ETV Bharat / bharat

ಇಂದು ವಿಶ್ವ ಏಡ್ಸ್​​​ ದಿನ: ಭಾರತದಲ್ಲಿ ಕಡಿಮೆಯಾದ HIV ಪ್ರಮಾಣ, ಪಾಕ್​ ಮೇಲೆ ಹೆಮ್ಮಾರಿ ಸವಾರಿ! - ಹೆಚ್​ಐವಿ/ಏಡ್ಸ್ ನಿಯಂತ್ರಣ

ಇಂದು ವಿಶ್ವದಾದ್ಯಂತ ಏಡ್ಸ್​ ದಿನ ಆಚರಣೆ ಮಾಡಲಾಗುತ್ತಿದ್ದು, ಕಳೆದ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದಾಗ ಭಾರತದಲ್ಲಿ ಮಾರಕ ಕಾಯಿಲೆ ಪ್ರಮಾಣ ತುಂಬಾ ಕಡಿಮೆಯಾಗಿದೆ.

World AIDS Day 2019
ಇಂದು ವಿಶ್ವ ಏಡ್ಸ್ ದಿನ
author img

By

Published : Dec 1, 2019, 4:01 AM IST

ನವದೆಹಲಿ: ಇಂದು ವಿಶ್ವ ಏಡ್ಸ್ ದಿನ. ಪ್ರತಿ ವರ್ಷ ಡಿಸೆಂಬರ್ 1ರಂದು ವಿಶ್ವದೆಲ್ಲೆಡೆ ಜನರಲ್ಲಿ ಹೆಚ್​ಐವಿ/ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ವಿಶ್ವ ಏಡ್ಸ್​​ ದಿನವನ್ನಾಗಿ ಆಚರಿಸಲಾಗುತ್ತಿದೆ.

ಯುನೈಟೆಡ್​​ ನೇಷನ್ಸ್​​​ ನೀಡಿರುವ ಮಾಹಿತಿ ಪ್ರಕಾರ 2017ರಿಂದ ಭಾರತದಲ್ಲಿ ಇದರ ಪ್ರಮಾಣ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಪಕ್ಕದ ಪಾಕಿಸ್ತಾನದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ ಎಂದು ವರದಿ ನಿಡಿದೆ.

World AIDS Day 2019
ಇಂದು ವಿಶ್ವ ಏಡ್ಸ್ ದಿನ

ಭಾರತದಲ್ಲಿ 2010ರಲ್ಲಿ 120,000ರಿಂದ 2017ರಲ್ಲಿ 88,000ಕ್ಕೆ ಕಡಿಮೆಯಾಗಿದ್ದು, ಇದೇ ವೇಳೆ ಏಡ್ಸ್​​​ನಿಂದ ಸಾವನ್ನಪ್ಪಿರುವವರ ಸಂಖ್ಯೆ ಸಹ 160,000ರಿಂದ 69,000ಕ್ಕೆ ಇಳಿಕೆಯಾಗಿದೆ. ಜಾಗತಿಕವಾಗಿ ಕಳೆದ ಏಳು ವರ್ಷಗಳಲ್ಲಿ ಶೇ. 18ರಷ್ಟು ಮಾತ್ರ ಏಡ್ಸ್​ ಪ್ರಕರಣ ಕಡಿಮೆಯಾಗಿದ್ದು, 2010ರಲ್ಲಿ 2.2 ದಶಲಕ್ಷದಿಂದ 2017ರಲ್ಲಿ 1.8 ದಶಲಕ್ಷಕ್ಕೆ ಇಳಿದಿದೆ ಎಂದು ವರದಿಯಲ್ಲಿ ತಿಳಿಸಿದೆ. ​​​ 2017ರಲ್ಲಿ ವಿಶ್ವದಾದ್ಯಂತ 36.9 ಮಿಲಿಯನ್​ ಜನರು ಹೆಚ್​ಐವಿ ಪೀಡಿತರಾಗಿದ್ದು, ಅದರಲ್ಲಿ 21.7 ಮಿಲಿಯನ್​ ಜನರು ಮಾತ್ರ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಪ್ರಮುಖವಾಗಿ ಲೈಂಗಿಕ ಕಾರ್ಯಕರ್ತರು, ಸಲಿಂಗಕಾಮಿಗಳು, ಕೈದಿಗಳು, ವಲಸಿಗರು, ನಿರಾಶ್ರಿತರು ಈ ಕಾಯಿಲೆಗೆ ಹೆಚ್ಚಾಗಿ ಪೀಡಿತರಾಗುತ್ತಿದ್ದು, ಇವರು ಚಿಕಿತ್ಸೆಯಿಂದಲೂ ಹೊರಗುಳಿಯುತ್ತಿದ್ದಾರೆ. ಭಾರತದಲ್ಲಿ ಏಡ್ಸ್​ ನಿಯಂತ್ರಣ ಕಾರ್ಯದ ವೇಗ ಆಮೆಗತಿಯಲ್ಲಿ ಸಾಗುತ್ತಿದ್ದು, 2010ರಿಂದ 2017ರವರೆಗೆ ಭಾರತದಲ್ಲಿ ಕೇವಲ ಶೆ. 27ಪ್ರತಿಶತದಷ್ಟು ಇಳಿಕೆಯಾಗಿದೆ.

