ETV Bharat / bharat

ಇಂದು ವಿಶ್ವ ಹೃದಯ ದಿನ: ನಿಮ್ಮ ಪುಟ್ಟ ಹೃದಯದ ಬಗ್ಗೆ ಕಾಳಜಿ ಇರಲಿ

author img

By

Published : Sep 29, 2020, 6:01 AM IST

Updated : Sep 29, 2020, 9:12 AM IST

ನಮ್ಮ ಹೃದಯದ ಲಬ್ ಡಬ್ ಲಬ್ ಡಬ್ ಬಡಿತವೇ ಜೀವಂತಿಕೆಯ ಸೆಲೆ. ಇದು ನಿರಂತರವಾಗಿದ್ದರೇನೆ ಜೀವನ. ನಮ್ಮ ಹೃದಯ ಸದಾ ಆರೋಗ್ಯವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಈ ನಮ್ಮ ಹೃದಯಕ್ಕೂ ಒಂದು ದಿನವಿದೆ ಎಂದು ನಿಮಗೆ ಗೊತ್ತೇ?. ಹೌದು. ಸೆಪ್ಟೆಂಬರ್ 29 ಅನ್ನು ವಿಶ್ವದೆಲ್ಲೆಡೆ ಹೃದಯ ದಿನವನ್ನಾಗಿ ಆಚರಿಸಲಾಗುತ್ತದೆ. ಮನುಷ್ಯನ ಅಸ್ತಿತ್ವಕ್ಕೆ ಸಂಕೇತವಾಗಿರುವ ಹೃದಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಹೃದಯ ದಿನ
ವಿಶ್ವ ಹೃದಯ ದಿನ

ಪ್ರತಿ ವರ್ಷ ಸೆಪ್ಟೆಂಬರ್ 29ನನ್ನು ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತದೆ. ಹೃದಯಾಘಾತ ಮತ್ತು ಇದಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಗಟ್ಟಲು ಹಾಗೂ ಅವುಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ವರ್ಲ್ಡ್ ಹಾರ್ಟ್ ಫೆಡರೇಶನ್ (ಡಬ್ಲ್ಯುಎಚ್‌ಎಫ್) ಅಂತಾರಾಷ್ಟ್ರೀಯ ಅಭಿಯಾನವಾಗಿ ಪ್ರತಿ ವರ್ಷ ಸೆ.29ರಂದು ವಿಶ್ವ ಹೃದಯ ದಿನವನ್ನು ಆಯೋಜಿಸುತ್ತದೆ.

ಪಾರ್ಶ್ವವಾಯು ಸೇರಿದಂತೆ ಹೃದಯ ಸಂಬಂಧಿ ಕಾಯಿಲೆಗಳು (ಸಿವಿಡಿ) ಇವೆಲ್ಲಾ ಸಾಂಕ್ರಾಮಿಕವಲ್ಲದ ಕಾಯಿಲೆಗಳಾಗಿದ್ದು, ಇದು ವಿಶ್ವದ ನಂಬರ್ ಒನ್ ಕೊಲೆಗಾರನಾಗಿದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ಸೋಲಿಸೋಣ ಎಂಬುದು ವಿಶ್ವ ಹೃದಯ ದಿನ 2020ರ ಥೀಮ್​ ಆಗಿದೆ.

ಇತಿಹಾಸ ಮತ್ತು ಪ್ರಾಮುಖ್ಯತೆ:

ವಿಶ್ವ ಹೃದಯ ದಿನಾಚರಣೆಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜೊತೆ ಒಗ್ಗೂಡಿ ವಿಶ್ವ ಹೃದಯ ಒಕ್ಕೂಟ (ಡಬ್ಲ್ಯುಎಚ್‌ಎಫ್) 1999ರಲ್ಲಿ ಆರಂಭಿಸಿತು. ಈ ದಿನದ ಮೂಲ ಕಲ್ಪನೆಯನ್ನು 1997-1999ರವರೆಗೆ ವರ್ಲ್ಡ್ ಹಾರ್ಟ್ ಫೆಡರೇಶನ್ (ಡಬ್ಲ್ಯುಎಚ್‌ಎಫ್) ಅಧ್ಯಕ್ಷ ಆಂಟೋನಿ ಬೇಯ್ಸ್ ಡಿ ಲೂನಾ ಹೊಂದಿದ್ದರು. ಮೊದಲು ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ ಕೊನೆಯ ಭಾನುವಾರ (2011 ರವರೆಗೆ) ಆಚರಿಸಲಾಗುತ್ತಿತ್ತು.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಂದಾಜಿನ ಪ್ರಕಾರ ಪ್ರತಿವರ್ಷ 17.9 ದಶಲಕ್ಷಕ್ಕೂ ಹೆಚ್ಚು ಜನರು ಹೃಯದ ಸಂಬಂಧಿ ಕಾಯಿಲೆಗಳಿಂದ ಸಾಯುತ್ತಿದ್ದಾರೆ. ಇದು ಜಾಗತಿಕ ಸಾವಿನಲ್ಲಿ ಶೇ.31ಕ್ಕಿಂತ ಹೆಚ್ಚು ಇದೆ. ಸುಮಾರು 80 ಪ್ರತಿಶತದಷ್ಟು ಜನರು ಹೃದಯಾಘಾತ ಅಥವಾ ಪಾರ್ಶ್ವವಾಯುವಿನಿಂದ ಸಾಯುತ್ತಿದ್ದಾರೆ. ಶೇ. 75ರಷ್ಟು ಪ್ರಕರಣಗಳು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಂದ ವರದಿಯಾಗಿವೆ.

