ವಾಷಿಂಗ್ಟನ್(ಯುಎಸ್ಎ): ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕಾಗಿ ವಿಶ್ವ ಬ್ಯಾಂಕ್ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತನ್ನ ಮೊದಲ ತುರ್ತು ಬೆಂಬಲ ಕಾರ್ಯಾಚರಣೆಯನ್ನು ಗುರುವಾರ ಅನುಮೋದಿಸಿದೆ.
1.9 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ಮೊದಲ ಗುಂಪಿನ ಯೋಜನೆಗಳು 25 ದೇಶಗಳಿಗೆ ಸಹಾಯ ಮಾಡಲಿವೆ ಮತ್ತು ತ್ವರಿತ ಕಾರ್ಯಾಚರಣೆ ಪ್ರಕ್ರಿಯೆಯನ್ನು ಬಳಸಿಕೊಂಡು 40ಕ್ಕೂ ಹೆಚ್ಚು ದೇಶಗಳಲ್ಲಿ ಹೊಸ ಕಾರ್ಯಾಚರಣೆಗಳು ಮುಂದುವರಿಯುತ್ತಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಇದಲ್ಲದೆ ವಿಶ್ವಬ್ಯಾಂಕ್ 71.7 ಶತಕೋಟಿ ಡಾಲರ್ ಮೌಲ್ಯದ ಅಸ್ತಿತ್ವದಲ್ಲಿರುವ ವಿಶ್ವಬ್ಯಾಂಕ್ ಹಣಕಾಸು ಯೋಜನೆಗಳಲ್ಲಿ ಸಂಪನ್ಮೂಲಗಳನ್ನು ಮರುಹಂಚಿಕೆ ಮಾಡಲು ವಿಶ್ವದಾದ್ಯಂತ ಕೆಲಸ ಮಾಡುತ್ತಿದೆ. ಇದರಲ್ಲಿ ಪುನಾರಚನೆ, ಅಸ್ತಿತ್ವದಲ್ಲಿರುವ ಯೋಜನೆಗಳ ತುರ್ತು ಘಟಕಗಳ ಬಳಕೆ (ಸಿಇಆರ್‌ಸಿ) ಮತ್ತು ಸಿಎಟಿ ಡಿಡಿಒಗಳನ್ನು ಪ್ರಚೋದಿಸುವುದು ಮತ್ತು ಪ್ರತಿ ಪ್ರದೇಶ ವ್ಯಾಪಿಸಲಿದೆ.
ಸಾಂಕ್ರಾಮಿಕ ರೋಗದ ತ್ವರಿತ ಆರೋಗ್ಯ ಪರಿಣಾಮಗಳಿಗೆ ಸ್ಪಂದಿಸಲು ಮತ್ತು ಆರ್ಥಿಕ ಚೇತರಿಕೆಗೆ ಉತ್ತೇಜನ ನೀಡುವ ಕೊವಿಡ್-19 ಕ್ರಮಗಳನ್ನು ಬೆಂಬಲಿಸಲು ಮುಂದಿನ 15 ತಿಂಗಳಲ್ಲಿ 160 ಬಿಲಿಯನ್ ಡಾಲರ್‌ವರೆಗೆ ನಿಯೋಜಿಸಲು ಸಿದ್ಧವಾಗಿದೆ ಎಂದು ವಿಶ್ವ ಬ್ಯಾಂಕ್ ಗುಂಪು ಹೇಳಿದೆ. ಇದರ ಜೊತೆಯಲ್ಲಿ ವಿಶಾಲ ಆರ್ಥಿಕ ಕಾರ್ಯಕ್ರಮವು ಚೇತರಿಕೆಯ ಸಮಯ ಕಡಿಮೆ ಮಾಡುವುದು, ಬೆಳವಣಿಗೆಗೆ ಉತ್ತಮ ಪರಿಸರ ಸೃಷ್ಟಿಸುವುದು, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಬೆಂಬಲಿಸುವುದು ಮತ್ತು ಬಡವರು ಮತ್ತು ದುರ್ಬಲರನ್ನು ರಕ್ಷಿಸಲು ಸಹಾಯ ಮಾಡುವುದನ್ನು ಮಾಡಲಿದೆ.
ನೀತಿ ಆಧಾರಿತ ಹಣಕಾಸುಗಳಿಗೆ ಒತ್ತು ನೀಡಿ ಬಡ ಕುಟುಂಬಗಳು ಮತ್ತು ಪರಿಸರವನ್ನು ರಕ್ಷಿಸುವ ಮೂಲಕ ಈ ಕಾರ್ಯಾಚರಣೆಗಳಲ್ಲಿ ಬಡತನದತ್ತ ಬಲವಾದ ಗಮನವಿರುತ್ತದೆ ಎಂದು ಬ್ಯಾಂಕ್ ಹೇಳಿದೆ. "ಕೊವಿಡ್-19 ಹರಡುವುದನ್ನು ಕಡಿಮೆ ಮಾಡಲು ವಿಶ್ವಬ್ಯಾಂಕ್ ಸಮೂಹವು ವಿಶಾಲವಾದ, ತ್ವರಿತ ಕ್ರಮಕೈಗೊಳ್ಳುತ್ತಿದೆ ಮತ್ತು ನಾವು ಈಗಾಗಲೇ 65ಕ್ಕೂ ಹೆಚ್ಚು ದೇಶಗಳಲ್ಲಿ ಆರೋಗ್ಯ ಪ್ರತಿಕ್ರಿಯೆ ಕಾರ್ಯಾಚರಣೆಯನ್ನು ಮುಂದುವರಿಸಿದ್ದೇವೆ" ಎಂದು ವಿಶ್ವ ಬ್ಯಾಂಕ್ ಸಮೂಹದ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಉಲ್ಲೇಖಿಸಿದ್ದಾರೆ. ವಿಶ್ವ ಬ್ಯಾಂಕಿನ ಆರಂಭಿಕ ಯೋಜನೆಗಳಲ್ಲಿ ಭಾರತಕ್ಕೆ1 ಬಿಲಿಯನ್ ಡಾಲರ್ ತುರ್ತು ಹಣಕಾಸು ಸಹಾಯ ಸಹ ಸೇರಿದೆ.
ಇದು ಭಾರತದಲ್ಲಿ ಉತ್ತಮ ಸ್ಕ್ರೀನಿಂಗ್, ಕಾಂಟ್ಯಾಕ್ಟ್ ಟ್ರೇಸಿಂಗ್ ಮತ್ತು ಲ್ಯಾಬೊರೇಟರಿ ಡಯಾಗ್ನೋಸ್ಟಿಕ್ಸ್‌ನ ಬೆಂಬಲಿಸುತ್ತದೆ ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳ ಸಂಗ್ರಹಕ್ಕೆ ಮತ್ತು ಹೊಸ ಪ್ರತ್ಯೇಕ ವಾರ್ಡ್‌ಗಳನ್ನು ಸ್ಥಾಪನೆಗೆ ಸಹಾಯ ಮಾಡುತ್ತದೆ.