ಭಾರತದಲ್ಲಿ ಏಡ್ಸ್​ ಅಂಕಿಸಂಖ್ಯೆ
World AIDS Day 2019

ಭಾರತದಲ್ಲಿ ಏಡ್ಸ್ ಅಂಕಿ-ಅಂಶ
2017ರ ವರದಿ ಪ್ರಕಾರ (15-49 ವರ್ಷ) ಹೆಚ್‌ಐವಿ ಹರಡುವಿಕೆ ಪ್ರಮಾಣ 2017ರಲ್ಲಿ 0.22% (0.16% - 0.30%), 2017ರಲ್ಲಿ ವಯಸ್ಕರ ಎಚ್‌ಐವಿ ಹರಡುವಿಕೆ 0.25% ಎಂದು ಅಂದಾಜಿಸಲಾಗಿದೆ. (0.18-0.34) ಪುರುಷರಲ್ಲಿ ಮತ್ತು ಸ್ತ್ರೀಯರಲ್ಲಿ 0.19% (0.14-0.25). 2001-03ರಲ್ಲಿ ಅಂದಾಜು ಗರಿಷ್ಠ 0.38%ರಿಂದ 2007ರಲ್ಲಿ 0.34%, 0.28% ರಷ್ಟಿದೆ. 2012 ಮತ್ತು 2015ರಲ್ಲಿ 0.26%ರಿಂದ 2017ರಲ್ಲಿ 0.22% ಇದರ ಪ್ರಮಾಣವಿದೆ. 2017ರ ವರದಿ ಪ್ರಕಾರ ಕರ್ನಾಟಕದಲ್ಲಿ 0.47ರಷ್ಟು ಇದರ ಪ್ರಮಾಣವಿತ್ತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಡ್ಸ್​ ಅಂಕಿ-ಅಂಶ
2019ರ ಜೂನ್​ ವೇಳಗೆ 24.5 ಮಿಲಿಯನ್​ ಜನರು ಏಡ್ಸ್​​​ ತಪಾಸಣೆಗೆ ಒಳಗಾಗಿದ್ದು, 2018ರಲ್ಲಿ 37.9 ಮಿಲಿಯನ್​ ಜನರು ಈ ಕಾಯಿಲೆಗೆ ತುತ್ತಾಗಿದ್ದಾರೆ. 2018ರ ಮುಕ್ತಾಯದ ವೇಳೆಗೆ 32 ಮಿಲಿಯನ್​ ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. 2018ರಲ್ಲಿ ಒಟ್ಟು 37.9 ಮಿಲಿಯನ್​ ಜನರು ಏಡ್ಸ್​​ನೊಂದಿಗೆ ಹೋರಾಟ ನಡೆಸುವುದರ ಜತೆಗೆ ಜೀವನ ಸಾಗಿಸುತ್ತಿದ್ದು, ಇದರಲ್ಲಿ 31.3 ಕಡಿಮೆ ವಯಸ್ಸಿನವರಾಗಿದ್ದಾರೆ.