ಹೃದಯ ಸಂಬಂಧಿ ಖಾಯಿಲೆಗೆ ಕಾರಣಗಳು:

ಡಬ್ಲ್ಯುಎಚ್‌ಒ ಪ್ರಕಾರ, ಹೃದಯ ರಕ್ತನಾಳಗಳ ಅಸ್ವಸ್ಥತೆಗಳ ಒಂದು ಗುಂಪು. ಅವುಗಳಲ್ಲಿ ಪರಿಧಮನಿಯ ಹೃದಯ ಕಾಯಿಲೆ, ಸೆರೆಬ್ರೊವಾಸ್ಕುಲರ್ ಕಾಯಿಲೆ, ಸಂಧಿವಾತ ಹೃದ್ರೋಗ ಮತ್ತು ಜನ್ಮಜಾತ ಹೃದಯ ಕಾಯಿಲೆಗಳು ಸೇರಿವೆ.

2016 ರಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ 17.9 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ. ಇದು ಎಲ್ಲಾ ಜಾಗತಿಕ ಸಾವುಗಳಲ್ಲಿ ಶೇ.31 ರಷ್ಟಿದೆ. ಈ ಸಾವುಗಳಲ್ಲಿ ಶೇ.85ರಷ್ಟು ಹೃದಯಾಘಾತ ಮತ್ತು ಪಾರ್ಶ್ವವಾಯುವಿನಿಂದ ಆಗಿವೆ.

2015 ರಲ್ಲಿ ರೋಗ ಲಕ್ಷಣವಿಲ್ಲದ ಕಾಯಿಲೆಗಳಿಂದಾಗಿ 17 ದಶಲಕ್ಷ ಅಕಾಲಿಕ ಮರಣಗಳು (70 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಸಂಭವಿಸಿವೆ. ಶೇ.82ರಷ್ಟು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಈ ಸಾವು ಹೆಚ್ಚಿದ್ದು, ಶೇ. 37ರಷ್ಟು ಹೃದಯ ಸಂಬಂಧಿ ಕಾಯಿಲೆಗಳಿಂದ ಉಂಟಾಗಿವೆ.

ಹೆಚ್ಚಾಗಿ ಈ ಕಾಯಿಲೆಗಳು ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ನಿಷ್ಕ್ರಿಯತೆ, ತಂಬಾಕು ಬಳಕೆ ಮತ್ತು ಆಲ್ಕೊಹಾಲ್​ನ ಅತಿಯಾದ ಬಳಕೆಯಿಂದ ಬರುತ್ತವೆ.

ಇಂತಹ ಜೀವನಶೈಲಿಯ ಆಯ್ಕೆಗಳು ರಕ್ತದೊತ್ತಡ ಹೆಚ್ಚಾಗಲು, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಲು ಮತ್ತು ಬೊಜ್ಜಿಗೆ ಕಾರಣವಾಗಬಹುದು. ಇದರಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಉಂಟಾದ ಸಾವುಗಳು:

ಹೃದಯ ಸಂಬಂಧಿ ಕಾಯಿಲೆಗಳಿಂದ ಉಂಟಾಗುವ ಸಾವಿನ ಪ್ರಮಾಣವು 1990 ಮತ್ತು 2016 ರ ನಡುವೆ ಯುಎಸ್​​ನಲ್ಲಿ ಗಮನಾರ್ಹವಾಗಿ ಶೇ.41ರಷ್ಟು ಕಡಿಮೆಯಾಗಿದೆ.

