ನವದೆಹಲಿ: ವಿಶ್ವ ಸಂಸ್ಕೃತ ದಿನಾಚರಣೆಯಾದ ಇಂದು ಆಲ್ ಇಂಡಿಯಾ ರೇಡಿಯೋ (ಎಐಆರ್) ತನ್ನ ಮೊದಲ ವಿಶೇಷ ಕಾರ್ಯಕ್ರಮವನ್ನು ಸಂಸ್ಕೃತದಲ್ಲಿ ಪ್ರಸಾರ ಮಾಡಿದೆ.
"ಬಹುಜನ ಭಾಷಾ-ಸಂಸ್ಕೃತ ಭಾಷಾ" ಎಂಬ 20 ನಿಮಿಷಗಳ ಕಾರ್ಯಕ್ರಮವು ಇಂದು ಬೆಳಗ್ಗೆ 7.10ರಿಂದ 7.30ರವರೆಗೆ ಎಐಆರ್ನಲ್ಲಿ ಪ್ರಸಾರಗೊಂಡಿತು.
ಈ ಕಾರ್ಯಕ್ರಮದಲ್ಲಿ ಹೆಸರಾಂತ ಸಂಸ್ಕೃತ ವಿದ್ವಾಂಸರು ಸಂಸ್ಕೃತದ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.