2018ರಲ್ಲಿ ಸುಮಾರು 770,000 ಜನರು ಏಡ್ಸ್​​ ಸಂಬಂಧಿತ ಕಾಯಿಲೆಯಿಂದ ಸಾವನ್ನಪ್ಪಿದ್ದು, 2004ರಲ್ಲಿ 1.6 ಮಿಲಿಯನ್​ ಜನರು ಸಾವಿಗೀಡಾಗಿದ್ದಾರೆ. ಇನ್ನು ಪಾಕಿಸ್ತಾನದಲ್ಲಿ ಏಡ್ಸ್​ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿವೆ ಎಂದು ತಿಳಿದು ಬಂದಿದೆ.

ಮಹಿಳೆಯರಲ್ಲಿ ಏಡ್ಸ್​​

World AIDS Day 2019
ಇಂದು ವಿಶ್ವ ಏಡ್ಸ್ ದಿನ
ಪ್ರತಿ ವಾರ 15-24 ವಯಸ್ಸಿನೊಳಗಿನ 6 ಸಾವಿರ ಯುವತಿಯರು ವಿಶ್ವದಾದ್ಯಂತ ಈ ಕಾಯಿಲೆಗೆ ಒಳಗಾಗುತ್ತಿದ್ದು, ಆಫ್ರಿಕಾದಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ. ಹೆಚ್‍ಐವಿ ಸೋಂಕು ತಡೆಗಟ್ಟಲು ಯಾವುದೇ ಲಸಿಕೆ ಇಲ್ಲ ಹಾಗೂ ಏಡ್ಸ್ ಗುಣಪಡಿಸಲಾಗುದು. ಆದರೆ ನಮಗೆ ನಾವೇ ಈ ಮಾರಕ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ. ರಕ್ತ, ವೀರ್ಯ ಅಥವಾ ಯೋನಿ ಸ್ರಾವ, ಎದೆ ಹಾಲು ಇತ್ಯಾದಿಗಳಿಂದ ಸೋಂಕುಗಳಿಗೆ ಒಳಗಾಗುವುದನ್ನು ತಪ್ಪಿಸುವ ಮೂಲಕ ಹಾಗೂ ಹೆಚ್‍ಐವಿ/ಏಡ್ಸ್ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಮೂಲಕ ಈ ಹೆಮ್ಮಾರಿಯನ್ನು ತಡೆಗಟ್ಟಬಹುದಾಗಿದೆ.

ಭಾರತದಲ್ಲಿ ಏಡ್ಸ್​ ಪತ್ತೆ
1987ರಲ್ಲಿ ಭಾರತದಲ್ಲಿ ಮೊದಲ ಏಡ್ಸ್ ಪ್ರಕರಣ ಪತ್ತೆಯಾಗಿದ್ದು, 1990ರಿಂದ ಗಂಭೀರವಾಗಿ ಪರಿಗಣಿಸಿದ ಭಾರತ ಸರ್ಕಾರ ಹಲವು ಸುರಕ್ಷಾ ಕ್ರಮ ಕೈಗೊಂಡಿದೆ. ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಇದರ ಪ್ರಮಾಣ ಕಡಿಮೆ ಆಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ತಿಳಿಸಿದೆ. ಕರ್ನಾಟಕ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಹೆಚ್‍ಐವಿ ಮತ್ತು ಏಡ್ಸ್ ರೋಗ ಪೀಡಿತರಿದ್ದಾರೆ. 2006ರಿಂದ ಸೋಂಕಿತರ ದೃಢೀಕರಣವಾಗಿರುವ ಪ್ರಕಾರ ART ಮಾತ್ರೆ ಪಡೆದುಕೊಳ್ಳುವರ ಸಂಖ್ಯೆ ಜಿಲ್ಲೆಯಲ್ಲಿ 14,994 ಇದ್ದು, ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ.