ಭಾರತದಲ್ಲಿ ಅದೇ ಅವಧಿಯಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಇದು 115.7 ರಿಂದ 209.1 ಸಾವುಗಳಿಗೆ ಕಾರಣವಾಗಿದೆ. ಅಂದರೆ, ಶೇ.34ರಷ್ಟು ಏರಿಕೆಯಾಗಿದೆ.

ಇಸ್ಕೆಮಿಕ್ ಹೃದ್ರೋಗ ಮತ್ತು ಪಾರ್ಶ್ವವಾಯು ಪ್ರಕಾರ ಭಾರತ ಮತ್ತು ಯುಎಸ್​ನಲ್ಲಿ ಸಂಭವಿಸಿದ ಸಾವುಗಳು ಶೇ.15-20 ಮತ್ತು ಶೇ.6-9ರಷ್ಟಿದೆ ಎಂದು ಅಂದಾಜಿಸಲಾಗಿದೆ.

ಇದಲ್ಲದೆ ಪಂಜಾಬ್, ಕೇರಳ ಮತ್ತು ತಮಿಳುನಾಡಿನಲ್ಲಿ ಹೃದಯ ಸಂಬಂಧಿ ಕಾಯಿಲೆ ಹರಡುವಿಕೆಯು 1,00,000 ಜನರಿಗೆ ಕನಿಷ್ಠ 5,000 ಆಗಿದೆ. ಮಿಜೋರಾಂ ಮತ್ತು ಅರುಣಾಚಲ ಪ್ರದೇಶ 1,00,000 ಜನರಿಗೆ 3,000 ಕ್ಕಿಂತ ಕಡಿಮೆ ಇರುವ ಎರಡು ರಾಜ್ಯಗಳಾಗಿವೆ.

ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆ ಏರಿಕೆಗೆ ಕಾರಣಗಳು:

ಆನುವಂಶಿಕ ಅಂಶಗಳು, ಭ್ರೂಣದ ಪ್ರೋಗ್ರಾಮಿಂಗ್ ಮತ್ತು ಇತರ ಆರಂಭಿಕ ಜೀವನದ ಪ್ರಭಾವಗಳಂತಹ ಜೈವಿಕ ಅಪಾಯಗಳನ್ನು ಒಳಗೊಂಡಿರುವ ಅನೇಕ ಕಾರ್ಯವಿಧಾನಗಳು ಕಾರಣವೆಂದು ಹೇಳಲಾಗಿದೆ. ಕ್ಷಿಪ್ರ ಸಾಂಕ್ರಾಮಿಕ ರೋಗ ಪರಿವರ್ತನೆ, ಕ್ಷಿಪ್ರ ಮತ್ತು ಯೋಜಿತವಲ್ಲದ ನಗರೀಕರಣ, ಬದಲಾಗುತ್ತಿರುವ ಜೀವನಶೈಲಿಯಂತಹ ಸಾಮಾಜಿಕ ಅಂಶಗಳಿಂದ ಇದು ಹೆಚ್ಚಾಗುತ್ತಿದೆ.

ಭಾರತೀಯರ ಆಹಾರ ಪದ್ಧತಿಯೂ ಬದಲಾಗಿದ್ದು, ಪಾಲಿಶ್ ಮಾಡಿದ ಅಕ್ಕಿ ಮತ್ತು ಮಿಲ್ಲಿಂಗ್ ಗೋಧಿಯಂತಹ ಹೆಚ್ಚು ಸಂಸ್ಕರಿಸಿದ ಆಹಾರಗಳನ್ನು ತೆಗೆದುಕೊಳ್ಳುವುದು. ಇದು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ. ಪ್ರೋಟೀನ್ ಕಡಿಮೆ ಇರುವ ಆಹಾರಗಳು. ಕಳೆದ 50 ವರ್ಷಗಳಲ್ಲಿ ಹೃದಯದ ಆರೋಗ್ಯವನ್ನು ಕಾಪಾಡುವ ಪ್ರಮುಖ ಅಂಶವಾದ ದೈಹಿಕ ಚಟುವಟಿಕೆಯಲ್ಲಿ ಸಾಕಷ್ಟು ಕುಸಿತ ಕಂಡುಬಂದಿದೆ.

