮುಖರಾಗಿದ್ದಾರೆ.

ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 50,32,179 ಇದ್ದು, ಮೃತರ ಸಂಖ್ಯೆ 1,62,804ಕ್ಕೆ ಏರಿಕೆಯಾಗಿದೆ. ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 29,17,562 ಪ್ರಕರಣಗಳು ಹಾಗೂ 98,644 ಸಾವುಗಳು ವರದಿಯಾಗಿವೆ.

ಮೂರನೇ ಸ್ಥಾನಕ್ಕೆ ಜಿಗಿದಿರುವ ಭಾರತದಲ್ಲಿ 20,27,047 ಸೋಂಕಿತರು ಪತ್ತೆಯಾಗಿದ್ದು, ಈವರೆಗೆ 41,638 ಮಂದಿ ಮೃತಪಟ್ಟಿದ್ದಾರೆ. 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 8,71,894 ಕೇಸ್​ಗಳಿದ್ದು, 14,606 ಜನರು ಸಾವನ್ನಪ್ಪಿದ್ದಾರೆ.

ಒಟ್ಟು 188 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಕೋವಿಡ್​ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಮತ್ತೆ ಕೇಸ್​ಗಳು​ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 84,565 ಪ್ರಕರಣಗಳು ಹಾಗೂ 4,634 ಸಾವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.