90:90:90 ಕಾರ್ಯತಂತ್ರ
2030ರೊಳಗೆ ಸಾಂಕ್ರಾಮಿಕ ರೋಗ ಏಡ್ಸ್​​ ಸಂಪೂರ್ಣ ಹತೋಟಿಗೆ ತರುವ ಉದ್ದೇಶದಿಂದ 90:90:90 ಕಾರ್ಯತಂತ್ರವನ್ನು ಕೇಂದ್ರ ಸರ್ಕಾರ ರೂಪಿಸಿದೆ. ಇದರ ಅರ್ಥ ಶೇ. 90 ದೇಶದ ಜನರಿಗೆ ಏಡ್ಸ್ ರೋಗದ ಬಗ್ಗೆ ಅರಿವು ಮೂಡಿಸುವುದು. ಶೇ. 90 ರಷ್ಟು ಹೆಚ್‍ಐವಿ ರೋಗದ ಸ್ಥಿತಿಯನ್ನು ಶೀಘ್ರವಾಗಿ ಗುರುತಿಸಿ ಎಆರ್​ಟಿ ಚಿಕಿತ್ಸೆ ನೀಡುವುದಾಗಿದೆ.

Intro:Body:

ಇಂದು ವಿಶ್ವ ಏಡ್ಸ್ ದಿನ: ಭಾರತದಲ್ಲಿ ಕಡಿಮೆಯಾದ HIV ಪ್ರಮಾಣ; ಏಡ್ಸ್ ನಗರಿಯಾದ ಪಾಕ್​! 

ನವದೆಹಲಿ: ಇಂದು ವಿಶ್ವ ಏಡ್ಸ್ ದಿನ. ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವದೆಲ್ಲೆಡೆ ಜನರಲ್ಲಿ ಹೆಚ್​ಐವಿ/ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ವಿಶ್ವ ಏಡ್ಸ್​​ ದಿನವನ್ನಾಗಿ ಆಚರಿಸಲಾಗುತ್ತಿದೆ. 

ಯುನೈಟೆಡ್​​ ನೇಷನ್ಸ್​​​ ನೀಡಿರುವ ಮಾಹಿತಿ ಪ್ರಕಾರ 2017ರಿಂದ ಭಾರತದಲ್ಲಿ ಇದರ ಪ್ರಮಾಣ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಪಕ್ಕದ ಪಾಕಿಸ್ತಾನದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದೆ ಎಂದು ವರದಿ ನಿಡಿದೆ. 

ಭಾರತದಲ್ಲಿ 2010ರಲ್ಲಿ 120,000 ದಿಂದ 2017ರಲ್ಲಿ 88,000ಕ್ಕೆ ಕಡಿಮೆಯಾಗಿದ್ದು ಇದೇ ವೇಳೆ ಏಡ್ಸ್​​​ನಿಂದ ಸಾವನ್ನಪ್ಪಿರುವವರ ಸಂಖ್ಯೆ ಸಹ 160,000 ರಿಂದ 69,000ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ. ಜಾಗತಿಕವಾಗಿ ಕಳೆದ ಏಳು ವರ್ಷಗಳಲ್ಲಿ ಶೇ.18ರಷ್ಟು ಮಾತ್ರ ಏಡ್ಸ್​ ಪ್ರಕರಣ ಕಡಿಮೆಯಾಗಿದ್ದು, 2010ರಲ್ಲಿ 2.2 ದಶಲಕ್ಷದಿಂದ 2017ರಲ್ಲಿ 1.8 ದಶಲಕ್ಷಕ್ಕೆ ಇಳಿದಿದೆ ಎಂದು ವರದಿಯಲ್ಲಿ ತಿಳಿಸಿದೆ. ​​​ 2017ರಲ್ಲಿ ವಿಶ್ವದಾದ್ಯಂತ 36.9 ಮಿಲಿಯನ್​ ಜನರು ಹೆಚ್​ಐವಿ ಪೀಡಿತರಾಗಿದ್ದು ಅದರಲ್ಲಿ 21.7 ಮಿಲಿಯನ್​ ಜನರು ಮಾತ್ರ ಚಿಕಿತ್ಸೆ ಪಡೆದುಕೊಂಡಿದ್ದಾರೆ. 

ಪ್ರಮುಖವಾಗಿ ಲೈಂಗಿಕ ಕಾರ್ಯಕರ್ತರು, ಸಲಿಂಗಕಾಮಿಗಳು, ಕೈದಿಗಳು, ವಲಸಿಗರು, ನಿರಾಶ್ರಿತರು ಈ ಕಾಯಿಲೆಗಳಿಗೆ ಹೆಚ್ಚಾಗಿ ಪೀಡಿತರಾಗುತ್ತಿದ್ದು, ಇವರು ಚಿಕಿತ್ಸೆಯಿಂದಲೂ ಹೊರಗುಳಿಯುತ್ತಿದ್ದಾರೆ. 