ಸಾಂಪ್ರದಾಯಿಕ ಅಪಾಯಕಾರಿ ಅಂಶಗಳಾದ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಕಳೆದ 30 ವರ್ಷಗಳಲ್ಲಿ ಅನೇಕ ಪಟ್ಟು ಹೆಚ್ಚಾಗಿದೆ. ಭಾರತದಲ್ಲಿ ಕ್ರಮವಾಗಿ 207 ಮತ್ತು 73 ದಶಲಕ್ಷಕ್ಕೂ ಹೆಚ್ಚು ಜನರು ಅಧಿಕ ರಕ್ತದೊತ್ತಡ ಮತ್ತು ಮಧುಮೇಹವನ್ನು ಹೊಂದಿದ್ದಾರೆ. ತಂಬಾಕು ಸಂಬಂಧಿತ ಕಾಯಿಲೆಗಳಿಂದಾಗಿ ಪ್ರತಿವರ್ಷ ಸುಮಾರು 10 ಲಕ್ಷ ಜನರು ಸಾಯುತ್ತಿರುವುದರಿಂದ ತಂಬಾಕು ಬಳಕೆ ಹೆಚ್ಚಾಗಿದೆ. ಹಲವಾರು ರಾಜ್ಯಗಳಲ್ಲಿ ಮದ್ಯ ಸೇವನೆ ಹೆಚ್ಚುತ್ತಿದೆ. ಇದಲ್ಲದೆ, ಹೊಸ ಮತ್ತು ಉದಯೋನ್ಮುಖ ಸಮಸ್ಯೆಗಳಾದ ವಾಯುಮಾಲಿನ್ಯ ಮತ್ತು ಪರಿಸರ ಮಾಲಿನ್ಯಕಾರಕಗಳು ಭಾರತದಲ್ಲಿ ಹೃದ್ರೋಗಗಳ ಹೊರೆ ಹೆಚ್ಚಿಸುತ್ತಿವೆ.

ಡಬ್ಲ್ಯುಎಚ್‌ಒ ನಾಯಕತ್ವದಲ್ಲಿ, ಎಲ್ಲಾ ಸದಸ್ಯ ರಾಷ್ಟ್ರಗಳು (194 ದೇಶಗಳು) 2013 ರಲ್ಲಿ ಎನ್‌ಸಿಡಿ ಹೊರೆ ಕಡಿಮೆ ಮಾಡಲು ಜಾಗತಿಕ ಕಾರ್ಯವಿಧಾನಗಳ ಬಗ್ಗೆ ಒಪ್ಪಿಕೊಂಡಿವೆ. ಇದರಲ್ಲಿ "ಎನ್‌ಸಿಡಿಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಜಾಗತಿಕ ಕ್ರಿಯಾ ಯೋಜನೆ 2013-2020". ಈ ಯೋಜನೆಯು ಒಂಬತ್ತು ಸ್ವಯಂಪ್ರೇರಿತ ಜಾಗತಿಕ ಗುರಿಗಳ ಮೂಲಕ 2025 ರ ವೇಳೆಗೆ ಎನ್‌ಸಿಡಿಗಳಿಂದ ಅಕಾಲಿಕ ಮರಣದ ಸಂಖ್ಯೆಯನ್ನು ಶೇ.25 ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಹೃದಯ ಆರೋಗ್ಯವಾಗಿ ಇರಬೇಕಾದರೆ ಸರಿಯಾದ ಆಹಾರ ಕ್ರಮಗಳನ್ನು ಅನುಸರಿಸಬೇಕು. ಉತ್ತಮ ರೀತಿಯ ದೈಹಿಕ ಚಟುವಟಿಕೆಗಳನ್ನು ಮಾಡಬೇಕು. ಜಂಕ್ ಫುಡ್, ಧೂಮಪಾನ, ಮದ್ಯಪಾನದಿಂದ ದೂರವಿರಬೇಕು. 3 ಕೊಬ್ಬಿನ ಅಂಶವಿರುವ ಆಹಾರ, ಧಾನ್ಯಗಳು, ಪೌಷ್ಟಿಕ ಆಹಾರ, ತಾಜಾ ಹಣ್ಣು- ತರಕಾರಿಗಳು, ವಿಟಮಿನ್ ಡಿ ಯುಕ್ತ ಆಹಾರಗಳನ್ನು ಸೇವಿಸಬೇಕು. ವಾಕಿಂಗ್ ಮಾಡುವುದರಿಂದ ಹೃದಯದ ಕಾಯಿಲೆಗಳಿಂದ ಅಂತರದಲ್ಲಿ ಇರಬಹುದು. ಸಂಗೀತ, ಧ್ಯಾನ, ಪ್ರಾಣಾಯಾಮಗಳಿಂದ ಹೃದಯದ ಕಾರ್ಯಗಳು ಸಲೀಸಾಗಿ ನಡೆಯುತ್ತವೆ.

Last Updated : Sep 29, 2020, 9:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.