ನವದೆಹಲಿ: ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವನ್ನು (ಎನ್‌ಡಿಎ) ತ್ಯಜಿಸಿರುವುದಾಗಿ ಹನುಮಾನ್ ಬೆನಿವಾಲ್ ನೇತೃತ್ವದ ರಾಷ್ಟ್ರೀಯ ಲೋಕ್ತಾಂತ್ರಿಕ್ ಪಕ್ಷ ಹೇಳಿದೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಶಹಜಹಾನ್ಪುರ್ - ಖೇಡಾ ಗಡಿಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಾನಾಗೌರ್ ಸಂಸದ ಹನುಮಾನ್ ಬೆನಿವಾಲ್ "ನಾವು ರೈತರ ವಿರುದ್ಧ ಯಾರೊಂದಿಗೂ ನಿಲ್ಲುವುದಿಲ್ಲ" ಎಂದು ಹೇಳಿದ್ದಾರೆ.
2018ರ ವಿಧಾನಸಭೆ ಚುನಾವಣೆಗೆ ಮೊದಲು ಬಿಜೆಪಿಯನ್ನು ತ್ಯಜಿಸಿದ ನಂತರ ರಾಜಸ್ಥಾನದಲ್ಲಿ ರಾಷ್ಟ್ರೀಯ ಲೋಕ್ತಾಂತ್ರಿಕ್ ಪಕ್ಷ (ಆರ್‌ಎಲ್‌ಪಿ) ಪ್ರಾರಂಭಿಸಿದ್ದರು. ಪಕ್ಷವು 2019 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಕೃಷಿ ಕಾನೂನುಗಳನ್ನು ಟೀಕಿಸಿದ್ದು, ರೈತರ ಆಂದೋಲನಕ್ಕೆ ಬೆಂಬಲ ನೀಡಿದೆ. ಶಿವಸೇನೆ ಮತ್ತು ಅಕಾಲಿ ದಳದ ನಂತರ ಇದೀಗ ಆರ್‌ಎಲ್‌ಪಿ ಕೂಡ ಎನ್‌ಡಿಎ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡಿದೆ.
-
भारत सरकार द्वारा लाये गए कृषि विरोधी बिलों के कारण आज @RLPINDIAorg पार्टी एनडीए के गठबंधन से अलग होने की घोषणा करती है !
— HANUMAN BENIWAL (@hanumanbeniwal) December 26, 2020 " class="align-text-top noRightClick twitterSection" data="
">भारत सरकार द्वारा लाये गए कृषि विरोधी बिलों के कारण आज @RLPINDIAorg पार्टी एनडीए के गठबंधन से अलग होने की घोषणा करती है !
— HANUMAN BENIWAL (@hanumanbeniwal) December 26, 2020भारत सरकार द्वारा लाये गए कृषि विरोधी बिलों के कारण आज @RLPINDIAorg पार्टी एनडीए के गठबंधन से अलग होने की घोषणा करती है !
— HANUMAN BENIWAL (@hanumanbeniwal) December 26, 2020
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸೆಪ್ಟೆಂಬರ್‌ನಲ್ಲಿ ಜಾರಿಗೆ ತಂದ ಕೃಷಿ ಕಾನೂನುಗಳನ್ನು ಅಲ್ಪ ಚರ್ಚೆಯೊಂದಿಗೆ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಹಲವಾರು ರಾಜ್ಯಗಳ ಸಾವಿರಾರು ರೈತರು ಒಂದು ತಿಂಗಳಿನಿಂದ ನವದೆಹಲಿಯ ಹೊರವಲಯದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಈಗಾಗಲೇ ಪ್ರಧಾನಿ ಮೋದಿ ಕೂಡ ಕೃಷಿ ಮಸೂದೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದು, ರೈತರಿಗೆ ಯಾವುದೇ ತೊಂದರೆಗಳು ಎದುರಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಪ್ರತಿಭಟನೆಗಳು ರಾಜಕೀಯ ಪ್ರೇರಿತವಾಗಿವೆ ಮತ್ತು ಕೆಲವು ಜನರು ರೈತರಿಗೆ ತೊಂದರೆ ಉಂಟಾಗಲಿದೆ ಎಂದು ಸುಳ್ಳು ಮತ್ತು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಹೇಳಿದ್ದಾರೆ.