ಭಾರತದಲ್ಲಿ ಏಡ್ಸ್​ ನಿಯಂತ್ರಣ ಕಾರ್ಯದ ವೇಗ ಆಮೆಗತಿಯಲ್ಲಿ ಸಾಗುತ್ತಿದ್ದು, 2010ರಿಂದ 2017ರವರೆಗೆ ಭಾರತದಲ್ಲಿ ಕೇವಲ ಶೆ 27ಪ್ರತಿಶತದಷ್ಟು ಇಳಿಕೆಯಾಗಿದೆ. 

ಭಾರತದಲ್ಲಿ ಏಡ್ಸ್ ಅಂಕಿಅಂಶ

2017ರ ವರದಿ ಪ್ರಕಾರ (15-49 ವರ್ಷ) ಹೆಚ್‌ಐವಿ ಹರಡುವಿಕೆ ಪ್ರಮಾಣ 2017 ರಲ್ಲಿ 0.22% (0.16% - 0.30%), 2017 ರಲ್ಲಿ, ವಯಸ್ಕರ ಎಚ್‌ಐವಿ ಹರಡುವಿಕೆ 0.25% ಎಂದು ಅಂದಾಜಿಸಲಾಗಿದೆ (0.18-0.34) ಪುರುಷರಲ್ಲಿ ಮತ್ತು ಸ್ತ್ರೀಯರಲ್ಲಿ 0.19% (0.14-0.25). 2001-03ರಲ್ಲಿ ಅಂದಾಜು ಗರಿಷ್ಠ 0.38% ರಿಂದ 2007 ರಲ್ಲಿ 0.34%, 0.28% ರಷ್ಟಿದೆ. 2012 ರಲ್ಲಿ ಮತ್ತು 2015 ರಲ್ಲಿ 0.26% ರಿಂದ 2017 ರಲ್ಲಿ 0.22% ಇದರ ಪ್ರಮಾಣವಿದೆ. 2017ರ ವರದಿ ಪ್ರಕಾರ ಕರ್ನಾಟಕದಲ್ಲಿ 0.47ರಷ್ಟು ಇದರ ಪ್ರಮಾಣವಿತ್ತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಡ್ಸ್​ ಅಂಕಿಅಂಶ

2019ರ ಜೂನ್​ ವೇಳಗೆ 24.5 ಮಿಲಿಯನ್​ ಜನರು ಏಡ್ಸ್​​​ ತಪಾಸಣೆಗೆ ಒಳಗಾಗಿದ್ದು, 2018ರಲ್ಲಿ 37.9 ಮಿಲಿಯನ್​ ಜನರು ಈ ಕಾಯಿಲೆಗೆ ಒಳಗಾಗಿದ್ದು ಗೊತ್ತಾಗಿದೆ. 2018ರ ಮುಕ್ತಾಯದ ವೇಳೆಗೆ 32 ಮಿಲಿಯನ್​ ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.

2018ರಲ್ಲಿ ಒಟ್ಟು 37.9 ಮಿಲಿಯನ್​ ಜನರು ಏಡ್ಸ್​​ನೊಂದಿಗೆ ಹೋರಾಟ ನಡೆಸುವುದರ ಜತೆಗೆ ಜೀವನ ಸಾಗಿಸುತ್ತಿದ್ದು, ಇದರಲ್ಲಿ 31.3 ಕಡಿಮೆ ವಯಸ್ಸಿನವರಾಗಿದ್ದಾರೆ.

2018ರಲ್ಲಿ ಸುಮಾರು 770,000 ಜನರು ಏಡ್ಸ್​​ ಸಂಬಂಧಿತ ಕಾಯಿಲೆಯಿಂದ ಸಾವನ್ನಪ್ಪಿದ್ದು,2004ರಲ್ಲಿ 1.6 ಮಿಲಿಯನ್​ ಜನರು ಸಾವಿಗೀಡಾಗಿದ್ದಾರೆ. ಇನ್ನು ಪಾಕಿಸ್ತಾನದಲ್ಲಿ ಏಡ್ಸ್​ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿವೆ ಎಂದು ತಿಳಿದು ಬಂದಿದೆ.

ಮಹಿಳೆಯರಲ್ಲಿ ಏಡ್ಸ್​​

ಪ್ರತಿ ವಾರ 15-24 ವಯಸ್ಸಿನೊಳಗಿನ 6 ಸಾವಿರ ಯುವತಿಯರು ವಿಶ್ವದಾದ್ಯಂತ ಈ ಕಾಯಿಲೆಗೆ ಒಳಗಾಗುತ್ತಿದ್ದು,ಆಫ್ರಿಕಾದಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ. 

ಹೆಚ್‍ಐವಿ ಸೋಂಕು ತಡೆಗಟ್ಟಲು ಯಾವುದೇ ಲಸಿಕೆ ಇಲ್ಲ ಹಾಗೂ ಏಡ್ಸ್ ಗುಣಪಡಿಸಲಾಗುದು. ಆದರೆ ನಮಗೆ ನಾವೇ ಈ ಮಾರಕ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ. ರಕ್ತ, ವೀರ್ಯ ಅಥವಾ ಯೋನಿ ಸ್ರಾವ, ಎದೆ ಹಾಲು ಇತ್ಯಾದಿಗಳಿಂದ ಸೋಂಕುಗಳಿಗೆ ಒಳಗಾಗುವುದನ್ನು ತಪ್ಪಿಸುವ ಮೂಲಕ ಹಾಗೂ ಹೆಚ್‍ಐವಿ/ಏಡ್ಸ್ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಮೂಲಕ ಈ ಹೆಮ್ಮಾರಿಯನ್ನು ತಡೆಗಟ್ಟಬಹುದಾಗಿದೆ.

ಭಾರತದಲ್ಲಿ ಏಡ್ಸ್​ ಪತ್ತೆ

1987ರಲ್ಲಿ ಭಾರತದಲ್ಲಿ ಮೊದಲ ಏಡ್ಸ್ ಪ್ರಕರಣ ಪತ್ತೆಯಾಗಿದ್ದು, 1990ರಿಂದ ಗಂಭೀರವಾಗಿ ಪರಿಗಣಿಸಿದ ಭಾರತ ಸರ್ಕಾರ ಹಲವು ಸುರಕ್ಷಾ ಕ್ರಮ ಕೈಗೊಂಡಿದೆ. ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಇದರ ಪ್ರಮಾಣ ಕಡಿಮೆ ಆಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ತಿಳಿಸಿದೆ.

ಕರ್ನಾಟಕ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಹೆಚ್‍ಐವಿ ಮತ್ತು ಏಡ್ಸ್ ರೋಗ ಪೀಡಿತರಿದ್ದು, 2006ರಿಂದ ಸೋಂಕಿತರ ದೃಢೀಕರಣವಾಗಿರುವ ಪ್ರಕಾರ ART ಮಾತ್ರೆ ಪಡೆದುಕೊಳ್ಳುವರ ಸಂಖ್ಯೆ ಜಿಲ್ಲೆಯಲ್ಲಿ 14,994 ಇದ್ದು, ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ.

90:90:90 ಕಾರ್ಯತಂತ್ರ

2030ರೊಳಗೆ ಸಾಂಕ್ರಾಮಿಕ ರೋಗ ಏಡ್ಸ್​​ ಸಂಪೂರ್ಣ ಹತೋಟಿಗೆ ತರುವ ಉದ್ದೇಶದಿಂದ 90:90:90 ಕಾರ್ಯತಂತ್ರವನ್ನು ಕೇಂದ್ರ ಸರ್ಕಾರ ರೂಪಿಸಿದೆ. ಇದರ ಅರ್ಥ ಶೇ.90 ದೇಶದ ಜನರಿಗೆ ಏಡ್ಸ್ ರೋಗದ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಮೂಡಿಸುವುದು. ಶೇ.90 ರಷ್ಟು ಹೆಚ್‍ಐವಿ ರೋಗದ ಸ್ಥಿತಿಯನ್ನು ಶೀಘ್ರವಾಗಿ ಗುರುತಿಸಿ ಎಆರ್​ಟಿ ಚಿಕಿತ್ಸೆ ನೀಡುವುದಾಗಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.